25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಪಡಂಗಡಿ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ಮತಯಾಚನೆ

ಪಡಂಗಡಿ: ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಹರೀಶ್ ಪೂಂಜರ ಪರವಾಗಿ ಪೊಯ್ಯೇಗುಡ್ಡೆ ರಿಕ್ಷಾ ನಿಲ್ದಾಣದಲ್ಲಿ ಬಹಿರಂಗ ಸಭೆಯಲ್ಲಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಮತಯಾಚನೆ ನಡೆಸಿದರು.

ಹರೀಶ್ ಪೂಂಜರರವರು ಅಭಿವೃದ್ಧಿಯಲ್ಲಿ ರಾಜ್ಯದಲ್ಲಿಯೇ ಮೊದಲಿಗರು, ತಾಲೂಕಿನ ಸರ್ವತೋಮುಖ ಅಭಿವೃದ್ಧಿಯ ಹಿಂದೆ ಹರೀಶ್ ಪೂಂಜರವರ ಶ್ರಮವಿದೆ. ಮತ್ತೊಮ್ಮೆ ಮತದಾರರು ಅವರನ್ನು ಆಶೀವರ್ದಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿದರು.ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಕಳೆದ 5 ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಮಾತನಾಡಿ, ಈ ಬಾರಿ 50 ಸಾವಿರ ಮತಗಳ ಅಂತರದಿಂದ ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸಬೇಕೆಂದರು.

ಈ ಸಂದರ್ಭದಲ್ಲಿ ಹಿರಿಯರಾದ ಕುಶಾಲಪ್ಪ ಗೌಡ,ಸದಾನಂದ ಪೂಜಾರಿ ಉಂಗೀಲಬೈಲು, ಜಯಾನಂದ ಗೌಡ,ಸಂತೋಷ್ ಕುಮಾರ್ ಜೈನ್, ಶ್ರೀನಿವಾಸ್ ರಾವ್, ಹಿತೇಶ್ ಕಾಪಿನಡ್ಕ, ವಿಶ್ವನಾಥ ಹೊಳ್ಳ,ಸಂತೋಷ್ ಶೆಟ್ಟಿ ಹಲ್ಲಂದೋಡಿ,ಅಶೋಕ್ ಗೋವಿಯಾಸ್,ರಾಜೇಶ್ ಆಚಾರ್ಯ ಹಾಗೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು

Related posts

ಕೊಕ್ರಾಡಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಅಕ್ಕಮ್ಮ ರವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಗೌರವ

Suddi Udaya

ಸ್ಫೋಟ ಪ್ರಕರಣ: ಧರ್ಮಸ್ಥಳ ಪೊಲೀಸರು ಮತ್ತು ಸೋಕೋ ತಂಡದಿಂದ ಸ್ಥಳ ಮಹಜರು

Suddi Udaya

ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಆದೇಶ

Suddi Udaya

ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಘೋರ ಭಯೋತ್ಪಾದಕ ದಾಳಿ ಖಂಡನೀಯ: ಅಭಿನಂದನ್ ಹರೀಶ್ ಕುಮಾರ್

Suddi Udaya

ಶೃಂಗೇರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿಯವರಿಗೆ ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಮತ್ತು ಸಭಾಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ಓಡಿಲ್ನಾಳ: ರಬ್ಬರ್ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ; ಕಳಿಯ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ವಸಂತ ಮಜಲು ಭೇಟಿ ನೀಡಿ ತುರ್ತು ಪರಿಹಾರ

Suddi Udaya
error: Content is protected !!