ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ 15ನೇ ವರ್ಷದ ಸಾಮೂಹಿಕ ವಿವಾಹವಧು-ವರರ ವೈಭವದ ದಿಬ್ಬಣ ಮೆರವಣಿಗೆಗೆ ಚಾಲನೆ,

Suddi Udaya

ಪುಂಜಾಲಕಟ್ಟೆ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 39 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ 15 ನೇ ವರ್ಷದ ಸಾಮೂಹಿಕ ವಿವಾಹದ ಕಾರ್ಯಕ್ರಮ ಬಂಗ್ಲೆ ಮೈದಾನದಲ್ಲಿ ನಡೆಯಿತು.

ಕಟ್ಟೆ ಮನೆಯ ಉದಯ ಕುಮಾರ್ ಮತ್ತು ಸಹೋದರರು ದೀಪ ಬೆಳಗಿಸಿದರು. ವದು ವರರ ಡಿಬ್ಬಣ ಮೆರವಣಿಗೆಗೆ ಸುದರ್ಶನ್ ಬಜೆ,ಹರೀಂದ್ರ ಪೈ ನೈನಾಡು,ಲಕ್ಷ್ಮಿ ನಾರಾಯಣ ಉಡುಪ ಪುಂಜಾಲಕಟ್ಟೆ,ಪುನೀತ್ ಕುಮಾರ್ ಮಡಂತ್ಯಾರು, ಕರುಣಾಕರ ಪೂಜಾರಿ ಮಾಳಿಗೆ ಮನೆ,ಲಕ್ಷ್ಮೀ ನಾರಾಯಣ ಹೆಗ್ಡೆ ಪುಂಜಾಲಕಟ್ಟೆ, ಹರೀಶ್ ಪ್ರಭು ಕಜೆಕಾರು,ರಮೇಶ್ ಶೆಟ್ಟಿ ಮಜಲೋಡಿ ಚಾಲನೆ ನೀಡಿದರು.

ಸಾಮೂಹಿಕ ವಿವಾಹದಲ್ಲಿ 11 ಜೋಡಿ ನವವಧುವರರು ಹಸೆಮಣೆಯನ್ನೇರಿ ಗೃಹಸ್ಥಾಶ್ರಮದ ದೀಕ್ಷೆಯನ್ನು ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ ಎಂ ತುಂಗಪ್ಪ ಬಂಗೇರ, ಕ್ಲಬ್ ನ ಅಧ್ಯಕ್ಷ ಪ್ರಶಾಂತ ಪುಂಜಾಲಕಟ್ಟೆ,ಗೌರಾವಾಧ್ಯಕ್ಷ ಅಬ್ದುಲ್ಲಾ ಪಿ,ಕಾರ್ಯದರ್ಶಿ ಜಯರಾಜ್ ಅತ್ತಾಜೆ,ಸಂಚಾಲಕ ರಾಜೇಶ್ ಪಿ.ಪುಂಜಾಲಕಟ್ಟೆ, ಪ್ರೊಫೆಸರ್ ರಂಜಿತ್ ಹೆಚ್‌ಡಿ ಸುಧಾಮ ಬಳಂಜ, ಉಪಸ್ಥಿತರಿದ್ದರು.

ಕ್ಲಬ್ ನ ಪದಾಧಿಕಾರಿಗಳು ಸಹಕರಿಸಿದರು.

ಕಾರ್ಯಕ್ರಮದ ಅಂಗವಾಗಿ ಎ. 29 ರಂದು ಸಂಜೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು,ಎ.30 ರಂದು ಬೆಳಿಗ್ಗೆ ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಮುಂಬಾಗದಿಂದ ಡಿಬ್ಬಣದ ಮೆರವಣಿಗೆ ಹೊರಟು.ಮಧ್ಯಾಹ್ನ ಪೆರ್ಡೂರು ಮೇಳದವರಿಂದ ಕುಶ ಲವ ಯಕ್ಷಗಾನ ಪ್ರದರ್ಶನ, ಸಂಜೆ ಪಿಲಿಬೇಟೆ ಕಿರು ಚಿತ್ರ ಪ್ರದರ್ಶನ,’ರಾತ್ರಿ ತಾಂಬೂಲ ಕಲಾವಿದೆರ್ ಇವರಿಂದ ಪರಿಮಳ ಕಾಲನಿ ನಾಟಕ ಪ್ರದರ್ಶನ ನಡೆಯಲಿದೆ.

Leave a Comment

error: Content is protected !!