April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆಜಿಲ್ಲಾ ಸುದ್ದಿತಾಲೂಕು ಸುದ್ದಿ

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್ ಪೂಂಜ:ತಾಲ್ಲೂಕಿನಾದ್ಯಾಂತ ಸಂಘಟನಾತ್ಮಕ ಪ್ರವಾಸ – 65ಕ್ಕೂ ಅಧಿಕಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿ, ಕಾಯ೯ಕತ೯ರ ಸಭೆ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್ ಪೂಂಜಾ ಅವರು ತಾಲ್ಲೂಕಿನಾದ್ಯಾಂತ ಸಂಘಟನಾತ್ಮಕ ಪ್ರವಾಸ ಕೈಗೊಂಡಿದ್ದು ಬಿಜೆಪಿ ಮಂಡಲ ಪದಾಧಿಕಾರಿಗಳೊಂದಿಗೆ ವಿಧಾನಸಭಾ ಚುನಾವಣೆ-2023ರ ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ.

ಎ.12.ರಿಂದ ಎ 14ವರೆಗೆ 65ಕ್ಕೂ ಅಧಿಕಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ನಾರಾವಿ ಶ್ರೀಸೂರ್ಯನಾರಾಯಣ ದೇವರಿಗೆ ಕೈಮುಗಿದು, ತೀರ್ಥ ಪ್ರಸಾದ ಸ್ವೀಕರಿಸಿ, ನಾರಾವಿ ಶಕ್ತಿಕೇಂದ್ರದಿಂದಲೇ ಪ್ರವಾಸ ಆರಂಭಿಸಿ ಕುತ್ಲೂರು, ಸುಲ್ಕೇರಿ, ಕೊಕ್ರಾಡಿ, ಅಂಡಿಂಜೆ, ಸಾವ್ಯ ಪೆರಾಡಿ, ಮರೋಡಿ, ಕಾಶಿಪಟ್ಟ ಬಡಕೋಡಿ, ಹೊಸಂಗಡಿ, ಆರಂಬೋಡಿ, ವೇಣೂರು, ಕರಿಮಣೇಲು ,ಮೂಡುಕೋಡಿ, ಕುಕ್ಕೇಡಿ, ನಿಟ್ಟಡೆ, ಗರ್ಡಾಡಿ,ಪಿಲ್ಯ, ಕುದ್ಯಾಡಿ, ನಾವರ, ಪಡಂಗಡಿ, ನಾಲ್ಕೂರು, ಬಜಿರೆ, ತೆಂಕಕಾರಂದೂರು, ಬಡಗಕಾರಂದೂರು ಶಕ್ತಿಕೇಂದ್ರಗಳ ಸಭೆ ನಡೆಸಿದರು.

ಎ.13 ರಂದು ಶಿಬಾಜೆ ಅರಸಿನಮಕ್ಕಿ,ಶಿಶಿಲ, ರೆಖ್ಯಾ ಗುಂಡೂರಿ, ಪಟ್ರಮೆ, ಕೊಕ್ಕಡ, ಕಳೆಂಜ, ನಿಡ್ಲೆ ಪುದುವೆಟ್ಟು, ನೆರಿಯ, ಚಿಬಿದ್ರೆ ತೊಟತ್ತಾಡಿ, ಚಾರ್ಮಾಡಿ, ಮುಂಡಾಜೆ ಉಜಿರೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ,ಇಂದಬೆಟ್ಟು, ನಾವೂರು ಶಕ್ತಿ ಕೇಂದ್ರಗಳ ಸಭೆ ನಡೆಸಿದರು.

