April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ದ.ಕ ಜಿಲ್ಲೆಯಲ್ಲಿ ಕಾಡಿದ ಕುಡಿಯುವ ನೀರಿನ ಸಮಸ್ಯೆ ಜಿಲ್ಲಾಡಳಿತ ಕೂಡಲೇ ಶಾಸಕರುಗಳ ಸಭೆ ಕರೆಯುವಂತೆ ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಆಗ್ರಹ

ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದ್ದು, ಜನರು ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ದ.ಕ ಜಿಲ್ಲಾಡಳಿತ ಕೂಡಲೇ ಜಿಲ್ಲೆಯ ಶಾಸಕರುಗಳ ಸಭೆ ಕರೆದು ನೀರಿನ ಸಮಸ್ಯೆ ನಿವಾರಣೆಗೆ ಇದರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಆಗ್ರಹಿಸಿದ್ದಾರೆ.


ಅವರು ಮೇ.20ರಂದು ಬೆಳ್ತಂಗಡಿ ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ಜನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೆಲ ಸ್ವಯಂ ಸೇವಾ ಸಂಸ್ಥೆಗಳು ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಿದ್ದಾರೆ. ಕೆಲ ವ್ಯಕ್ತಿಗಳು ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ ತಕ್ಷಣ ಜಿಲ್ಲಾಡಳಿತ ಜಿಲ್ಲೆಯ ಶಾಸಕರುಗಳ ಸಭೆ ಕಡೆದು ಇದನ್ನು ಪರಿಹಾರ ಮಾಡುವ ಪ್ರಯತ್ನಗಳನ್ನು ನಡೆಸಬೇಕು ಎಂದರು.
ಶಾಲಾ ಆರಂಭ ಮುಂದೂಡಿ:
ಸರಕಾರದ ಸುತ್ತೋಲೆ ಪ್ರಕಾರ ಮೇ 29ಕ್ಕೆ ಶಾಲಾ-ಕಾಲೇಜುಗಳು ಪ್ರಾರಂಭಗೊಳ್ಳಬೇಕಗಿದೆ. ಆದರೆ ಹವಾಮಾನ ಇಲಾಖೆ ದ.ಕ ಜಿಲ್ಲೆಯಲ್ಲಿ ಜೂನ್ ಒಂದರ ನಂತರ ಮುಂಗಾರು ಮಳೆ ಆರಂಭಗೊಳ್ಳಲಿದೆ ಎಂದು ಸೂಚನೆ ನೀಡಿದ್ದಾರೆ. ಶಾಲಾ ಕಾಲೇಜು ಆರಂಭವಾದಾಗ ದೂರದ ಊರಿನಿಂದ ಹಾಸ್ಟೇಲ್‌ಗಳಿಗೆ ಮಕ್ಕಳು ಬರಲಿದ್ದು, ಹಾಸ್ಟೇಲ್‌ನಲ್ಲಿ ನೀರಿನ ಸಮಸ್ಯೆ ಇದೆ. ಶಾಲೆಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ನೀರಿನ ಸಮಸ್ಯೆ ಪರಿಹಾರವಾಗುವ ತನಕ ಶಾಲಾ-ಕಾಲೇಜಗಳ ಆರಂಭವನ್ನು ಮುಂದೂಡುವಂತೆ ಅವರು ಒತ್ತಾಯಿಸಿದರು.
ಇದೇ ಮೇ 22 ರಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಶಾಸಕರಾಗಿ ಚುನಾಯಿತರಾದ ಹಿನ್ನಲೆಯಲ್ಲಿ ಅವರಿಗೆ ಗೌರವಾರ್ಪಣೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಭೆ ಕಿನ್ಯಮ್ಮ ಸಭಾ ಭವನದಲ್ಲಿ ನಡೆಯಲಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ಈ ಸಂದರ್ಭ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

Related posts

ಸುರ್ಯಗುತ್ತು ಡಾ. ಸತೀಶ್ಚಂದ್ರ ಅವರ ಹಿರಿಯ ಸಹೋದರಿ ಬಂಟ್ವಾಳ ಇರ್ವತ್ತೂರು ಗುತ್ತು ಶ್ರೀಮತಿ ವಿಜಯಮ್ಮ ನಿಧನ

Suddi Udaya

ಬೆಳಾಲು ಗ್ರಾ. ಪಂ. ಅಧ್ಯಕ್ಷರಾಗಿ ವಿದ್ಯಾಶ್ರೀನಿವಾಸ ಹಾಗೂ ಉಪಾಧ್ಯಕ್ಷರಾಗಿ ಗೀತಾ ಅವಿರೋಧ ಆಯ್ಕೆ

Suddi Udaya

ಧರ್ಮಸ್ಥಳ ಗ್ರಾ.ಪಂ. ನಲ್ಲಿ ಆಯುಷ್ಮಾನ್ ಭವ ಆರೋಗ್ಯ ಸೇವೆಗೆ ಚಾಲನೆ

Suddi Udaya

ಉಜಿರೆಯ ಡಾ. ಟಿ. ಕೃಷ್ಣಮೂರ್ತಿ ರವರಿಗೆ ಹವ್ಯಕ ಶಿಕ್ಷಣ ರತ್ನ ಪ್ರಶಸ್ತಿ

Suddi Udaya

ಬೆಳ್ತಂಗಡಿ ಯಲ್ಲಿ ಡಾ| ರಂಜನ್ ಕುಮಾರ್ ಅವರ ಅನುಗ್ರಹ ಕ್ಲಿನಿಕ್ ಶುಭಾರಂಭ     

Suddi Udaya

ಬೈಲಂಗಡಿ :ಶ್ರೀ ಸೋಮನಾಥೇಶ್ವರ ದೇವಸ್ಥಾನ ತೋಟತ್ತಾಡಿ ಬ್ರಹ್ಮ ಕಲಶೋತ್ಸವ ಕಾರ್ಯಾಲಯ ಉದ್ಘಾಟನೆ

Suddi Udaya
error: Content is protected !!