April 2, 2025
ಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಚಪ್ಪರ ಮೂಹೂರ್ತ

ತೋಟತ್ತಾಡಿ : ಇತಿಹಾಸ ಪ್ರಸಿದ್ಧ ಹೊಯ್ಸಲ ರಾಜರುಗಳಿಂದ ನಿರ್ಮಾಣಗೊಂಡು ಸುಮಾರು 900 ವರ್ಷಗಳ ಇತಿಹಾಸ ಹೊಂದಿರುವ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಮೇ.17ರಿಂದ 22 ರವರೆಗೆ ನೀಲೇಶ್ವರ ಆಲಂಬಾಡಿ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು ಇದರ ಚಪ್ಪರ ಮೂಹೂರ್ತವು ಎ.19 ರಂದು ನಡೆಯಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಾಧ್ಯಕ್ಷ ಅಶೋಕ್‌ಕುಮಾರ್ ಜೈನ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಮಲಾಕ್ಷ ಪೂಜಾರಿ ಪಾದೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಗೌಡ, ಚಪ್ಪರ ಸಮಿತಿಯ ಸಂಚಾಲಕ ಓಬಯ್ಯ ಗೌಡ ಬಾಯಿತ್ಯಾರು, ಸಹಸಂಚಾಲಕ ಲಕ್ಷ್ಮಣ ನೆಲ್ಲಿಗುಡ್ಡೆ, ಪ್ರಚಾರ ಸಮಿತಿ ಸಂಚಾಲಕ ಗಣೇಶ್ ಬೇರಿಕೆ, ಅಲಂಕಾರ ಸಮಿತಿ ಸಂಚಾಲಕ ಮಹೇಶ್ ಬೇರಿಕೆ, ಕಛೇರಿ ನಿರ್ವಹಣೆ ಸಮಿತಿಯಿಂದ ಪ್ರಸಾದ ಕೆ.ವಿ, ಕೃಷ್ಣ ಶೆಟ್ಟಿ ಮೂರ್ಜೆ, ಮುದರ ಕುಂಬಾರ, ಮೋಹನ ಕಳೆಂಜೆಟ್ಟು, ಗುರುವಪ್ಪ ಭಂಡಾರಿ, ಸೀತಾರಾಮ ಸಾಲಿಯಾನ್, ಶಿವದಾಸನ್, ಆರ್ಥಿಕ ಸಮಿತಿ ಸಂಚಾಲಕ ದಿನೇಶ್ ದೇವಸ್ಯ, ಸಾಂಸ್ಕೃತಿಕ ಸಮಿತಿಯ ಕಿರಣ್ ಅತ್ತಿದಡಿ, ಉಪಾಧ್ಯಕ್ಷ ತಿಮ್ಮಪ್ಪ ಹಾರಗಂಡಿ, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಶ್ರೀಮತಿ ಪ್ರಮೀಳ ರಾಜೇಶ್, ಕಾರ್ಯದರ್ಶಿ ಈಶ್ವರ ಗೌಡ ಪಿ ಹೆಚ್, ಉಪಾಧ್ಯಕ್ಷ ಶಿವದಾಸನ್‌ ಪಾಲೆತ್ತಡಿ, ಗ್ರಾ.ಪಂ. ಸದಸ್ಯರು ದಯಾನಂದ ಜೆ.ಕೆ , ನಾರಾಯಣ ಶೆಟ್ಟಿ, ಚಿದಾನಂದ ಹೊಸಮನೆ, ಓಬಯ್ಯ ಬಾಯಿತ್ಯಾರು, ರಾಮಣ್ಣ ಗೌಡ ಹೇಡ್ಯೆರೂ, ಮಹಿಳಾ ಸಂಚಾಲಕಿ ರೇವತಿ, ಸಹ ಸಂಚಾಲಕಿ ಶಶಿಕಲಾ, ಆಹಾರ ಸಮಿತಿ ಸಂಚಾಲಕ ರಾಜೇಶ್ ಪಾದೆ, ಸ್ವಯಂ ಸೇವಕ ಸಮಿತಿ ಸಂಚಾಲಕ ಅಕಿಲ್ ಕಜೆ, ಮೋನಪ್ಪ ಮೂಡೈಲು, ಪ್ರಕಾಶ್ ಹೊಸಮಠ, ರಮೇಶ್ ಕುಂಬಾರ, ಕೃಷ್ಣಪ್ಪ ಪರಾರಿ, ಜತೆಕಾರ್ಯದರ್ಶಿ ಜಯಚಂದ್ರ ಬಾಯಿತ್ಯಾರು, ಅರ್ಚಕರಾದ ದಿವಕರ್ ಭಟ್, ಕಲಶ ಸಮಿತಿ ಶಾಜಿ ಮೋಹನ್, ಸಂತೆ ನಿರ್ವಹಣೆ ಸಮಿತಿ ಸಂಚಾಲಕ ರಾಜೇಶ್ ಮೂರ್ಜೆ, ವ್ಯವಸ್ಥಾಪನ ಸಮಿತಿ ಸದಸ್ಯ ಮೋಹಿನಿ, ಪಾರ್ಕಿಂಗ್ ಸಂಚಾಲಕ ಅವಿನಾಶ್ ಮೂರ್ಜೆ, ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿ ಸ್ಥಾಪಕ ಅಧ್ಯಕ್ಷ ಶ್ರೀಧರ ಪೂಜಾರಿ ಮೂರ್ಜೆ, ವಿದ್ಯುತ್ ಸಮಿತಿ ಸಂಚಾಲಕ ಉಮೇಶ್ , ನೀರಾವರಿ ಸಮಿತಿ ಸಂಚಾಲಕ ವಸಂತ , ಆರ್ಥಿಕ ಸಮಿತಿ ಸಂಚಾಲಕ ದಿನೇಶ್ ದೇವಸ್ಯ ಮತ್ತು ಸಮಿತಿಗಳ ಸಂಚಾಲಕರು, ಉಪಸಂಚಾಲಕರು, ಸದಸ್ಯರು , ಊರ ಗಣ್ಯರು ಉಪಸ್ಥಿತರಿದ್ದರು.

