April 2, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಪುಂಜಾಲಕಟ್ಟೆ: ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಬೈಕ್ ಸವಾರ ಸಾವು

ಪುಂಜಾಲಕಟ್ಟೆ :ಪುಂಜಾಲಕಟ್ಟೆ ವ್ಯಾಪ್ತಿಯ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತದಲ್ಲಿ ಬೈಕ್‌ ಸವಾರನೋರ್ವ ಮೃತಪಟ್ಟು,ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಸಂದೀಪ್ ಲೋಬೊ ಮೃತಪಟ್ಟ ಯುವಕ

ಅಮ್ಮಾಡಿ ನಿವಾಸಿ ಸಂದೀಪ್ ಲೋಬೊ ಮೃತಪಟ್ಟ ಯುವಕನಾಗಿದ್ದು, ಈತನ ಜೊತೆ ಕೆಲಸ ಮಾಡುವ ನೆರೆಯ ಮನೆಯ ಆಕಾಶ್ ಎಂಬಾತನಿಗೆ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಿಬ್ಬರು ವೆಲ್ಡಿಂಗ್ ಕೆಲಸ ಮಾಡುವ ಕಾರ್ಮಿಕರಾಗಿದ್ದು, ಬಿಸಿರೋಡಿನಿಂದ ಪುಂಜಾಲಕಟ್ಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಓವರ್ ಟೇಕ್ ಮಾಡಿಕೊಂಡು ಅತೀ ವೇಗದಲ್ಲಿ ಬಂದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಿಂದ ಗಾಯಗೊಂಡಿದ್ದ ಸಂದೀಪ್ ಲೋಬೋ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದು, ಆಕಾಶ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ಉಜಿರೆ : ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ಶಾಲೆಯಲ್ಲಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

Suddi Udaya

ಕೊಕ್ಕಡ: ಶ್ರೀಮತಿ ಮೋನಕ್ಕ ನಿಧನ

Suddi Udaya

ಶಿಶಿಲ ಸೃಷ್ಟಿ ಸಂಜೀವಿನಿ ಒಕ್ಕೂಟದ ವತಿಯಿಂದ ಆಟಿಡೊಂಜಿ ದಿನ

Suddi Udaya

ಪೆರ್ಲ: ಮುಂಡತ್ತೋಡಿ ಸ.ಹಿ.ಪ್ರಾ. ಶಾಲೆಯಲ್ಲಿ ಬೆಂಕಿ ರಹಿತ ಅಡುಗೆ ತಯಾರಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಅಕ್ರಮ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಪೊಲೀಸರ ದಾಳಿ: ಆರೋಪಿಗಳ ಸಹಿತ ನಗದು ಹಾಗೂ ಇತರ ಸೊತ್ತುಗಳು ಪೊಲೀಸ್ ವಶ

Suddi Udaya
error: Content is protected !!