September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಶಿಬಾಜೆ ಭಂಡಿಹೊಳೆಯಲ್ಲಿ ಪ್ರಕೃತಿ ಪ್ರಿಯರಿಂದ ರಸ್ತೆ ಸ್ವಚ್ಛತಾ ಅಭಿಯಾನ

ಶಿಬಾಜೆ : ಶಿಬಾಜೆ ಗ್ರಾಮದ ಭಂಡಿಹೊಳೆ ಪ್ರದೇಶದಲ್ಲಿ ಸ್ಥಳೀಯ ಯುವಕರ ಸಹಕಾರದಲ್ಲಿ ರಸ್ತೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಮೇ 1 ರಂದು ಜರುಗಿತು.


ಬೆಳಿಗ್ಗೆ 7 ರಿಂದ 11 ಗಂಟೆಯವರಿಗೆ ಸುಮಾರು 4 ಗಂಟೆಗಳ ಕಾಲ ಕೆಲಸ ನಡೆಸಲಾಯಿತು. ನವೀನ ದಾಮ್ಲೆ, ಕಾರ್ತಿಕ್ ದಾಮ್ಲೆ, ಅವಿನಾಶ್ ಭಿಡೆ, ಪ್ರಾಣೇಶ ಖರೆ, ಪ್ರಭಾಂಜನ್ ಭಿಡೆ, ಶಕ್ತಿ ಪ್ರಸಾದ್ ಅಭ್ಯಂಕರ್ ಮುಂತಾದವರು ಸೇರಿ ಸುಮಾರು ೨೦ ಗೋಣಿಚೀಲದಲ್ಲಿ ಕಸ (ಮುಖ್ಯವಾಗಿ ಬಾಟಲ್ ಹಾಗೂ ಪ್ಲಾಸ್ಟಿಕ್) ಸಂಗ್ರಹಿಸಿ ರಸ್ತೆ ಬದಿಯಲ್ಲಿ ಶೇಖರಿಸಿ ಇಡಲಾಯಿತು. ನಂತರ ವಾಹನದಲ್ಲಿ ಅದನ್ನು ವಿಲೇವಾರಿ ಮಾಡಲು ಪಂಚಾಯತ್‌ಗೆ ತಿಳಿಸಲಾಯಿತು.

ಪ್ರಕೃತಿ ಪ್ರಿಯರ ಈ ತಂಡ ದಲ್ಲಿ ಹೆಚ್ಚಿನವರು ವರ್ಕ್ ಫ್ರಮ್ ಹೋಂ ನಲ್ಲಿರುವವರು. ಇವರು ಕಾರ್ಮಿಕರ ದಿನಾಚರಣೆಯನ್ನು ಈ ರೀತಿ ವಿಶೇಷವಾಗಿ ಆಚರಿಸಿದರು. ನಂತರ ಪರಿಸರ ಜಾಗೃತಿಗಾಗಿ ಬ್ಯಾನರ್‌ಗಳನ್ನು ತಯಾರಿಸಿ ಅದನ್ನು ರಸ್ತೆ ಬದಿಯಲ್ಲಿ ಹಾಕುವ ಕೆಲಸವನ್ನು ಕೂಡ ಮಾಡಲಾಯಿತು. ಸ್ಥಳೀಯರ ಸಹಕಾರದಿಂದ ಉಪಹಾರ ಹಾಗೂ ಪಾನೀಯ ವ್ಯವಸ್ಥೆ ಮಾಡಲಾಯಿತು.

Related posts

ಉಜಿರೆ ಎಸ್. ಡಿ.ಎಂ. ಕಾಲೇಜಿನಲ್ಲಿ ಬಿ. ವೋಕ್ ಉತ್ಸವ: ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿಗೆ ಪ್ರಶಸ್ತಿ

Suddi Udaya

ಶ್ರೀ ಧ.ಮಂ.ಪ.ಪೂ. ಕಾಲೇಜಿನ ಉಪನ್ಯಾಸಕರ ಸಂಘದ ವತಿಯಿಂದ ಗ್ರಂಥಪಾಲಕ ಮನೋಹರ ಶೆಟ್ಟಿಯವರಿಗೆ ಸನ್ಮಾನ

Suddi Udaya

ನಿಡ್ಲೆ: ರಾಧಾಕೃಷ್ಣ ಆಚಾರ್ಯ ನಿಧನ

Suddi Udaya

ಕಳೆಂಜ: ಪಿಲತ್ತಡಿ ನಿವಾಸಿ ಪುಪ್ಪರಾಜ್ ಭಾರತೀಯ ಭೂಸೇನೆಗೆ ಆಯ್ಕೆ

Suddi Udaya

ಖೋ ಖೋ ಪಂದ್ಯಾಟ: ನಯನಾಡು ಸರಕಾರಿ ಪ್ರೌಢ ಶಾಲೆಯ ಬಾಲಕ ಮತ್ತು ಬಾಲಕಿಯರ ತಂಡಕ್ಕೆ ಪ್ರಶಸ್ತಿ

Suddi Udaya

ಸ್ಪಂದನಾ ಲಯನ್ಸ್ ಪ್ರಾಂತೀಯ ಸಮ್ಮೇಳನ–2026 : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!