Related posts

ಸರಳಿಕಟ್ಟೆಯಿಂದ ಗೋವಿಂದಗುರಿ ವರೆಗೆ ಹದಗೆಟ್ಟ ರಸ್ತೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಮೋಗೇರೋಡಿ ಕನ್ಸ್ಟ್ರಕ್ಷನ್ ನೆವದಿಂದ ನಾಳೆಯಿಂದ ಕಾಮಗಾರಿ ಆರಂಭ

Suddi Udaya

ಉಜಿರೆ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆ ( ಸಿ.ಬಿ.ಎಸ್‌.ಇ ) ಯಲ್ಲಿ ಶಿಕ್ಷಕರಿಗೆ ಯೋಗ ತರಬೇತಿ

Suddi Udaya

ಜ.8 ರಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವರ ಬ್ರಹ್ಮಕಲಶೋತ್ಸವ ಸಂಭ್ರಮ: ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟನೆ

Suddi Udaya

ಬೆಳ್ತಂಗಡಿ: ಗಾಳಿ ಮಳೆಗೆ 44 ವಿದ್ಯುತ್ ಕಂಬ ಧರಾಶಾಯಿ: ಅಪಾರ ಹಾನಿ

Suddi Udaya

ಭೂಮಿ ಬಾನೊದ ಸೊರೊ ತುಳು ಜನಪದ ವಿಡಿಯೋ ಹಾಡು ಹಾಗೂ “ವಿಸ್ಮೃತಿ – ಐತಿಹಾಸಿಕ ಸ್ಮಾರಕಗಳ ಮನನ ಕನ್ನಡ ಅಲ್ಬಂ ಹಾಡು ಲೋಕಾರ್ಪಣೆ

Suddi Udaya
error: Content is protected !!