37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಮಾಜಿ ಮುಖ್ಯ ಮಂತ್ರಿ ಹೆಚ್. ಡಿ ಕುಮಾರ ಸ್ವಾಮಿ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ

ಬೆಳ್ತಂಗಡಿ; ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿಯವರು ಶನಿವಾರ ಬೆಳ್ತಂಗಡಿ ತಾಕೂಕಿಗೆ ಆಗಮಿಸಿ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಲ್ಲಿ ವಿಶೇಷ ಪೂಜೆಯಲ್ಲಿ‌‌ ಭಾಗಿಯಾದರು.

ಸಂಜೆ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿದ ವೇಳೆ ಕ್ಷೇತ್ರದ ಪರವಾಗಿ ಡಿ‌ ಹರ್ಷೇಂದ್ರ ಕುಮಾರ್ ಬರಮಾಡಿಕೊಂಡರು.

ಬಳಿಕ ನಾಳ‌ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಗೆ ವಿಶೇಷ ದುರ್ಗಾ ಪೂಜೆ ಸಲ್ಲಿಸಿದರು.
ನಾಡಿಗೆ ಸುಬೀಕ್ಷೆ ಹಾಗೂ ವಿಶೇಷ ಸಂಕಲ್ಪ ನಿಮಿತ್ತ ದೇವಳದಲ್ಲಿ ಮೂರು‌ ದಿನಗಳಿಂದ, ಪ್ರಧಾನ
ಅರ್ಚಕರಾದ ವೇದಮೂರ್ತಿ‌ ರಾಘವೇಂದ್ರ ಅಸ್ರಣ್ಣರ ನೇತೃತ್ವದಲ್ಲಿ ನಡೆದ ಅರ್ಚೆನೆ ಹಾಗೂ ವಿಧಿ ವಿಧಾನಗಳ ಜೊತೆಗೆ ಧಾರ್ಮಿಕ ಹೋಮ ಹವನ ನಡೆದು ಅದರ ಪೂರ್ಣಾಹುತಿಯಲ್ಲಿ ಅವರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು
ಬೊಮ್ಮನಹಳ್ಳಿ ಕ್ಷೇತ್ರದ ನಾರಾಯಣ ರಾಜು,‌ ವಿಧಾನ‌ ಪರಿಷತ್ ಶಾಸಕ ಎಸ್.ಎಲ್ ಭೋಜೇ ಗೌಡ, ರಾಜ್ಯ ವಕ್ತಾರ ಹಾಗೂ ಮಾದ್ಯಮ ಸಂಚಾಲಕ ಎಂ.ಬಿ ಸದಾಶಿವ,‌
ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಜೈನ್, ತಾಲೂಕು ನಿಯೋಜಿತ ಅದ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ, ಪ್ರಮುಖರಾದ ಹೆಚ್.ಎನ್ ನಾಗರಾಜ್, ರಾಮ ಆಚಾರಿ, ಶಾಹಿದ್ ಪಾದೆ ಉಪಸ್ಥಿತರಿದ್ದರು.ದೇವಳದ ಕಡೆಯಿಂದ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಸದಸ್ಯರಾದ ವಸಂತ ಮಜಲು,‌ ಜನಾರ್ದನ ಪೂಜಾರಿ, ರಾಜೇಶ್ ಶೆಟ್ಟಿ,‌ ಉಮೇಶ್ ಕೇಲ್ದಡ್ಕ, ಅಂಬಾ ಬಿ ಆಳ್ವಾ, ಹಾಗೂ ಇತರರು ಭಾಗಿಯಾಗಿದ್ದರು.

ತಾಲೂಕು ಚುನಾವಣಾಧಿಕಾರಿ ಯೋಗೀಶ್, ನಗರ ಪಂಚಾಯತ್ ‌ಮುಖ್ಯಾಧಿಕಾರಿ ನಟರಾಜ್, ಪರಮೇಶ್ ಹಾಜರಿದ್ದರು.

ಸುಸ್ಥಿರ ಆಡಳಿತ: ಕುಮಾರ ಸ್ವಾಮಿ

ಮುಂದಿನ ದಿನಗಳಲ್ಲಿ ದುರ್ಗಾಪರಮೇಶ್ವರೀ ತಾಯಿಯ ಆಶೀರ್ವಾದದಿಂದ ‌ರಾಜ್ಯದಲ್ಲಿ ಸುಸ್ಥಿರ ಆಡಳಿತ ಬರುವಂತೆ ಹಾಗೂ ತಾಯಿಯ ಅನುಗ್ರಹದಿಂದ‌ ನಾಡಿನ‌ ಜನತೆಗೆ ಒಳಿತಾಗಲಿ ಎಂದು ವಿಶೇಷ ಹೋಮ ಹವನ ಮಾಡಿದ್ದೇನೆ. ಪಕ್ಷದ ಮತ್ತು ಎಲ್ಲಾ ವಿಚಾರಗಳ ಬಗ್ಹೆಯೂ ಸಂಕಲ್ಪ ಮಾಡಿದ್ದೇನೆ.

  • ಹೆಚ್.ಡಿ‌ ಕುಮಾರಸ್ವಾಮಿ

Related posts

ಉಜಿರೆ ಗ್ರಾ.ಪಂ. ನಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಪ್ರಯುಕ್ತ “ ಸ್ವಚ್ಛ ಭಾರತ ದಿನ ” ವಿಶೇಷ ಗ್ರಾಮ ಸಭೆ

Suddi Udaya

ಆ.22: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ ಖಿಲರ್ ಜುಮ್ಮಾ ಮಸೀದಿ – ಹಯಾತುಲ್ ಇಸ್ಲಾಂ ಮದರಸ ಜಂಟಿ ಆಶ್ರಯದಲ್ಲಿ ಸಮಸ್ತ ನೂರನೇ ಸಂಸ್ಥಾಪನ ದಿನಾಚರಣೆ

Suddi Udaya

ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲಾ ಮಂತ್ರಿ ಮಂಡಲ ರಚನೆ

Suddi Udaya

ವೇಣೂರು ಗ್ರಾಮ ಪಂಚಾಯತ್ ನ ಮೊದಲ ಹಂತದ ಗ್ರಾಮಸಭೆ

Suddi Udaya

ಕಾಜೂರು ಉರೂಸ್ ಪ್ರಯುಕ್ತ ಪ್ರತಿದಿನ ಉಪನ್ಯಾಸ ಮಾಲಿಕೆ; ಪ್ರಮುಖ ವಿದ್ವಾಂಸರಿಂದ ಧರ್ಮ ಸಂದೇಶ, ಬರ್ದಾ ಸಂಗಮ

Suddi Udaya
error: Content is protected !!