ಉಜಿರೆ: 53 ವರ್ಷ ಪ್ರಾಯದ ಮಹಿಳೆಯೊಬ್ಬರು ಮೊಣಕಾಲು ಸವೆತದಿಂದ ನಡೆದಾಡಲು ಕಷ್ಟಪಡುತ್ತಿದ್ದು, ಇವರಿಗೆ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಹರೀಶ್ ಬಿ.ಎಸ್ ಮತ್ತು ಡಾ. ಶತಾನಂದ ಪ್ರಸಾದ್ ರಾವ್ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿದರು.
ಟೋಟಲ್ ನೀ ರಿಪ್ಲೇಸ್ ಮೆಂಟ್ ಒಂದು ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಕೃತಕ ಲೋಹದ ಮೊಣಕಾಲಿನ ಕೀಲುಗಳನ್ನು ಅಳವಡಿಸಲಾಗುತ್ತದೆ. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಲವಾರು ಟೋಟಲ್ ಈಗಾಗಲೇ ರಿಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.
ಇದೀಗ ನುರಿತ ಶಸ್ತ್ರ ಚಿಕಿತ್ಸಾ ತಜ್ಞರು ಈ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಸಾಮಾನ್ಯ ಶಸ್ತ್ರಚಿಕಿತ್ಸೆ, ಥೈರಾಯ್ಡ್ ಶಸ್ತ್ರಚಿಕಿತ್ಸೆ, ಕಿವಿಯೆಲುಬು ದುರಸ್ತಿ, ಕಿಬ್ಬೊಟ್ಟೆ, ತೊಡೆಸಂಧಿಯ ಹರ್ನಿಯಾ ಶಸ್ತ್ರಚಿಕಿತ್ಸೆ, ಪಿತ್ತಕೋಶ ಸರ್ಜರಿ, ಅಪೆಂಡಿಕ್ಸ್ ಸರ್ಜರಿ, ಉಬ್ಬಿರುವ ರಕ್ತನಾಳದ ಸರ್ಜರಿ, ಮೂತ್ರಕೋಶದ ಸರ್ಜರಿ, ಮಧುಮೇಹ ಕಾಲುಗಳ ಸರ್ಜರಿ, ಎಲ್ಲಾ ತರಹದ ಅಪಘಾತದ ಚಿಕಿತ್ಸೆ, ಚರ್ಮದ ನಾಟಿ, ಗುದನಾಳದ ಶಸ್ತ್ರಚಿಕಿತ್ಸೆ ಮುಂತಾದ ಶಸ್ತ್ರಚಿಕಿತ್ಸಾ ವಿಭಾಗದ ಸೇವೆಗಳು ಈ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ನಿರ್ದೇಶಕ ಎಂ. ಜನಾರ್ದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.