April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಅಳದಂಗಡಿ ವಲಯ ವಾರ್ಷಿಕ ಮಹಾಸಭೆ

ಅಳದಂಗಡಿ : ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಅಳದಂಗಡಿ ವಲಯದ ವಾರ್ಷಿಕ ಮಹಾಸಭೆಯು ಕ್ಷೇತ್ರ ಸಮಿತಿಯ ಸಹಕಾರದೊಂದಿಗೆ ಎ.4 ರಂದು ನಮನ ಸಭಾಭವನ ದಲ್ಲಿ ವಲಯದ ಅಧ್ಯಕ್ಷರಾದ ಹರೀಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷರು ವೇದಾವತಿ ಜನಾರ್ಧನ ಇವರು ಮಾತನಾಡಿ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಇದರ ಪ್ರಯೋಜನ ಪಡೆಯುವಂತೆ ವಿನಂತಿಸಿದರು ಹಾಗೂ ಹಲವು ಜನರಿಗೆ ಉಚಿತವಾಗಿ ಮಿಷಿನ್ ದೊರೆತಿರುವುದು ನಮ್ಮ ಟೈಲರ್ ಸಂಘಟನೆಯ ಶ್ರಮದಿಂದ ಎಂದು ತಿಳಿಸಿದರು. ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಉಜಿರೆ ಜಿಲ್ಲಾ ಸಮಿತಿ ಸದಸ್ಯರು ವಸಂತ ಬೆಳ್ತಂಗಡಿ ಮತ್ತು ರಾಜು ಪೂಜಾರಿ ಅಳದಂಗಡಿ ವಲಯದ ಕಾರ್ಯದರ್ಶಿ ಲೆನ್ಸಿ ಡಿ ಸೋಜ, ಮಾಜಿ ಅಧ್ಯಕ್ಷರು ವಿಮಲ, ಅಳದಂಗಡಿ ನಿತ್ಯಾನಂದ ಬಳೆಂಜ, ಮೋಹನ್ ದಾಸ್ ಅಳದಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ 30 ಜನರಿಗೆ ಗುರುತಿನ ಕಾರ್ಡ್ ವಿತರಣೆ ಮಾಡಲಾಯಿತು. ಹೊಸ ಸದಸ್ಯರ ನೊಂದಾವಣೆ 15 ಹಾಗೂ ನವೀಕರಣ 32 ಮಾಡಲಾಯಿತು, ಹಾಲಿ ಅಧ್ಯಕ್ಷರು ಹರೀಶ್ ಹೆಚ್.ಪಿ ಟೈಲರ್ ಅಳದಂಗಡಿ, ಕಾರ್ಯದರ್ಶಿಯಾಗಿ
ಲೆನ್ಸಿ ಡಿಸೋಜಾ ಡಿಸೋಜ ಟೈಲರ್ ಅಳದಂಗಡಿ ಇವರನ್ನು ಮುಂದಿನ ಎರಡು ವರ್ಷದ ಅವಧಿಗೆ ವೃತ್ತಿಬಾಂಧವರ ಸೂಚನೆ ಹಾಗೂ ಅನುಮೋದನೆ ಯೊಂದಿಗೆ ಮರು ಆಯ್ಕೆ ಮಾಡಲಾಯಿತು. ಜೊತೆ ಕಾರ್ಯದರ್ಶಿ ನಾರಾಯಣ ಶಿರ್ಲಾಲು, ಕೋಶಾಧಿಕಾರಿಯಾಗಿ ಕುಮಾರಿ ಚಂದ್ರಿಕಾ ಬಂಗೇರ, ಸಂಘಟನಾ ಕಾರ್ಯದರ್ಶಿಗಳು , ಶಾಂತಿ ಸುಲ್ಕೇರಿಮೋಗ್ರು, ಸಂದೇಶ್ ಕೆದ್ದು, ರೇಖಾ ಶೆಟ್ಟಿ ಅಳದಂಗಡಿ ಸಕೀತ ಪಿಲ್ಯ ಹರೀಶ್ ಬಳೆಂಜ ಇವರನ್ನು ಆಯ್ಕೆ ಮಾಡಲಾಯಿತು., ಅಳದಂಗಡಿ ವಲಯದಿಂದ ತಾಲೂಕು ಸಮಿತಿಗೆ ವಿನುಷ ಪ್ರಕಾಶ್ ಅಳದಂಗಡಿ ,ಮೋಹನ್ ದಾಸ್ ಅಳದಂಗಡಿ ಜನಿತ ಕುದ್ಯಾಡಿ ,ನಿತ್ಯಾನಂದ ಬಳೆಂಜ, ರಾಜು ಪೂಜಾರಿ ಅಳದಂಗಡಿ, ಉಪಾಧ್ಯಕ್ಷರಾಗಿ ಜಗನ್ನಾಥ ಸುಲ್ಕೇರಿ ಮೋಗ್ರು , ರೇವತಿ ಸುಲ್ಕೇರಿ ಮೋಗ್ರು, ಇವರನ್ನು ಆಯ್ಕೆ ಮಾಡಲಾಯಿತು,

ಸಭೆಯಲ್ಲಿ ಅಳದಂಗಡಿ ವಲಯದ 60 ಮಂದಿ ಟೈಲರ್ ವ್ರತ್ತಿ ಭಾಂದವರು ಭಾಗವಹಿಸಿದರು.
ಮೋಹನ್ ದಾಸ್ ನಿರೂಪಿಸಿ, ರಾಜು ಪೂಜಾರಿ ಸ್ವಾಗತಿಸಿದರು, ನಿತ್ಯಾನಂದ ಬಳೆಂಜ ಧನ್ಯವಾದವಿತ್ತರು.

Related posts

ಹಿರಿಯ ಮೀನು ವ್ಯಾಪಾರಿ, ಚಾರ್ಮಾಡಿ ಗ್ರಾ.ಪಂ ಮಾಜಿ ಸದಸ್ಯ ಜಿ.ಕೆ ಅಹ್ಮದ್‌ ಕುಂಞಿ(ಮೀನ್ ಮೋಣಾಕ) ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಿಧನ

Suddi Udaya

ಬದ್ಯಾರು ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮಾಗಣೆ ಗೌಡ, ಊರ ಗೌಡ ಮತ್ತು ಒತ್ತು ಗೌಡರ ಸಮಾವೇಶ ಮತ್ತು ಸನ್ಮಾನ ಸಮಾರಂಭ

Suddi Udaya

ಉರುವಾಲು ಕಾರಿಂಜ ಬಾಕಿಮಾರು ದೈವಸ್ಥಾನದ “ಕಾರಿಂಜ ಶ್ರೀ ಕಲ್ಕುಡ” ಧ್ವನಿ ಸುರುಳಿ ಬಿಡುಗಡೆ

Suddi Udaya

ಉಜಿರೆ ಡಾ| ಅನಿತಾ ದಯಾಕರ್ ರವರಿಗೆ ಪಿ.ಎಚ್.ಡಿ ಪದವಿ ಪ್ರದಾನ

Suddi Udaya

ಹರೀಶ್ ಪೂಂಜ ಗೆಲುವು: ಮುಗೇರಡ್ಕದಲ್ಲಿ ಸಂಭ್ರಮಾಚರಣೆ

Suddi Udaya
error: Content is protected !!