ಬೆಳ್ತಂಗಡಿ: ಇತ್ತೀಚೆಗೆ ಅಗಲಿದ ಹವ್ಯಾಸಿ ಹಿಮ್ಮೇಳ ಕಲಾವಿದರಾದ ದಿವಂಗತ ನರಸಿಂಹಮೂರ್ತಿ ಕುಂಟಿನಿ ಮತ್ತು ದಿವಂಗತ ಸುರೇಶ್ ಪೈ ಗುರುವಾಯನಕೆರೆ ಇವರ ಸಂಸ್ಮರಣಾರ್ಥ ಶ್ರೀ ಪಂಚದುರ್ಗಾ ಯಕ್ಷಗಾನ ಕಲಾ ಸಂಘ ಕೊಯ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಮೇ15 ರಂದು ಶ್ರೀ ವನದುರ್ಗಾ ದೇವಾಲಯ ಮಲೆಬೆಟ್ಟು ಇಲ್ಲಿ ಶ್ರದ್ಧಾಂಜಲಿ ಮತ್ತು ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ದೇವಸ್ಥಾನದ ಮೊಕ್ತಸರ ಗಣೇಶ್ ಭಟ್, ರವೀಂದ್ರನಾಥ, ಹಿರಿಯ ಸಾಹಿತಿಗಳಾದ ಪ. ರಾಮಕೃಷ್ಣ ಶಾಸ್ತ್ರಿ, ಗೇರುಕಟ್ಟೆಯ ಪ್ರೊ. ಮಧೂರು ಮೋಹನ ಕಲ್ಲೂರಾಯ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕರಾದ ರಾಮಕೃಷ್ಣ ಭಟ್ ನಿನ್ನಿಕಲ್ಲು ನಿರೂಪಿಸಿದ ಕಾರ್ಯಕ್ರಮದಲ್ಲಿ ಅಗಲಿದ ಕಲಾವಿದರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ನರಕಾಸುರ ಮೋಕ್ಷ ಎಂಬ ಕಥಾ ಆಖ್ಯಾನವನ್ನು ಅಗಲಿದ ಕಲಾವಿದರ ಸಂಸ್ಕಾರಣಾರ್ಥ ತಾಳಮದ್ದಳೆ ರೂಪದಲ್ಲಿ ಪ್ರಸ್ತುತಪಡಿಸಲಾಯಿತು ಹಿಮ್ಮೇಳದಲ್ಲಿ ಭಾಗವತರಾಗಿ ಕಾರ್ತಿಕ್ ಬರೆಂಗಾಯ, ಅವನೀಶ ಭಟ್, ಚಂಡೆ ಮತ್ತು ಮೃದಂಗದಲ್ಲಿ ಆದಿತ್ಯ ಹೊಳ್ಳ, ಓಜಸ್ ನಾರಾಯಣ ಸಹಕರಿಸಿದರು. ಮುಮ್ಮೇಳದಲ್ಲಿ ಪ್ರೊ. ಮಧೂರು ಮೋಹನ ಕಲ್ಲೂರಾಯ, ಪ. ರಾಮಕೃಷ್ಣ ಶಾಸ್ತ್ರಿ, ಬಾಸಮೆ ನಾರಾಯಣ ಭಟ್, ವಿಜಯಕುಮಾರ್ ಕೊಯ್ಯರು, ರಾಮಕೃಷ್ಣ ಭಟ್ ನಿನ್ನಿಕಲ್ಲು ನಿರ್ವಹಿಸಿದರು.