April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿನಿಧನ

ಎಂಟು ದಿನಗಳ ಹಿಂದೆ ಮನೆಯಲ್ಲಿ ಇಲಿ ಪಾಷಾಣ ಸೇವಿಸಿದ್ದ ಗಡಾ೯ಡಿ ಗ್ರಾಮದ ಮಜಲು ನಿವಾಸಿ ಸಂಜೀವ ಪೂಜಾರಿ ಸಾವು

ಗಡಾ೯ಡಿ : ಎಂಟು ದಿನಗಳ ಹಿಂದೆ ಮನೆಯಲ್ಲಿ ಇಲಿ ಷಾಷಾಣ ವಿಷ ಸೇವಿಸಿದ್ದ ಗಡಾ೯ಡಿ ಗ್ರಾಮದ ಮಜಲು ಮನೆ ನಿವಾಸಿ ಸಂಜೀವ ಪೂಜಾರಿ(60 ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಎ.30 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಚಾಲಕ ವೃತ್ತಿಯನ್ನು ಮಾಡಿಕೊಂಡಿದ್ದ‌ ಇವರು ಸುಮಾರು ಒಂದು ವರ್ಷದಿಂದ ಚಾಲಕ ವೃತ್ತಿಯನ್ನು ಬಿಟ್ಟು ಮನೆಯ ಸಮೀಪದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಅಮಲು ಪದಾರ್ಥ ಸೇವನೆ ಮಾಡುವ ಚಟವನ್ನು ಹೊಂದಿದ್ದ ಇವರು ಹಣದ ಕೊರತೆಯಿಂದಾಗಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಎ.22 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಮನೆಯಲ್ಲಿ ತಂದಿಟ್ಟಿದ್ದ ಇಲಿ‌ ಪಾಷಾಣ ವಿಷವನ್ನು ಸೇವಿಸಿದ್ದರು. ಕೂಡಲೇ ಅವರನ್ನು ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು . ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಎ.30 ರಂದು ಬೆಳಿಗ್ಗೆ ನಿಧನರಾದರು.ಪುತ್ರ ಸಂದೀಪ್‌ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ವಾಲಿಬಾಲ್ ಪಂದ್ಯಾಟ: ಧರ್ಮಸ್ಥಳದ ಸಿಂಚನಾ ಜೆ. ಶೆಟ್ಟಿ ಅತ್ಯುತ್ತಮ ಸೆಟ್ಟರ್ ಆಗಿ ಆಯ್ಕೆ

Suddi Udaya

ಎಸ್.ಡಿ.ಎಂ. ನ್ಯಾಚುರೋಪತಿಗೆ ಆರ್.ಜಿ.ಯು.ಹೆಚ್.ಎಸ್‌ನ ಗೋಲ್ಡ್ ಮೆಡಲ್

Suddi Udaya

ಇಂದಬೆಟ್ಟು ವಲಯದ ಗುರಿಪಳ್ಳದಲ್ಲಿ ಯಾಂತ್ರಿಕೃತ ಭತ್ತನಾಟಿ

Suddi Udaya

ಕರಿಮಣೇಲು ನಿವಾಸಿ ಶ್ರೀಮತಿ ಶಾಂತ ನಿಧನ

Suddi Udaya

ರಾಜ್ಯ ಮಟ್ಟದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶಕ್ಕೆ ಬೆಳ್ತಂಗಡಿಯಿಂದ 10 ಸಾವಿರ ಕಾರ್ಯಕರ್ತರು ಭಾಗವಹಿಸುವಿಕೆ: ರಕ್ಷಿತ್ ಶಿವರಾಮ್

Suddi Udaya
error: Content is protected !!