September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಸಾಧಕರು

ಉಜಿರೆಯ ಸುಲೋಚನಾ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ


ಉಜಿರೆ : ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಪತಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಯಾವುದೇ ಚಿಂತೆಗೊಳಗಾಗದೆ ಪತಿಯ ಕಾರ್ಯವನ್ನು ಪ್ರೋತ್ಸಾಹಿಸಿ, ಸಮಾಜದಲ್ಲಿ ಆದರ್ಶಯುತವಾಗಿ ಜೀವನ ಸಾಗಿಸಿದ ಉಜಿರೆಯ ನಿವೃತ್ತ ಸೇನಾನಿ ಗೋಪಾಲಕೃಷ್ಣ ಕಾಂಚೋಡು ಇವರ ಪತ್ನಿ ಸುಲೋಚನಾ ಇವರು ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮೇ.8ರಂದು ಬೆಂಗಳೂರಿನ ಎಸ್‌ಎಸ್‌ಬಿ ತರಬೇತಿ ಅಕಾಡೆಮಿಯಲ್ಲಿ ನಡೆಯುವ ವಿಶ್ವ ತಾಯಂದಿರ ದಿನದಂದು ನಾರಿ ಶಕ್ತಿ ಕಾರ್ಯಕ್ರಮಲ್ಲಿ ದಕ್ಷಿಣ ಭಾರತದ ಸೇನಾಪಡೆಯ ಪ್ರಧಾನ ಕಮಾಂಡರ್ಗಳ ಸಮಕ್ಷಮ ಸುಲೋಚನಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ತನ್ನ ಪತಿ ಜಮ್ಮು ಕಾಶ್ಮೀರ ಸೇರಿದಂತೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಯಾವುದೇ ಚಿಂತೆಗೆ ಒಳಗಾಗದೆ ಪತಿಯನ್ನು ಪ್ರೋತ್ಸಾಹಿಸುತ್ತಾ ಒಬ್ಬ ಮಹಿಳೆಯಾಗಿ ವೀರ ನಾರಿಯಾಗಿ,ಮಕ್ಕಳಿಗೆ ವೀರ ಮಾತೆಯಾಗಿ, ಉತ್ತಮ ಸಂಸ್ಕಾರಗಳನ್ನು ನೀಡಿ ಒಳ್ಳೆಯ ವಿದ್ಯಾವಂತ ಸಂಸ್ಕಾರಯುತ ಪ್ರಜೆಗಳನ್ನಾಗಿಸುವಲ್ಲಿ, ಒಬ್ಬ ಮಹಿಳೆಯಾಗಿ ಸಮಾಜಕ್ಕೆ ಆದರ್ಶಪ್ರಾಯರಾಗಿ ಬಾಳಿರುವುದನ್ನು ಗುರುತಿಸಿ ಪ್ರತಿಷ್ಟಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೇ 8ರಂದು ಬೆಂಗಳೂರು SSB ತರಬೇತಿ ಅಕಾಡೆಮಿಯಲ್ಲಿದ, ಭಾರತದ ಸೇನಾಪಡೆಯ ಪ್ರಧಾನ ಕಮಾಂಡರ್ ಗಳ ಸಮಕ್ಷಮ ಗೌರವಿಸಲ್ಪಡುವವರಿದ್ದಾರೆ

Related posts

ಅಳದಂಗಡಿಯಲ್ಲಿ ಬೈಕ್ ಅಪಘಾತ, ಚಿಕಿತ್ಸೆ ಫಲಕಾರಿಯಾಗದೆ ಸವಾರ ಸಾವು

Suddi Udaya

ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ, ದೈಹಿಕ ಶಿಕ್ಷಣ ಶಿಕ್ಷಕ ಅಖಿಲ್ ಕುಮಾರ್ ವಿಧಿವಶ

Suddi Udaya

ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಸಂಭ್ರಮ ಉದ್ಘಾಟನೆ

Suddi Udaya

ಮದಕುಡೆ ಕುಟುಂಬಸ್ಥರಿಂದ ಪೆರಿಂಜೆ ಸ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಮಚ್ಚಿನ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಭಕ್ತವೃಂದದಿಂದ ಬಡ ಕುಟುಂಬಕ್ಕೆ ಆರ್ಥಿಕ ಧನಸಹಾಯ

Suddi Udaya

ಕಿಲ್ಲೂರು ದರ್ಖಾಸು ನಿವಾಸಿ ರಾಧಾಕೃಷ್ಣ ಆಚಾರ್ಯ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!