ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನಲ್ ಸೊಸೈಟಿ ಉಜಿರೆ ಇದರ ವತಿಯಿಂದ
33 ಮಂದಿ ನಿವೃತ್ತ ಸಿಬ್ಬಂದಿಗಳಿಗೆ ಸನ್ಮಾನ ಮತ್ತು ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮವು ಎ.14 ರಂದು ಉಜಿರೆ ಶ್ರೀ ಸಿದ್ಧವನ ಗುರುಕುಲದಲ್ಲಿ ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ದೀಪ ಪ್ರಜ್ವಲನೆ ನೆರವೇರಿಸಿದರು.
ಅಧ್ಯಕ್ಷತೆಯನ್ನು ಡಿ. ವೀರೇಂದ್ರ ಹೆಗ್ಗಡೆಯವರು ವಹಿಸಿ ಶ್ರೀ ಧ. ಮಂ. ಎಜ್ಯುಕೇಶನಲ್ ಸೊಸೈಟಿ , ಉಜಿರೆ ನಿವೃತ್ತ ನೌಕರರನ್ನು ಸನ್ಮಾನಿಸಿದರು.
ಹೇಮಾವತಿ ಹೆಗ್ಗಡೆ ಹಾಗೂ ಡಿ ಹರ್ಷೇಂದ್ರ ಕುಮಾರ್ ದಂಪತಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಶ್ರೀ ಧ. ಮಂ. ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹಾಗೂ ಶ್ರೀ ಧ, ಮಂ. ಎಜ್ಯುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. , ಸುಪ್ರೀಯ ಹರ್ಷೇಂದ್ರ ಕುಮಾರ್, ಪೂರಣ್ ವಮ೯ ಉಪಸ್ಥಿತರಿದ್ದರು.
ಬಳಿಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗೆ ಮೌಲ್ಯಾಧಾರಿತ ಶಿಕ್ಷಣ ಮತ್ತು ಶೈಕ್ಷಣಿಕ ನಾಯಕತ್ವ ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಸತೀಶ್ ಭಟ್ , ಮತ್ತು ಕೃಷ್ಣ ಮೋಹನ್ ಪುತ್ತೂರು ಮಾಹಿತಿ ನೀಡಿದರು.
ಶ್ರೀಮತಿ ಸುಮಾ ಶ್ರೀ ನಾಥ್ ಪ್ರಾರ್ಥಿಸಿ , ರಾಮಕೃಷ್ಣ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸೋಮಶೇಖರ್ ಶೆಟ್ಟಿ ಸನ್ಮಾನಿತರ ವಿವರ ನೀಡಿದರು. ಧರ್ಮಸ್ಥಳ ಸಿಬಿಎಸ್ಇ ಸ್ಕೂಲ್ ಪ್ರಾಂಶುಪಾಲರು ಮನಮೋಹನ್ ನಾಯಕ್ ವಂದಿಸಿದರು.