24.7 C
ಪುತ್ತೂರು, ಬೆಳ್ತಂಗಡಿ
May 17, 2025
ಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಎಸ್ ಡಿ ಯಂ ಪಾಲಿಟೆಕ್ನಿಕ್ ನಲ್ಲಿ ಯುವ ರೆಡ್ ಕ್ರಾಸ್ ಘಟಕ ಹಾಗೂಎನ್.ಎಸ್.ಎಸ್ ಸಹಯೋಗದಲ್ಲಿ ಸಂಚಾರಿ ನಿಯಮಗಳ ಮಾಹಿತಿ

ಉಜಿರೆ: ಇಲ್ಲಿಯ ಎಸ್ ಡಿ ಯಂ ಪಾಲಿಟೆಕ್ನಿಕ್ ಯುವ ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನದ ಪ್ರಯುಕ್ತ ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಎ.11 ರಂದು ಹಮ್ಮಿಕೊಳ್ಳಲಾಯಿತು.


ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂತೋಷ್ ಮೋಟಾರ್ ವಾಹನ ಚಾಲನೆಯ ನಿಯಮಗಳು, ಚಾಲನಾ ಪರವಾನಗಿ, ಹೆಲ್ಮೆಟ್, ಸೀಟ್ ಬೆಲ್ಟ್ ಹಾಗೂ ಸುರಕ್ಷತೆಯ ಕುರಿತಾಗಿ ಮಾಹಿತಿಯನ್ನು ನೀಡಿದರು.


ಸಮಾರಂಭದಲ್ಲಿ ಪ್ರಾಂಶುಪಾಲರಾದ ಸಂತೋಷ್, ವೈ.ಆರ್.ಸಿ ಕಾರ್ಯಕ್ರಮಾಧಿಕಾರಿ ಅವನೀಶ್.ಪಿ, ಎನ್.ಯಸ್.ಯಸ್ ಕಾರ್ಯಕ್ರಮಾಧಿಕಾರಿ ಅಶ್ವಿನ್ ಮರಾಠೆ ಉಪಸ್ಥಿತರಿದ್ದರು.

ಚಿರಂತನ್ ಭಟ್ ಸ್ವಾಗತಿಸಿ, ಸ್ಪೂರ್ತಿ ವಂದಿಸಿದರು. ರಾಧಿಕಾ ಕಾರ್ಯಕ್ರಮ ನಿರ್ವಹಿಸಿದರು.

Related posts

ಮಚ್ಚಿನ ಕೃಷಿ ಇಲಾಖೆ ಆಶ್ರಯದಲ್ಲಿ ತಾಲೂಕು ಮಟ್ಟದ ಜಲಾನಯನ ಯಾತ್ರೆ-ಜಾಥಾ , ರಂಗೋಲಿ , ತೆಂಗಿನಕಾಯಿ ಸಿಪ್ಪೆ ಸುಲಿಯುವ ಸ್ಪರ್ಧೆ – ಪ್ರತಿಜ್ಞಾವಿಧಿ ಬೋಧನೆ

Suddi Udaya

ಪಾರಸ್ ಪೃಥ್ವಿ ಜುವೆಲ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ “ಮಹಾಪರ್ವ” ರಿಯಾಯಿತಿ ಮೇಳ

Suddi Udaya

ಮೇಲಂತಬೆಟ್ಟು ಪಾಲೆತ್ತಾಡಿಗುತ್ತು ಶ್ರೀ ಬ್ರಹ್ಮ ಬೈದರ್ಕಳ ಧರ್ಮಚಾವಡಿ ಜೀರ್ಣೋದ್ಧಾರ ಸಮಿತಿ ರಚನೆ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ವಿವಿಧ ಉಚಿತ ತರಬೇತಿಗಳಿಗೆ ಅರ್ಜಿ ಆಹ್ವಾನ

Suddi Udaya

ನಡ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಹರೀಶ್ ಪೂಂಜ ಬೃಹತ್ ಗೆಲುವು: ನಾರಾವಿಯಲ್ಲಿ ವಿಜಯೋತ್ಸವ

Suddi Udaya
error: Content is protected !!