ಬೆಳ್ತಂಗಡಿ: ಬೆಂಗಳೂರು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಯವರು ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಗೆ ಅಂದಾಜು ರೂ. 12 ಲಕ್ಷ ರೂಪಾಯಿ ಮೌಲ್ಯದ ಅನುದಾನದಲ್ಲಿ ನಿರ್ಮಿಸಲಾದ ಸೋಲಾರ್ ಪವರ್ ಗ್ರಿಡ್ , ರಸಾಯನಶಾಸ್ತ್ರ ಪ್ರಯೋಗಾಲಯ, ಯುಪಿಎಸ್, ವಾಟರ್ ಪ್ಯೂರಿಫೈಯರ್ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ಎ15 ರಂದು ನಡೆಯಿತು.
ಬೆಂಗಳೂರು ಕ್ಯಾನ್ ಫಿನ್ ಹೋಮ್ಸ್ ಲಿ. ಇದರ ಜನರಲ್ ಮ್ಯಾನೇಜರ್ ಶ್ರೀಮತಿ ಶಮಿಲಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಡೆಪ್ಯೂಟಿ ಮ್ಯಾನೇಜರ್ ಪ್ರಶಾಂತ್ ಜೋಶಿ, ಬೆಂಗಳೂರು ರೋಟರಿ ಕ್ಲಬ್ ಇಂದಿರಾನಗರ ಮಾಜಿ ಅಧ್ಯಕ್ಷ ಜಗದೀಶ ಮುಗುಳಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಮನೋರಮ ಭಟ್, ನಿವೃತ್ತ ಮೇನೆಜರ್ ಜನರಲ್ ಎಂ ವಿ ಭಟ್, ಬೆಳ್ತಂಗಡಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಅನಂತ ಭಟ್, ಕಾಲೇಜು ಹಿರಿಯ ಉಪನ್ಯಾಸಕ ಆನಂದ ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.
ಬೆಂಗಳೂರು ಕ್ಯಾನ್ ಫಿನ್ ಹೋಮ್ಸ್ ಲಿ. ಮ್ಯಾನೇಜರ್ ನಾಗರಾಜ, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಮತಿ ರಕ್ಷಾ ರಾಗ್ನೇಶ್, ರೊಟೇರಿಯನ್ ರೊನಾಲ್ಡ್ ಲೋಬೊ, ಧನಂಜಯ್ ರಾವ್, ಉಪನ್ಯಾಸಕರಾದ ಡಾ. ಗಣೇಶ್ ಭಟ್, ಮೋಹನ್ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಮಾರಿ ಅಕ್ಷತಾ ನಿರೂಪಿಸಿದರು. ತನ್ವಿ ಮತ್ತು ಬಳಗ ಪ್ರಾರ್ಥಿಸಿ, ನಸೀಬಾ ಸ್ವಾಗತಿಸಿ, ಕಾಲೇಜಿನ ಉಪನ್ಯಾಸಕ ಆನಂದ ಡಿ ವಂದಿಸಿದರು.