September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಲ್ಲೇರಿಯಲ್ಲಿ ವಕೀಲರ ಕಚೇರಿ ಶುಭಾರಂಭ

ಕಲ್ಲೇರಿ: ಕಾನೂನಿನ ಅಡಿಯಲ್ಲಿ ಬದುಕುತ್ತಿರುವ ನಾವುಗಳು ಯಾವುದಾದರೊಂದು ಕಾರಣಕ್ಕೆ ವಕೀಲರ ಬಳಿಗೆ ಹೋಗಲೇಬೇಕು. ವಕೀಲರು ತಮ್ಮ ಕಾನೂನು ಸೇವೆಯನ್ನು ನಿಷ್ಠೆ ಪ್ರಾಮಾಣಿಕತೆಯಿಂದ ಮಾಡುವ ಮೂಲಕ ನೊಂದವರಿಗೆ ನ್ಯಾಯ ಕೊಡಬೇಕು ಎಂದು ಉದ್ಯಮಿ ಅತುಲ್ ಕುಮಾರ್ ಹಲೇಜಿ ಹೇಳಿದರು.

ಅವರು ಕಲ್ಲೇರಿಯಲ್ಲಿ ನೂತನವಾಗಿ ಶುಭಾರಂಭಗೊಂಡ ವಕೀಲರಾದ ಉದಯ ಬಿ ಕೆ ಬಂದಾರು ಮತ್ತು ಚಂಚಲಾಕ್ಷಿ ಹರೀಶ್ ಖಂಡಿಗ ಇವರ ನೇತೃತ್ವದ “ದಕ್ಷ ಅಸೋಸಿಯೇಟ್ಸ್” ವಕೀಲರ ಕಚೇರಿಯನ್ನು ದೀಪ ಪ್ರಜ್ವಲನೆ ಮಾಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಸಿಯಸ್ ಲೋಬೋ, ತಣ್ಣೀರುಪಂತ ಸೊಸೈಟಿ ಅಧ್ಯಕ್ಷ ಜಯಾನಂದ ಕಲ್ಲಾಪು, ತಣ್ಣೀರುಪಂಥ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಂ ಕಲ್ಲಾಪು, ಸಿವಿಲ್ ಇಂಜಿನಿಯರ್ ಸಾಮ್ರಾಟ್ ಕರ್ಕೇರ, ಕರಾಯ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರಾ, ಕರಾಯ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅನಂತ ಕೃಷ್ಣ ಕುಡ್ವಣ್ಣಾಯರವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಕೆ ಮಾಡಿದ್ದರು.

ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಹರೀಶ್ ಗೌಡ ಮಲ್ಲಿಗೆ, ಬಾರ್ಯ ಸೊಸೈಟಿ ಅಧ್ಯಕ್ಷ ಸೇಸಪ್ಪ ಸಾಲಿಯಾನ್, ಕಟ್ಟಡ ಮಾಲಿಕರಾದ ಚನನ ಗೌಡ, ಐಸಿರಿ ಮಹಿಳಾ ಮಂಡಳಿ ಅಧ್ಯಕ್ಷೆ ಸಾವಿತ್ರಿ ಹಾಕೋಟೆ ಹಾಗೂ ಸದಸ್ಯರು, ಸ್ಥಳೀಯರಾದ ಉಮೇಶ್ ಗೌಡ ಮಧುಶ್ರೀ, ಆನಂದ ಆಚಾರ್ಯ, ಜಯರಾಮ್ ಆಚಾರ್ಯ, ಪ್ರಭಾಕರ್ ಗೌಡ ಪೊಸಂದೋಡಿ, ಉಮೇಶ್ ಗೌಡ ಬನಾರಿ, ಮಹೇಶ್ ಜೆಂಕ್ಯಾರ್, ಸ್ನೇಕ್ ಅಶೋಕ್, ನೋಣಯ್ಯ ಗೌಡ, ಬೊಮ್ಮಾಯಿ ಬಂಗೇರ, ಹರೀಶ್ ಗೌಡ ಖಂಡಿಗ, ಶ್ರೀಮತಿ ಸುಚಿತ ಉದಯ, ವಕೀಲರೀರ್ವರ ಮಾತಪಿತರು, ಬಂಧುಗಳು, ಸ್ಥಳೀಯ ವಕೀಲರಾದ ವಿನಯ್, ಸಾಯಿನಾಥ್, ಜಿತೇಶ್ ಕೆ, ಇಂಜಿನಿಯರ್ ರಾಜಶೇಖರ್ ಮೊದಲಾದವರು ಉಪಸ್ಥಿತರಿದ್ದರು.

ವಕೀಲರಾದ ಉದಯ ಬಿ ಕೆ ಮತ್ತು ಶ್ರೀಮತಿ ಚಂಚಲಾಕ್ಷಿ ಹರೀಶ್ ರವರುಗಳು ಅತಿಥಿ ಗಣ್ಯರನ್ನು ಸ್ವಾಗತಿಸಿ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಉದ್ಯಮಿ ಕಿರಣ್ ಚಂದ್ರರು ವಕೀಲರಾದ ಉದಯ ಬಿಕೆ ಮತ್ತು ಚಂಚಲಾಕ್ಷಿ ಹರೀಶ್ ರವರುಗಳನ್ನು ಅಭಿನಂದಿಸಿ ಭಗವದ್ಗೀತೆ ಪುಸ್ತಕ ನೀಡಿ ಶುಭ ಹಾರೈಕೆ ಮಾಡಿದರು.

Related posts

ಗುರುವಾಯನಕರೆ ಕೆಎಂಜೆ, ಎಸ್‌ವೈ‌ಎಸ್ ವತಿಯಿಂದ ರಂಝಾನ್ ಕಿಟ್ ವಿತರಣೆ

Suddi Udaya

ಶಿಶಿಲ: ಬರ್ಗುಳದಲ್ಲಿ ಮರ ಬಿದ್ದು ಎರಡು ವಿದ್ಯುತ್ ಕಂಬಗಳು ಧರಾಶಾಹಿ: ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

Suddi Udaya

ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 57ನೇ ವರ್ಧಂತ್ಯುತ್ಸವ

Suddi Udaya

ಸಬ್ ಸ್ಟೇಷನ್ಗಳನ್ನು ನಿರ್ಮಿಸಿ ಬೆಳ್ತಂಗಡಿ ತಾಲೂಕಿನ ಜನರಿಗೆ ನಿರಂತರವಾಗಿ ವಿದ್ಯುತ್ ಪೂರೈಸಲು ಸಮಸ್ಯೆಯಾಗದಂತೆ ಅಭಿವೃದ್ದಿ ಪಡಿಸಬೇಕೆಂದು ಶಾಸಕ ಹರೀಶ್ ಪೂಂಜರಿಂದ ಇಂಧನ ಸಚಿವರಿಗೆ ಮನವಿ

Suddi Udaya

ಬೆಳ್ತಂಗಡಿ : ಹುಣ್ಸೆಕಟ್ಟೆ ಕಾರ್ಯಕ್ಷೇತ್ರದ “ನಂದಗೋಕುಲ” ಸ್ವ-ಸಹಾಯ ಸಂಘದ ರಚನೆ

Suddi Udaya

ಉಜಿರೆ : ಕೀರ್ತಿಶೇಷ ಪ್ರೊ. ಎನ್. ಜಿ. ಪಟವರ್ಧನ್ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಚಾರ ಸಂಕಿರಣ

Suddi Udaya
error: Content is protected !!