ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ, ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಬೇಸಿಗೆ ಶಿಬಿರವು ನಡೆಯಿತು.
ಬೇಸಿಗೆ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿದ ಪತ್ರಕರ್ತರ ಸಂಘದ ಅಧ್ಯಕ್ಷ ರಿಷಿಕೇಶ್ ಧರ್ಮಸ್ಥಳರವರು ಮಾತಾಡಿ ಮಕ್ಕಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಪುಸ್ತಕ ಓದುವಿಕೆ ಇಂಥ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ ಜ್ಞಾನವನ್ನು ವೃದ್ಧಿ ಪಡಿಸಿಕೊಳ್ಳಬೇಕು ಹಾಗೆ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಉದಯವಾಣಿ ಪತ್ರಿಕೆಯ ವರದಿಗಾರ ಚೈತ್ರೇಶ್ ಇಳಂತಿಲರವರು ಮಕ್ಕಳಿಗೆ ಪತ್ರಿಕೆಯ ಬಗ್ಗೆ ವಿವರಿಸಿದರು. ಮಕ್ಕಳಲ್ಲಿ ಪತ್ರಿಕೆ ಓದುವುದರಿಂದ ಆಂತರಿಕ ಜ್ಞಾನವು ವೃದ್ಧಿಯಾಗುವುದು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಅಧ್ಯಕ್ಷ ಹೆಚ್ ಪದ್ಮ ಕುಮಾರ್, ಕಾರ್ಯದರ್ಶಿ ಪ್ರಮೀಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ದ್ವಿತೀಯ ಬಿ ಕಾಂನ ರೋವರ್ ವಿದ್ಯಾರ್ಥಿಗಳಾದ ಜಿ ಸಿ ಸುಚಿತ್ ಹಾಗೂ ಶಿವನ್ ಕೆ ಸಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಸ್ಕೌಟ್ ಗೈಡ್ ಧ್ವಜ, ಹಾಗೂ ಗಂಟುಗಳು, ಸ್ಕೌಟ್ ಗೈಡ್ಸ್ ನ ಮೂಲಭೂತ ತತ್ವಗಳ ಬಗ್ಗೆ ತಿಳಿಸಿದರು.
ಸ್ಕೌಟ್ ವಿದ್ಯಾರ್ಥಿಯಾದ ಜಯದೀಪ್ ಹಾಗೂ ಪ್ರಾಪ್ತಿ ವಿ ಶೆಟ್ಟಿ ನಿರೂಪಿಸಿ, ಸ್ಕೌಟ್ ವಿದ್ಯಾರ್ಥಿ ರಕ್ಷಣ್ ಶೆಟ್ಟಿ ವಂದಿಸಿ ಗೈಡ್ ವಿದ್ಯಾರ್ಥಿ ತೃಪ್ತಿ ಬಿ.ಜಿ ಧನ್ಯವಾದವಿತ್ತರು.
ಬೇಸಿಗೆ ಶಿಬಿರದ ನೇತೃತ್ವವನ್ನು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಗೈಡ್ ಸಂಯೋಜಕ ಶಿಕ್ಷಕಿ ಶ್ರೀಮತಿ ಪ್ರಮೀಳಾ ಕಾರ್ಯಕ್ರಮವನ್ನು ಸಂಘಟಿಸಿದರು.