September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಮುಂಡಾಜೆಯ ತೇಜಲ್ ಕೆ. ಆರ್ ರವರು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಬೆಳ್ತಂಗಡಿ: ಜೂ.06 ರಿಂದ ಜೂ.7 ರವರೆಗೆ ಉಡುಪಿ ಮಹಾತ್ಮ ಗಾಂಧಿ ಕ್ರೀಡಾಂಗಣ, ಅಜರಕಾಡುವಿನಲ್ಲಿ ನಡೆದ ರಾಜ್ಯಮಟ್ಟದ ಸೀನಿಯರ್ ಮತ್ತು ಯೂತ್ ಮೀಟ್-2024 ಇದರಲ್ಲಿ 110 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ಮುಂಡಾಜೆ ನಿವಾಸಿಯಾದ ತೇಜಲ್ ಕೆ.ಆರ್ ಇವರು ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ.

ಈಗಾಗಲೇ ಹಲವು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ತೇಜಲ್ ಕೆ. ಆರ್ ರವರು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಅನುಭವವನ್ನು ಹೊಂದಿರುತ್ತಾರೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ ನಿವಾಸಿಯಾಗಿರುವ ರಾಜೇಶ್ ಕೆ . ವಿ ಹಾಗೂ ಜಿನ್ಸಿ ರಾಜೇಶ್ ಇವರ ಪುತ್ರನಾಗಿರುವ ತೇಜಲ್ ಕೆ .ಆರ್ ಪ್ರಸ್ತುತ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ತರಬೇತುದಾರರಾಗಿರುವ ಶಾಂತಾರಾಮ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದು ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಯಾಗಿದ್ದಾರೆ.

Related posts

ನಾಳ ವರ್ಷವಧಿ ಜಾತ್ರಾ ಮಹೋತ್ಸವ ಲೆಕ್ಕಪತ್ರ ಮಂಡನೆ, ಅಭಿನಂದನೆ ಹಾಗೂ ಅಧಿಕಾರ ಹಸ್ತಾಂತರ

Suddi Udaya

ಉಜಿರೆ: ಬೆನಕ ಹೆಲ್ತ್ ಸೆಂಟರ್ ನಲ್ಲಿ ದಾದಿಯರ ದಿನಾಚರಣೆ

Suddi Udaya

ವಿದುಷಿ ವಿದ್ಯಾಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್‌, ಅರ್ವ ವತಿಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Suddi Udaya

ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯದಿಂದ ಗುಣಮಟ್ಟ ಪರಿವೀಕ್ಷಣೆ

Suddi Udaya

ಖೋ- ಖೋ ಪಂದ್ಯಾಟ: ನಡ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಬಳಂಜ ಬೀಳುವ ಹಂತದಲ್ಲಿದ್ದ ಮನೆಯನ್ನು ಸರಿಪಡಿಸಿದ ಗ್ರಾಮಸ್ಥರು, ಸತೀಶ್ ದೇವಾಡಿಗರ ಸೇವಾ ಮನೋಭಾವ ಶ್ಲಾಘನೀಯ

Suddi Udaya
error: Content is protected !!