September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಣಿಯೂರು ಗ್ರಾಮ ಪಂಚಾಯತ್ ಬಿಜೆಪಿ ಸದಸ್ಯೆ ಕಾಂಗ್ರೆಸ್ ಪಕ್ಷ ಸೇರ್ಪಡೆ

ಕಣಿಯೂರು: ಕಣಿಯೂರು ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯೆ ಪ್ರಿಯಾಂಕ ರಾಧಾಕೃಷ್ಣ ಅವರು ಬಿಜೆಪಿ ತೊರೆದು ಮಾಜಿ ಶಾಸಕ ಕೆ. ವಸಂತ ಬಂಗೇರ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಮೇ.7ರಂದು ಸೇರ್ಪಡೆಗೊಂಡರು.

ಇದೆ ವೇಳೆ ಬಿಜೆಪಿ ಕಾರ್ಯಕರ್ತ ವಿಜಯ ನಾಯ್ಕ ಕಣಿಯೂರು ಮತ್ತು ಕಣಿಯೂರು ಬಿಜೆಪಿ ಬೂತ್ ಸಮಿತಿ ಕಾರ್ಯದರ್ಶಿ ರಾಧಕೃಷ್ಣ ಗೌಡ ಕೂಡ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಭಗಿರಥ ಜಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಈಶ್ವರ ಭಟ್ ಮಾಹಿಲ್ತೋಡಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಲೋಕೇಶ್ವರಿ ವಿನಯಚಂದ್ರ ಗೌಡ, ಪಕ್ಷದ ವಕ್ತಾರರದ ಮನೋಹರ ಕುಮಾರ್ ಇಳಂತಿಲ, ಮಾಜಿ ಪಂಚಾಯತ್ ಸದಸ್ಯರಾದ ಉಮವತಿ ದೇಜಪ್ಪ ಗೌಡ, ಉಜಿರೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ವಿನುತ ರಜತ ಗೌಡ, ಲಾಯಿಲ ಗ್ರಾಮ ಪಂಚಾಯತ್ ಸದಸ್ಯರಾದ ರೇವತಿ, ಕಣಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಸುಮತಿ ಶೆಟ್ಟಿ ,ಪಕ್ಷದ ಪ್ರಮುಖರಾದ ಸತೀಶ್ ಪದ್ಮುಂಜ,ಕಾಸಿಂ ಪದ್ಮುಂಜ, ಸರೋಜಿನಿ , ಲಿಂಗಪ್ಪ ಬಂಗೇರ, ಚಂದ್ರಕಾಂತ ಹಾಗೂ ಪ್ರಮುಖರು ಉಪಸ್ಥಿತರಿದ್ದರು

Related posts

ಬಳಂಜ ಗ್ರಾ.ಪಂ ಹಾಗೂ ಅರಣ್ಯ ಇಲಾಖೆಯಿಂದ ವನಮಹೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ತರಬೇತಿ ಶಿಬಿರದ ಉದ್ಘಾಟನೆ

Suddi Udaya

ಮುಳಿಯ ಜ್ಯುವೆಲ್ಸ್‌ನ ಡೈಮಂಡ್ ಫೆಸ್ಟ್‌ಗೆ ಗ್ರಾಹಕರಿಂದ ವ್ಯಾಪಕ ಬೆಂಬಲ; ಮನಮೆಚ್ಚಿದ ವಜ್ರಾಭರಣಗಳ ಖರೀದಿಗೆ ಸಾಲುಗಟ್ಟಿದ ಗ್ರಾಹಕರು

Suddi Udaya

ನಾಲ್ಕೂರು :ಇನಾಸ್ ಪಿಂಟೋ ನಿಧನ

Suddi Udaya

ಬಿಜೆಪಿ ಮುಖಂಡ ರಾಜೇಶ್ ಕೊಲೆ ಯತ್ನ ಪ್ರಕರಣ: ಆರೋಪಿ ಕುಶಾಲಪ್ಪ ಗೌಡ ಬಂಧನ

Suddi Udaya

ಬಳಂಜ: ನಮ್ಮ ಮಣ್ಣು ನಮ್ಮ ದೇಶ ಧ್ಯೇಯದೊಂದಿಗೆ ದೆಹಲಿಯಲ್ಲಿ ನಿರ್ಮಾಣಗೊಳ್ಳುವ ಹುತಾತ್ಮರ ಸ್ಮಾರಕಕ್ಕೆ ಬಳಂಜ ಗ್ರಾ.ಪಂ ಮುಖೇನಾ ಮಣ್ಣು ಹಸ್ತಾಂತರ

Suddi Udaya
error: Content is protected !!