April 2, 2025
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಲಾಯಿಲ ಪ್ರಸನ್ನ ಪ.ಪೂ. ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಫೌಂಡೇಶನ್‌ ತರಗತಿ ಆರಂಭ

ಲಾಯಿಲ: ಪ್ರಸನ್ನ ಪಿ.ಯು ಕಾಲೇಜು ಇದರ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾಥಿ೯ಗಳಿಗೆ ಫೌಂಡೇಶನ್‌ ತರಗತಿಯನ್ನು ಮೇ 15 ರಂದು ಆರಂಭಿಸಲಾಯಿತು.

ಕಾಯ೯ಕ್ರಮದ ಉದ್ಘಾಟನೆಯನ್ನು ಕಾಲೇಜಿನ ಅಧ್ಯಕ್ಷ ಗಂಗಾಧರ ಗೌಡರು ನೆರವೇರಿಸಿದರು. ಹಾಗೆಯೇ ವಿದ್ಯಾಥಿ೯ಗಳಿಗೆ ಶುಭಹಾರೈಸಿದರು. ಅಲ್ಲದೆ ಶಿಕ್ಷಣದ ಮಹತ್ವವನ್ನು ವಿದ್ಯಾಥಿ೯ಗಳಿಗೆ ಮನದಟ್ಟುವಾಗುವಂತೆ ಹೇಳಿ ಇವತ್ತಿನ ಸ್ಪಧಾ೯ತ್ಮಕ ಜಗತ್ತಿಗೆ ಅಗತ್ಯವಿರುವ ತರಬೇತಿಯ ಬಗ್ಗೆ ವಿವರಿಸಿದರು.

ಕಾಯ೯ಕ್ರಮದ ಮುಖ್ಯ ಅತಿಥಿಯಾದ ಶ್ರಾವಣಿ ಮತ್ತು ಪ್ರಾಥ೯ನ ವಿದ್ಯಾ ಸಂಸ್ಥೆ ಜಗಳೂರು ಇಲ್ಲಿನ ಅಧ್ಯಕ್ಷೆ ಶ್ರೀಮತಿ ನಾಗರತ್ನರವರು ವಿದ್ಯಾಥಿ೯ಗಳು ಈ ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು.

ಹಾಗೆಯೇ ಎ ಎ ಅಕಾಡೆಮಿಯ ಕಾಯ೯ದಶಿ೯ಯಾದ ಅನಿಲ್‌ ಕುಮಾರ್‌ಎಂ ನೀಟ್, ಜೆಇಇ, ಸಿಇಟಿಯ ತರಬೇತಿಯ ಬಗ್ಗೆ ಸ್ಪುಟವಾಗಿ ವಿವರಿಸಿದರು. ವೇದಿಕೆಯಲ್ಲಿ ಎ ಎ ಅಕಾಡೆಮಿ ಇದರ ನಿದೇ೯ಶಕರಾದ ಅಣ್ಣೇಶ್‌ ಕೆ ಎಚ್, ಸಂಸ್ಥೆಯ ಆಡಳಿತಾಧಿಕಾರಿ ಕೃಪಾ ಆರ್‌ ಉಪಸ್ಥಿತರಿದ್ದರು.

ಪ್ರಾಚಾಯ೯ರಾದ ಚಂದ್ರಶೇಖರ ಗೌಡರವರು ಸ್ವಾಗತಿಸಿ ಹಾಗೆಯೇ ಪ್ರಾಸ್ತಾವಿಕ ಭಾಷಣ ಮಾಡಿದರು. ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಅಂಬು ಕುಮಾರ್‌ ಧನ್ಯವಾದವಿತ್ತರು.

Related posts

ನಿಡ್ಲೆ ಸರಕಾರಿ ಪ್ರೌಢಶಾಲೆ ನೂತನ ಹಳೆ ವಿದ್ಯಾರ್ಥಿ ಸಂಘ ರಚನೆ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಉಚಿತ ದಂತ ತಪಾಸಣಾ ಶಿಬಿರ

Suddi Udaya

ಎ.30: ಲಾಯಿಲ 48ನೇ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಧರ್ಮಸ್ಥಳ: ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಸಂಭ್ರಮ: ಪ್ರಧಾನಮಂತ್ರಿ, ಉಪರಾಷ್ಟ್ರಪತಿ ಹಾಗೂ ವಿವಿಧ ಗಣ್ಯರಿಂದ ಶುಭಾಶಯ

Suddi Udaya

ಸೆ.1-3: ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ 352ನೇ ಆರಾಧನಾ ಮಹೋತ್ಸವ

Suddi Udaya

ಮಂತ್ರದೇವತಾ ದೈವಸ್ಥಾನದ ಧರ್ಮದರ್ಶಿ ಮನೋಜ್ ಕಟ್ಟೆಮಾರ್ ಅವರ ಹುಟ್ಟುಹಬ್ಬ

Suddi Udaya
error: Content is protected !!