30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಕರ್ನಾಟಕ ರಾಜ್ಯ ಅಮೆಚೂರು ಸಂಸ್ಥೆ ರಾಜ್ಯ ತೀರ್ಪುಗಾರರ ಮಂಡಳಿಯ ಸಂಚಾಲಕರಾಗಿ ಪ್ರಭಾಕರ್ ನಾರಾವಿ ಆಯ್ಕೆ

ನಾರಾವಿ: ಕರ್ನಾಟಕ ರಾಜ್ಯ ಅಮೇಚೂರು ಸಂಸ್ಥೆ ಬೆಂಗಳೂರು, ಕರ್ನಾಟಕ ರಾಜ್ಯ ತೀರ್ಪುಗಾರರ ಮಂಡಳಿ ಬೆಂಗಳೂರು ಹಾಗೂ ಕಂಠೀರವ ಕ್ರೀಡಾಂಗಣ ಬೆಂಗಳೂರು ಇದರ ವತಿಯಿಂದ ಪ್ರಭಾಕರ್ ನಾರಾವಿ ರವರನ್ನು ರಾಜ್ಯ ಅಮೆಚೂರ್ ಸಂಸ್ಥೆ ಬೆಂಗಳೂರಿನ ತೀರ್ಪುಗಾರರ ಮಂಡಳಿಯ ರಾಜ್ಯ ಸಂಚಾಲಕರನ್ನಾಗಿ ಆಯ್ಕೆಮಾಡಿದ್ದಾರೆ.
ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ, ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷರಾಗಿ, ತಾಲೂಕು ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷರಾಗಿ, ದ.ಕ. ಜಿಲ್ಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರತಿನಿಧಿಯಾಗಿ, ಪ್ರಸ್ತುತ ನಾರಾವಿ ಉನ್ನತೀಕರಿಸಿದ ಮಾಧ್ಯಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಹಾಗೂ ಕಳೆದ 10 ವರ್ಷಗಳಿಂದ ತಾಲೂಕು ಯುವ ಸಬಲೀಕರಣ ಕ್ರೀಡಾ ಇಲಾಖೆಯ ಕ್ರೀಡಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.
23 ವರ್ಷ ತೀರ್ಪುಗಾರಿಕೆಯ ಅನುಭವ ಹಾಗೂ ತಮ್ಮ ಸಂಘಟನಾ ಅನುಭವದ ಮೇರೆಗೆ ಇಂದು ರಾಜ್ಯ ಮಟ್ಟದ ತೀರ್ಪುಗಾರರ ಮಂಡಳಿಯ ರಾಜ್ಯ ಸಂಚಾಲಕರಾಗಿ 5 ಜಿಲ್ಲೆಯ ಉಸ್ತುವಾರಿಯಾಗಿ ಆಯ್ಕೆಯಾಗಿದ್ದಾರೆ.

Related posts

ಬೆಳ್ತಂಗಡಿ ಪ.ಪಂ. ಮುಖ್ಯಾಧಿಕಾರಿಯಾಗಿ ರಾಜೇಶ್ ಮರು ನೇಮಕ

Suddi Udaya

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಮಡಂತ್ಯಾರು ಗ್ರಾ.ಪಂ. ನಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya

ಕಳೆಂಜ ಗ್ರಾ.ಪಂ. ನ ದ್ವಿತೀಯ ಹಂತದ ಗ್ರಾಮಸಭೆ

Suddi Udaya

ಕಳೆಂಜ ಶ್ರೀ ಸದಾಶಿವ ದೇವಸ್ಥಾನದ ಶ್ರೀ ಶಾಸ್ತರ ದೇವರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ರೆಖ್ಯ ಸರಕಾರಿ ಶಾಲೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೈತೋಟ ರಚನೆ

Suddi Udaya
error: Content is protected !!