ಎ 14 ರಂದು ಸೋಣಂದೂರು, ಮಾಲಾಡಿ, ಕುಕ್ಕಳ, ನಡ, ಧರ್ಮಸ್ಥಳ, ನಡ, ಕನ್ಯಾಡಿ, ಲಾಯಿಲ, ಕೊಯ್ಯೂರು, ಬೆಳಾಲು, ಪಾರೆಂಕಿ, ಮಚ್ಚಿನ ತಣ್ಣೀರುಪಂಥ, ಪುತ್ತಿಲ,ಬಾರ್ಯ ಶಕ್ತಿಕೇಂದ್ರಗಳ ಸಭೆ ನಡೆಸಿದರು.ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ ಅವರು ಸಂಘಟನಾತ್ಮಕ ಪ್ರವಾಸ ಕೈಗೊಂಡು ಪಕ್ಷವನ್ನು ಅತ್ಯಂತ ಹೆಚ್ಚಿನ ಮತಗ ಅಂತರದಿಂದ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಶಕ್ತಿ ಕೇಂದ್ರಗಳ ಪ್ರವಾಸದಾದ್ಯಂತ ಅನ್ಯಪಕ್ಷಗಳ ಅನೇಕ ಕಾರ್ಯಕರ್ತರು, ನಾಯಕರು ಶಾಸಕ ಹರೀಶ್ ಪೂಂಜರ ಅವರು ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಬಿಜೆಪಿ ಪಕ್ಷದ ತತ್ವಸಿದ್ಧಾಂತಗಳನ್ನು ಒಪ್ಪಿ ಬಿಜೆಪಿಗೆ ಸೇರ್ಪಡೆಗೊಂಡರು. ಬಡಕೋಡಿ ಗ್ರಾಮದ ರವಿನಾಯ್ಕ ಮೂಡುಕೋಡಿ ಗ್ರಾಮದ ಜಯರಾಮ್, ಸುಧಾಕರ್ ಅವರನ್ನು ಹರೀಶ್ ಪೂಂಜಾ ಅವರು ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅವರೊಂದಿಗೆ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

ಶಕ್ತಿ ಕೇಂದ್ರಗಳ ಸಭೆಯಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಜಯಂತ್‌ ಕೋಟ್ಯಾನ್, ಬಿಜೆಪಿ ದಕ ಜಿಲ್ಲಾ ಉಪಾಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ, ಕೊರಗಪ್ಪ ನಾಯ್ಕ ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷರಾದ ಚೆನ್ನಕೇಶವ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾಅಧ್ಯಕ್ಷರಾದ ಜೋಯಲ್‌ ಮೆಂಡೋನ್ಸ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್‌ ರಾವ್, ಗಣೇಶ್‌ ನಾವೂರು, ಉಪಾಧ್ಯಕ್ಷರಾದ ಸೀತಾರಾಮ್‌ ಬೆಳಾಲು, ಕೊರಗಪ್ಪಗೌಡ ಹಾಗೂ ಪಕ್ಷದ ಮಹಾಶಕ್ತಿಕೇಂದ್ರ, ಶಕ್ತಿ ಕೇಂದ್ರ ಬೂತ್‌ ಮಟ್ಟದ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Related posts

ಕುತ್ಲೂರು ಉನ್ನತೀಕರಿಸಿದ ಸರಕಾರಿ ಶಾಲೆಯ ತೋಟ ಲೋಕಾರ್ಪಣೆ: ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ ಅಗತ್ಯ-ಹರೇಕಳ ಹಾಜಬ್ಬ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ನೂತನ ನಾಯಕರ ಪದಗ್ರಹಣ ಮತ್ತು ಪ್ರಮಾಣವಚನ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ. ಹಿ.ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ರೆಖ್ಯಾ: ಮಕ್ಕಳ ಕುಣಿತ ಭಜನಾ ಸಮಾರೋಪದ ಉದ್ಘಾಟನಾ ಸಮಾರಂಭ

Suddi Udaya

ಅನಾರು ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವ: ತೋರಣ ಮುಹೂರ್ತ, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಕ್ಯಾಲೆಂಡರ್ ಬಿಡುಗಡೆ

Suddi Udaya

ಕಳಿಯ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಗ್ರಾಮ ಸಭೆ

Suddi Udaya
error: Content is protected !!