ಶ್ರೀ ಧ .ಮಂ. ಪ್ರೌಢ ಶಾಲೆಯಲ್ಲಿ ಭೌತಶಾಸ್ತ್ರ ಶಿಕ್ಷಕರ ಕಾರ್ಯಾಗಾರ

Suddi Udaya

ಧರ್ಮಸ್ಥಳ: ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯಲ್ಲಿ ಭೌತಶಾಸ್ತ್ರ  ಶಿಕ್ಷಕರ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿ ವಿವಿಧ ವಿಷಯಗಳಿಗೆ ಹಾಗೂ ವಿಚಾರಕ್ಕೆ  ಸಂಬಂಧಪಟ್ಟ ಹಲವಾರು ಕಾರ್ಯಗಾರಗಳು ನಡೆಯಲಿದ್ದು , ಅದರ ಮುನ್ಸೂಚನೆಯೊಂದಿಗೆ  ಸರಣಿ ಕಾರ್ಯಗಾರಗಳ ಉದ್ಘಾಟನೆಯನ್ನು ಉಜಿರೆಯ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ ಚಂದ್ರ  ಎಸ್ .  ದೀಪ ಬೆಳಗಿಸಿ ಉದ್ಘಾಟಿಸಿ ದರು .   

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಕ್ಷಕರು ಬದಲಾಗುತ್ತಿರುವ ವರ್ತಮಾನಕ್ಕೆ ಸರಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸದಾ ಹೊಸತನವನ್ನು ಕಲಿಯುವ ವಾಂಛೆ  ಇರಬೇಕು. ಚಟುವಟಿಕೆಗಳ ಮುಖಾಂತರ ಕಲಿತಂತಹ ವಿದ್ಯೆ ಯಾವತ್ತೂ  ಶಾಶ್ವತವಾಗಿರುತ್ತದೆ. ಮನದಾಳಕ್ಕೆ ಇಳಿದು ಸುಲಭವಾಗಿ ಅರ್ಥವಾಗುತ್ತದೆ ಹೀಗಾಗಿ ವಿಜ್ಞಾನ ಎಂದರೆ ಪ್ರಾಯೋಗಿಕವಾಗಿ ಕಲಿಸಿದರೆ ಮಾತ್ರ ಅದು ಮಕ್ಕಳ ಮನಸ್ಸಿನೊಳಕ್ಕೆ ಇಳಿಯುತ್ತದೆ ಎಂದರು.   

ಈ ಕಾರ್ಯಗಾರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ  ಬಿ ಸೋಮಶೇಖರ್ ಶೆಟ್ಟಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ವಿವಿಧ ಶಾಲಾ ಮುಖ್ಯೋಪಾಧ್ಯಾಯರುಗಳು ಹಾಗೂ ವಿಜ್ಞಾನ ಶಿಕ್ಷಕರುಗಳು ಭಾಗವಹಿಸಿದ್ದರು. ಸಹ ಶಿಕ್ಷಕಿ ಶ್ರೀಮತಿ ವೀಣಾ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಸಿಬಿಎಸ್ಸಿ ಉಜಿರೆ ಇದರ ಮುಖ್ಯೋಪಾಧ್ಯಾಯ  ಮನಮೋಹನ್ ನಾಯಕ್ ಸ್ವಾಗತಿಸಿದರು.

Leave a Comment

error: Content is protected !!