30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಶಿಬಾಜೆ ಭಂಡಿಹೊಳೆಯಲ್ಲಿ ಪ್ರಕೃತಿ ಪ್ರಿಯರಿಂದ ರಸ್ತೆ ಸ್ವಚ್ಛತಾ ಅಭಿಯಾನ

ಶಿಬಾಜೆ : ಶಿಬಾಜೆ ಗ್ರಾಮದ ಭಂಡಿಹೊಳೆ ಪ್ರದೇಶದಲ್ಲಿ ಸ್ಥಳೀಯ ಯುವಕರ ಸಹಕಾರದಲ್ಲಿ ರಸ್ತೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಮೇ 1 ರಂದು ಜರುಗಿತು.


ಬೆಳಿಗ್ಗೆ 7 ರಿಂದ 11 ಗಂಟೆಯವರಿಗೆ ಸುಮಾರು 4 ಗಂಟೆಗಳ ಕಾಲ ಕೆಲಸ ನಡೆಸಲಾಯಿತು. ನವೀನ ದಾಮ್ಲೆ, ಕಾರ್ತಿಕ್ ದಾಮ್ಲೆ, ಅವಿನಾಶ್ ಭಿಡೆ, ಪ್ರಾಣೇಶ ಖರೆ, ಪ್ರಭಾಂಜನ್ ಭಿಡೆ, ಶಕ್ತಿ ಪ್ರಸಾದ್ ಅಭ್ಯಂಕರ್ ಮುಂತಾದವರು ಸೇರಿ ಸುಮಾರು ೨೦ ಗೋಣಿಚೀಲದಲ್ಲಿ ಕಸ (ಮುಖ್ಯವಾಗಿ ಬಾಟಲ್ ಹಾಗೂ ಪ್ಲಾಸ್ಟಿಕ್) ಸಂಗ್ರಹಿಸಿ ರಸ್ತೆ ಬದಿಯಲ್ಲಿ ಶೇಖರಿಸಿ ಇಡಲಾಯಿತು. ನಂತರ ವಾಹನದಲ್ಲಿ ಅದನ್ನು ವಿಲೇವಾರಿ ಮಾಡಲು ಪಂಚಾಯತ್‌ಗೆ ತಿಳಿಸಲಾಯಿತು.

ಪ್ರಕೃತಿ ಪ್ರಿಯರ ಈ ತಂಡ ದಲ್ಲಿ ಹೆಚ್ಚಿನವರು ವರ್ಕ್ ಫ್ರಮ್ ಹೋಂ ನಲ್ಲಿರುವವರು. ಇವರು ಕಾರ್ಮಿಕರ ದಿನಾಚರಣೆಯನ್ನು ಈ ರೀತಿ ವಿಶೇಷವಾಗಿ ಆಚರಿಸಿದರು. ನಂತರ ಪರಿಸರ ಜಾಗೃತಿಗಾಗಿ ಬ್ಯಾನರ್‌ಗಳನ್ನು ತಯಾರಿಸಿ ಅದನ್ನು ರಸ್ತೆ ಬದಿಯಲ್ಲಿ ಹಾಕುವ ಕೆಲಸವನ್ನು ಕೂಡ ಮಾಡಲಾಯಿತು. ಸ್ಥಳೀಯರ ಸಹಕಾರದಿಂದ ಉಪಹಾರ ಹಾಗೂ ಪಾನೀಯ ವ್ಯವಸ್ಥೆ ಮಾಡಲಾಯಿತು.

Related posts

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉನ್ನತಿ ಫೌಂಡೇಶನ್ ವತಿಯಿಂದ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ

Suddi Udaya

ಉಜಿರೆ ಎಸ್. ಡಿ .ಎಮ್ ಪದವಿ ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ತಾಲೂಕು ಮಟ್ಟದ ಸ್ವಾಸ್ತ್ಯ ಸಂಕಲ್ಪ ಸಪ್ತಾಹ

Suddi Udaya

ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ:

Suddi Udaya

ಚುನಾವಣೆ ಹಿನ್ನೆಲೆ: ಪೊಲೀಸ್ ಇಲಾಖೆಯಿಂದ ವಾಹನಗಳ ವಿಶೇಷ ತಪಾಸಣೆ

Suddi Udaya

ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ 29ನೇ ಪದವಿ ಪ್ರದಾನ ಸಮಾರಂಭ

Suddi Udaya
error: Content is protected !!