ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ ಉಜಿರೆಯ ಸುಶ್ಮಿತಾ ರಾವ್ ಉನ್ನತ ಶ್ರೇಣಿ

Suddi Udaya

Updated on:

ಬೆಳ್ತಂಗಡಿ: 2022-23ನೇ ಸಾಲಿನಲ್ಲಿ ನಡೆದ ಭರತನಾಟ್ಯ ವಿದ್ವತ್ ಪರೀಕ್ಷೆಯಲ್ಲಿ  ಉಜಿರೆಯ ಸುಶ್ಮಿತಾ ರಾವ್‌  75.8 ಶೇ  ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಮಂಗಳೂರಿನ  ಉರ್ವದ ನಾಟ್ಯಾರಾಧನಾ ಕಲಾ ಕೇಂದ್ರದ ಗುರು ವಿದ್ವಾನ್ ಸುಮಂಗಲಾ ರತ್ನಾಕರ ರಾವ್ ಇವರ ಶಿಷ್ಯೆ.
       ಇವರು ಸುರತ್ಕಲ್ ನ  ಬಿ.‍ಎಸ್ . ನಾರಾಯಣ ಹಾಗೂ ಬಿ. ಸುಲೋಚನ ಅವರ ಸುಪುತ್ರಿ., ಉಜಿರೆಯ ಮನು ಎಂ. ರಾವ್ ಅವರ ಪತ್ನಿ ಹಾಗೂ ಉಜಿರೆಯ  ನಿವೃತ್ತ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಪಿ .ಎನ್. ಮೋಹನ್  ಕೆದಿಲಾಯ  ಮತ್ತು ಸರೋಜ ಕೆದಿಲಾಯ ಅವರ ಸೊಸೆ. ಅವರು  ಬೆಂಗಳೂರಿನ ಪ್ರತಿಷ್ಠಿತ ಐ ಟಿ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Comment

error: Content is protected !!