April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮೇ 17ರಿಂದ ಪ್ರಾರಂಭಗೊಂಡು ಮೇ 22ರ ತನಕ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ.

ಇಂದು ತಂತ್ರಿಗಳ ಆಗಮನ, ಆಚಾರ್ಯವರಣ, ಪ್ರಾರ್ಥನೆ,ಸುದರ್ಶನ ಹೋಮ,ಆವಾಹನೆ, ಅಂಕುರಾರೋಹಣ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತುಕಲಶಾಭಿಷೇಕ ಮೊದಲಾದ ಕಾರ್ಯಕ್ರಮಗಳು ನೆರವೇರಿದವು.


ಬ್ರಹ್ಮಕಲಶೋತ್ಸವದ ಕಚೇರಿಯನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಮಲಾಕ್ಷ ಪೂಜಾರಿ, ಉಗ್ರಾಣವನ್ನು ಪ್ರಧಾನ ಅರ್ಚಕ ಗೋಪಾಲಕೃಷ್ಣ ಇರ್ವತ್ರಾಯ, ಅನ್ನ ಛತ್ರವನ್ನು ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ಜೈನ್ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ, ಕಾರ್ಯದರ್ಶಿಗಳಾದ ಲೋಕೇಶ್ ಶೆಟ್ಟಿ, ದಿವಾಕರ ಪರಪಿತ್ತಿಲು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎಚ್.ಈಶ್ವರಗೌಡ, ಕೋಶಾಧಿಕಾರಿ ಸುದರ್ಶನ ಗೌಡ, ಅರ್ಚಕ ದಿವಾಕರ ಭಟ್, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಪ್ರಮೀಳಾ ರಾಜೇಶ್,ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸಾದ್ ಕೆ.ವಿ,ಹೊರೆಕಾಣಿಕೆ ಸಮಿತಿ ಸಂಚಾಲಕ ಸುರೇಶ್ ನಾಯ್ಕ ಮೆಟ್ಟಿನಬಾಗಿಲು, ಉಗ್ರಾಣ ಸಮಿತಿ ಸಂಚಾಲಕ ಗೋಪಾಲಕೃಷ್ಣ ಮಡಿಯೂರು ವಿವಿಧ ಸಮಿತಿಗಳ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.
ಹೊರೆಕಾಣಿಕೆ: ಕಕ್ಕಿಂಜೆಯ ಇಷ್ಟ ದೇವತಾ ಬೆಟ್ಟದ ಬಳಿಯಿಂದ ಹೊರಟ ಹಸಿರುಕಾಣಿಕೆಯ ಮೆರವಣಿಗೆಯನ್ನು, ಹಿರಿಯ ಕೃಷಿಕ ಮಠದ ಮಜಲು ಅನಂತ ರಾವ್ ಉದ್ಘಾಟಿಸಿದರು. ತೋಟತ್ತಾಡಿ, ಚಿಬಿದ್ರೆ, ನೆರಿಯ, ಮುಂಡಾಜೆ, ಕಲ್ಮಂಜ, ಪುದುವೆಟ್ಟು ಗ್ರಾಮಸ್ಥರು ಭಾಗವಹಿಸಿ ಶೋಭಾ ಯಾತ್ರೆ ಮೂಲಕ ದೇವಸ್ಥಾನಕ್ಕೆ ಹೊರೆ ಕಾಣಿಕೆ ಸಮರ್ಪಿಸಿದರು.

Related posts

ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ದಿನಾಚರಣೆ

Suddi Udaya

ಭಾರತೀಯ ಸೇನೆಗೆ ಆಯ್ಕೆಯಾದ ಬಳಂಜದ ಯುವಕ ಮನೋಹರ್ ಪೂಜಾರಿಯವರಿಗೆ ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ವತಿಯಿಂದ ಗೌರವಾರ್ಪಣೆ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಮಡಂತ್ಯಾರು: ಪಾರೆಂಕಿ ನಿವಾಸಿ ಕೃಷಿಕ ಪಿ ಶಾಂತರಾಮ ಹೃದಯಾಘಾತದಿಂದ ನಿಧನ

Suddi Udaya

ಮಾಡ ಪ್ರೀಮಿಯರ್ ಲೀಗ್ – ಶಾರದಾಂಭ ಕ್ರಿಕೆಟರ್ಸ್ ಪ್ರಥಮ

Suddi Udaya

ಮಚ್ಚಿನ : ಸರಕಾರಿ ಪ್ರೌಢ ಶಾಲೆಯಲ್ಲಿ ಗಾಂಧೀ ಜಯಂತಿ ಆಚರಣೆ

Suddi Udaya
error: Content is protected !!