April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ: ಅಲ್ಲಲ್ಲಿ ಮರ ಬಿದ್ದು, ವಿದ್ಯುತ್, ಮನೆಗಳಿಗೆ ಹಾನಿ: ತಕ್ಷಣ ಸ್ಪಂದಿಸಿದ ಹರೀಶ್ ಪೂಂಜ

ಕೊಕ್ಕಡ: ಬೆಳ್ತಂಗಡಿ ತಾಲೂಕಿನಾದ್ಯಂತ ಮೇ 11 ರಂದು ಸಂಜೆ ಬೀಸಿದ ಗಾಳಿ ಮಳೆಗೆ ಅಲ್ಲಲ್ಲಿ ಕೊಕ್ಕಡ ಗ್ರಾಮದಲ್ಲಿ ಮರ ಬಿದ್ದು, ಮನೆ, ಸೋತ್ತುಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಕೊಡಿಂಗೇರಿ ವಿಶ್ವನಾಥ ರವರ ಮನೆ ಬದಿ ಮಳೆಯಿಂದಾಗಿ ಕಾಪೌಂಡ್ ಜರಿದು ಹಾನಿಯಾಗಿ ರೂ. 2ಲಕ್ಷ ನಷ್ಟವಾಗಿದೆ.

ಹರೀಶ್ ಕೆಂಗುಡೆಲ್., ಕುಂಜಮ್ಮ, ಸಂದೀಪ್ ಕೊರಿಗದ್ದೆ, ಕೇಶವ ಹಳ್ಳಿಂಗೇರಿಯವರ ಮನೆ ಮೇಲ್ಛಾವಣಿ ಹಾನಿಯಾಗಿದೆ.

ಕೂಡಲೇ ಸ್ಪಂದಿಸಿದ ಶಾಸಕ ಹರೀಶ್ ಪೂಂಜರವರು ಪಂ. ಅಧ್ಯಕ್ಷರಾದ ಯೋಗೀಶ್ ಆಲಂಬಿಲರವರ ಮೂಲಕ ಹಾನಿಯಾದ ಮನೆಗಳ ರಿಪೇರಿಗೆ ಪೂರ್ತಿ ಆರ್ಥಿಕ ನೆರವುವನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಪವಿತ್ರಾ, ಸದಸ್ಯರಾದ ಪುರುಷೋತ್ತಮ, ಶ್ರೀಮತಿ ಲತಾ, ಬೂತ್ ಸಮಿತಿಯ ಅಧ್ಯಕ್ಷರು ಶ್ರೀನಾಥ್, ವಿನಯ್ ಹಾರ, ಕಾರ್ಯದರ್ಶಿ ಕಿಶೋರ್ ಕುತ್ಯೆ, ಕಾರ್ಯಕರ್ತ ಸೇಸಪ್ಪ ಮೂಲ್ಯ, ಮತ್ತಿತ್ತರ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಮಳೆಯ ರಭಸಕ್ಕೆ ಕಣಿಯಾಗಿ ಮಾರ್ಪಾಡುಗೊಂಡ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಕಾಲುದಾರಿ: ಕನ್ಯಾಡಿ, ಧರ್ಮಸ್ಥಳ, ಉಜಿರೆಗೆ ಹೋಗುವ ಈ ಕಾಲುದಾರಿಯ ದುರಸ್ತಿಗೆ ಗ್ರಾಮಸ್ಥರ ಒತ್ತಾಯ

Suddi Udaya

ಬಳಂಜ ಬೀಳುವ ಹಂತದಲ್ಲಿದ್ದ ಮನೆಯನ್ನು ಸರಿಪಡಿಸಿದ ಗ್ರಾಮಸ್ಥರು, ಸತೀಶ್ ದೇವಾಡಿಗರ ಸೇವಾ ಮನೋಭಾವ ಶ್ಲಾಘನೀಯ

Suddi Udaya

ಇಂದಬೆಟ್ಟು ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳ

Suddi Udaya

ಭಾರೀ ಮಳೆಗೆ ಕಳೆಂಜ ಕುಕ್ಕಾಜೆಯಲ್ಲಿ ಮನೆಯ ಹಿಂಬದಿಯ ಗೋಡೆ ಕುಸಿತ

Suddi Udaya

ಅಳದಂಗಡಿ ಅರಮನೆಗೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಭೇಟಿ

Suddi Udaya

ಕೊಕ್ಕಡ ಗ್ರಾ.ಪಂ.ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂತೆಗೆತ: ಶಿಸ್ತು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ತಾ.ಪಂ. ವ್ಯವಸ್ಥಾಪಕ ಪ್ರಶಾಂತ್

Suddi Udaya
error: Content is protected !!