24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

‘ಸ್ಟ್ಯಾಟ್‌ಟೆಕ್- 2023’ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯ ಸಮಾರೋಪ

ಉಜಿರೆ : ವೈದ್ಯಕೀಯ ರಂಗದಲ್ಲಿ ಸಂಖ್ಯಾಶಾಸ್ತ್ರದ ಬಳಕೆಯು ಹೇರಳವಾಗಿದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.
ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಖ್ಯಾಶಾಸ್ತ್ರ ವಿಭಾಗವು ಆಯೋಜಿಸಿದ ?ಸ್ಟ್ಯಾಟ್‌ಟೆಕ್ -೨೦೨೩’ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಾಗುವ ಮುಖ್ಯ ಬದಲಾವಣೆಗಳನ್ನು ಗುರುತಿಸುವಲ್ಲಿ ಸಂಖ್ಯಾಶಾಸ್ತ್ರದ ಪಾಲು ದೊಡ್ಡದಿದೆ, ಹೊಸ ಔಷಧಿಗಳ ಪರಿಣಾಮಗಳನ್ನು ತಿಳಿಯುವಲ್ಲಿ ಸಂಖ್ಯಾಶಾಸ್ತ್ರದ ಹಲವು ಮಜಲುಗಳು ಉಪಯೋಗವಾಗುತ್ತಿವೆ ಎಂದರು. ಈ ಸಂದರ್ಭದಲ್ಲಿ ‘ಎನಪೋಯಾ’ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ವಿಜಯ್‌ಕುಮಾರ್ ‘ಝಿರಂ’ ಔಷಧಿ ಕುರಿತಾದ ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರ ಮಹತ್ವವನ್ನು ತಿಳಿಸಿದ್ದನ್ನು ನೆನಪಿಸಿಕೊಂಡರು.
ಜಗತ್ತು ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶಜ್ಞಾನದ ಸಹಾಯಗಳಿಂದ ಮುನ್ನಡೆಯುತ್ತಿರುವ ಈ ಕಾಲದಲ್ಲಿ ಸಂಖ್ಯಾಶಾಸ್ತ್ರ ಅಧ್ಯಯನ ಮಾಡುತ್ತಿರುವವರಿಗೆ ಅವಕಾಶಗಳು ಹೇರಳವಾಗಿವೆ, ಬಹುತೇಕ ಸಂಶೋಧನೆಗಳು ತಂತ್ರಾಂಶ ಆಧಾರಿತವಾಗಿರುವುದರಿಂದ, ಅವೆಲ್ಲದರ ಅಭಿವೃದ್ಧಿಗೆ ಸಂಖ್ಯಾಶಾಸ್ತ್ರದ ಅವಶ್ಯಕತೆಯು ಹೆಚ್ಚಾಗಿದೆ.
ವಿವಿಧ ವೃತ್ತಿಗಳಲ್ಲಿ ಮಾತ್ರವಲ್ಲದೆ ಸಂಶೋಧನಾ ಕ್ಷೇತ್ರದಲ್ಲಿಯೂ ಸಂಖ್ಯಾಶಾಸ್ತ್ರದಲ್ಲಿ ಅವಕಾಶಗಳು ಅಧಿಕವಾಗಿವೆ. ಆದರೆ ಈ ಸಂಖ್ಯಾಶಾಸ್ತ್ರದಲ್ಲಿ ಅಧ್ಯಯನ, ಪರಿಶ್ರಮವಿಲ್ಲದೆ ಯಶಸ್ಸು ಗಳಿಸುವುದು ಕಷ್ಟಸಾಧ್ಯ ಎಂದು ಪುನರ್‌ಜ್ಞಾಪಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಶಶಿಶೇಖರ್ ಎನ್ ಕಾಕತ್ಕರ್ ಮಾತನಾಡಿದರು. ಅಂತರ್ ಕಾಲೇಜು ಸ್ಪರ್ಧೆಗಳು ಸಂಭ್ರಮದ ವಾತಾವರಣವನ್ನು ಸೃಷ್ಟಿಸುತ್ತದೆ. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ನಾಯಕತ್ವ ಗುಣ, ಆಶಾವಾದಗಳನ್ನು ಅಭಿವೃದ್ಧಿ ಪಡಿಸುತ್ತವೆ, ಈ ರೀತಿ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಎಸ್.ಡಿ.ಎಂ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗವು ಮುಂಚೂಣಿಯಲ್ಲಿದೆ ಎಂದು ಅಭಿನಂದಿಸಿದರು.
ಸ್ಪರ್ಧೆಯಲ್ಲಿ 7 ಕಾಲೇಜುಗಳ 92 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು 6 ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ಜರುಗಿದವು. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಸಮಗ್ರ ಪ್ರಶಸ್ತಿ ವಿಜೇತರಾದರೆ, ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ವಿದ್ಯಾರ್ಥಿಗಳು ಎರಡನೇ ಸ್ಥಾನ ಪಡೆದುಕೊಂಡರು.

Related posts

ವಾಣಿ ಕಾಲೇಜಿನಲ್ಲಿ ಓಣಂ ಆಚರಣೆ

Suddi Udaya

ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಜ.4: ಗುರುವಾಯನಕೆರೆ ವಿದ್ವತ್ ಪಿ ಯು. ಕಾಲೇಜಿನಲ್ಲಿ ತಾಲೂಕು ಮಟ್ಟದ ಪುರುಷರ ಹಾಗೂ ಆಹ್ವಾನಿತ ಮಹಿಳೆಯರ ವಾಲಿಬಾಲ್ ಪಂದ್ಯಾಟ

Suddi Udaya

ಮುಂಡಾಜೆ: ಮೂಲಾರು ದರ್ಖಾಸು ನಿವಾಸಿ ಕಮಲಾ ನಾಯ್ಕ ನಿಧನ

Suddi Udaya

ತಿರುಮಲೇಶ್ವರ ಭಟ್ಟರಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟ ಪ್ರಶಸ್ತಿ

Suddi Udaya

ಗುಂಡೂರಿ: ಗುಡ್ಡ ಜರಿದು ಮನೆ ಬದಿಯಲ್ಲಿ ಬಿದ್ದ ಮಣ್ಣಿನ ರಾಶಿಯ ತೆರವು ಕಾರ್ಯ

Suddi Udaya
error: Content is protected !!