23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಮಕ್ಕಳಿಗೆ ಹಿಂದೂ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ , ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಹಾಗೂ ಪಟ್ಟೂರು ಶ್ರೀ ರಾಮ ವಿದ್ಯಾಸಂಸ್ಥೆ ಇವುಗಳ ಸಹಯೋಗದಲ್ಲಿ 12ರಿಂದ 16ರ ವಯೋಮಾನದ ಮಕ್ಕಳಿಗೆ ಹಿಂದೂ ಸಂಸ್ಕಾರ ಶಿಬಿರವು ಎ.12ರಂದು ಪ್ರಾರಂಭಗೊಂಡು ಎ.16ರಂದು ಸಮಾರೋಪಗೊಂಡಿತು.

ಸಮಾರೋಪದ ಅಧ್ಯಕ್ಷತೆಯನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆರ್.ಎಸ್.ಎಸ್ ಮುಖಂಡ ಕೃಷ್ಣ ಭಟ್, ಪ್ರಧಾನ ಬೌದ್ಧಿಕರಾಗಿ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರಜ್ವಲ್ ಆಗಮಿಸಿದ್ದರು. ಭಾರತ್ ಮಾತ ಪೂಜನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲಾ ಶಿಬಿರಾರ್ಥಿಗಳ ಪೋಷಕರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಮೊದಲು ಶಿಬಿರಾರ್ಥಿಗಳಿಂದ ಯೋಗಾಸನ, ಇತರ ಪ್ರದರ್ಶನಗಳು ಜರುಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.
ಶ್ರೀ ರಾಮ ವಿದ್ಯಾಸಂಸ್ಥೆಯ ಸದಸ್ಯ ಗಣೇಶ್ ಕೆ. ಹಿತ್ತಿಲು ಸ್ವಾಗತಿಸಿದರು. ಸುದರ್ಶನ ಹಿತ್ತಿಲು ವಂದಿಸಿದರು. ಕೇಶವ ಕೊಲ್ಲಾಜೆಪಲ್ಕೆ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಭಾರತ್ ಆಟೋ ಕಾರ್‍ಸ್ ಮಾರುತಿ ಸುಝುಕಿ ಶೋರೂಮ್ ನಲ್ಲಿ ಡಾಜ್ಲಿಂಗ್ ನ್ಯೂ ಡಿಝೈರ್ ಕಾರು ಮಾರುಕಟ್ಟೆಗೆ

Suddi Udaya

ಧರ್ಮಸ್ಥಳ ಗ್ರಾ.ಪಂ. ಮಾಜಿ ಸದಸ್ಯ ಗೋಪಾಲ ಪೂಜಾರಿ ನಿಧನ

Suddi Udaya

ನಾಳ ಶ್ರೀ ದೇವಸ್ಥಾನದ ರಥಬೀದಿಯಲ್ಲಿ ಶನೀಶ್ವರ ಮಹಾತ್ಮೆ ಬಯಲಾಟ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಗುರು ಪೂಜೆ ಮತ್ತು ಸತ್ಯನಾರಾಯಣ ಪೂಜೆ

Suddi Udaya

ಮರೋಡಿಯಲ್ಲಿ ಪ್ರಕಾಶಮಾನವಾಗಿ ಕಂಗೊಳಿಸುತ್ತಿರುವ ಕೂಕ್ರಬೆಟ್ಟು ಸರಕಾರಿ ಶಾಲೆ: ರೂ.1.10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕಟ್ಟಡ, ರಾಷ್ಟ್ರ ಧ್ವಜ ಕಟ್ಟೆ ಉದ್ಘಾಟನೆ,

Suddi Udaya

ಕಿಲ್ಲೂರು‌ ನೂತನ ಮಸ್ಜಿದ್ ಗೆ ಖಾಝಿ ಕೂರತ್ ತಂಙಳ್ ರಿಂದ ಶಿಲಾನ್ಯಾಸ

Suddi Udaya
error: Content is protected !!