39.4 C
ಪುತ್ತೂರು, ಬೆಳ್ತಂಗಡಿ
April 9, 2025
ಅಪರಾಧ ಸುದ್ದಿ

ಪಟ್ರಮೆ ಪಟ್ಟೂರಿನ ನೆರೆಕರೆಯ ಇಬ್ಬರು ಯುವತಿಯರು ಮೃತ್ಯು: ಆತ್ಮಹತ್ಯೆ ಮಾಡಿಕೊಂಡ ಶಂಕೆ : ಮುಂದುವರಿದ ಪೊಲೀಸರ ತನಿಖೆ

ರಕ್ಷಿತಾ

ಲಾವಣ್ಯ

ಪಟ್ರಮೆ : ಹೊಟ್ಟೆನೋವಿನಿಂದ ನರಳಿ ಆಸ್ಪತ್ರೆಗೆ ದಾಖಲಾದ ನೆರೆಕರೆಯ ಮನೆಯ ಇಬ್ಬರು ಯುವತಿಯರು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.

ಪಟ್ರಮೆ ಗ್ರಾಮದ ಪಟ್ಟೂರು ಬಾಬು ಎಂಬವರ ಪುತ್ರಿ ರಕ್ಷಿತಾ ( 22ವ) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಮೃತಪಟ್ಟರೆ, ಅವರ ಮನೆರೆಯಮನೆಯವರಾದ ಶ್ರೀನಿವಾಸ ಆಚಾರ್ಯ ಎಂಬವರ ಪುತ್ರಿ ಲಾವಣ್ಯ (21ವ) ಸುರತ್ಕಲ್ ಆಸ್ಪತ್ರೆಯಲ್ಲಿ ಮಧ್ಯಾಹ್ನ ಮೃತಪಟ್ಟರೆನ್ನಲಾಗಿದೆ. ಇವರಿಬ್ಬರು ಸೇವಾ ಪ್ರತಿನಿಧಿಯಾಗಿ ಕೆಲ ಸಮಯಗಳಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದರು.
ಎ.4ರಂದು ಸಂಜೆ ರಕ್ಷಿತಾ ಮತ್ತು ಲಾವಣ್ಯ ತಮ್ಮ ಮನೆಯಲ್ಲಿ ಹೊಟ್ಟೆ ನೋವೆಂದು ನರಳಾಡಿ ತೀವ್ರ ಅಸ್ವಸ್ಥಗೊಂಡಿದ್ದರು. ಇವರಿಬ್ಬರನ್ನು ಸ್ಥಳೀಯರ ಸಹಕಾರದಲ್ಲಿ ನೆಲ್ಯಾಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ರಕ್ಷಿತಾ ಅವರನ್ನು ಅವರ ಮನೆಯವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಲಾವಣ್ಯರನ್ನು ಅವರ ಮನೆಯವರು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಯ ವೈದ್ಯರ ಸಲಹೆಯಂತೆ ಸುರತ್ಕಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಕ್ಷಿತಾ ಅವರು ಎ.6 ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಲಾವಣ್ಯ ಇಂದು ಮಧ್ಯಾಹ್ನ ಸುರತ್ಕಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರಿಬ್ಬರೂ ಪಟ್ಟೂರಿನಲ್ಲಿ ನೆರೆಕರೆಯವರೋಗಿದ್ದ. ಇವರ ಸಾವಿಗೆ ಕಾರಣ ಏನು ಕಾರಣ ಎಂದು ಸ್ವಷ್ಟಗೊಂಡಿಲ್ಲ. ಈ ಬಗ್ಗೆ ವೈದ್ಯಕೀಯ ವರದಿ ಬಂದ ನಂತರವಷ್ಟೇ ತಿಳಿದು ಬರಬೇಕಾಗಿದೆ. ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರ
ಬಹುದೆಂದು ಶಂಕಿಸಲಾಗಿದೆ.
ಪೊಲೀಸ್ ರು ತನಿಖೆ ನಡೆಸುತ್ತಿದ್ದು, ಸ್ವಷ್ಟ ಕಾರಣ ಬೆಳಕಿಗೆ ಬರಬೇಕಾಗಿದೆ.

Related posts

ತೆಂಕುತಿಟ್ಟಿನ ಖ್ಯಾತ ಭಾಗವತ ಮಹೇಶ್ ಕನ್ಯಾಡಿಯವರ ಮೊಬೈಲ್ ಕಳವು

Suddi Udaya

ಸುಲ್ಕೇರಿ ಗ್ರಾಮ ಪಂಚಾಯತ್ ಕಚೇರಿಬೀಗ ಮುರಿದು ಕಳ್ಳತನಕ್ಕೆ ಯತ್ನ

Suddi Udaya

ಆರು ಜನ ನಕ್ಸಲರು ಶರಣಾಗತಿ ಬೆನ್ನಲ್ಲೇ ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಪತ್ತೆ

Suddi Udaya

ತುಮಕೂರು ಕುಚ್ಚಂಗಿ ಕೆರೆಯ ಬಳಿ ಮೂವರ ಶವ ಸುಟ್ಟು ಹೋದ ರೀತಿಯಲ್ಲಿ ಪತ್ತೆ: ಮೂವರು ಬೆಳ್ತಂಗಡಿ ತಾಲೂಕಿನಿಂದ ನಾಪತ್ತೆಯಾದವರದ್ದು ಇರಬಹುದೆಂಬ ಶಂಕೆ

Suddi Udaya

ತೋಟಾತ್ತಾಡಿ:ಜುಗಾರಿ ಅಡ್ಡೆಗೆ ಪೊಲೀಸರ ದಾಳಿ

Suddi Udaya

ಕಡಿರುದ್ಯಾವರ :ಎರ್ಮಾಲ್ ಪಲ್ಕೆ ಸರಕಾರಿ ಬಾವಿಯಲ್ಲಿ ಪತ್ತೆಯಾದ ಶವ

Suddi Udaya
error: Content is protected !!