27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಶಾಲಾ ವಾಹನ ಡಿಕ್ಕಿ: ಪಾದಾಚಾರಿ ಕಡಿರುದ್ಯಾವರ ನಿವಾಸಿ ಸುರೇಶ್‌ ನಾಯ್ಕ ಮೃತ್ಯು

ಬೆಳ್ತಂಗಡಿ; ಗುರುವಾಯನಕೆರೆ ಪೇಟೆಯ ಪ್ರಯಾಣಿಕರ ತಂಗುದಾಣದ ಬಳಿ ಪಾದಚಾರಿಯೊಬ್ಬರಿಗೆ ಶಾಲಾ ವಾಹನ ಡಿಕ್ಕಿ ಹೊಡೆದು, ಆಸ್ಪತ್ರೆಗೆ ‌ಸಾಗಿಸುವ ಹಂತದಲ್ಲಿ ಅವರು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.

ಕಡಿರುದ್ಯಾವರ ಗ್ರಾಮದ ಗಜಂತ್ತೋಡಿ ದರ್ಖಾಸು ಮನೆ ಸುರೇಶ್‌ ನಾಯ್ಕ ಮೃತಪಟ್ಟವರು. ‌‌ಕುವೆಟ್ಟು ಗ್ರಾಮದ ಗುರುವಾನಕೆರೆ ಜಂಕ್ಷನ್‌ ಬಳಿ ಪಾದಾಚಾರಿ ಸುರೇಶ ನಾಯ್ಕ ಅವರು ರಸ್ತೆ ಬದಿಯಲ್ಲಿ ರಸ್ತೆ ದಾಟಲು ನಿಂತು ಕೊಂಡಿರುವಾಗ ಬೆಳ್ತಂಗಡಿ ಕಡೆಯಿಂದ ಮದ್ದಡ್ಕ ಕಡೆಗೆ ಖಾಸಗಿ ಶಾಲಾ ಬಸ್ಸ್‌ ನ್ನು ಅದರ ಚಾಲಕ ಶಶಿಧರ ಎಂಬವರು ದುಡುಕುತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಸುರೇಶ ನಾಯ್ಕ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಹಿಂಬದಿ ಚಕ್ರ ಅವರ ಕಾಲಿನ ಮೇಲೆ ಹರಿದು ಹೋಗಿ, ಅವರಿಗೆ ಎಡ ಕಾಲಿನ ಪಾದಕ್ಕೆ, ಎಡ ಕಾಲಿನ ಕೋಲು ಕಾಲಿಗೆ, ಎಡ ಕೆನ್ನೆಗೆ, ಎಡ ಸೊಂಟಕ್ಕೆ ತೀವ್ರ ಗಾಯಗಳಾಗಿದ್ದು ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಸಾಗಿಸುತ್ತಿರುವಾಗಲೇ ದಾರಿ ಮಧ್ಯ ಮೃತ ಪಟ್ಟರೆನ್ನಲಾಗಿದೆ. ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಅಗತ್ಯ ಕಾನೂನು ಕ್ರಮ ಜರುಗಿಸಿದ್ದಾರೆ‌.

Related posts

ಅಯೋಧ್ಯೆ ರಾಮ ದೇವರ ಪ್ರತಿಷ್ಠಾಪನೆಯ ಪ್ರಯುಕ್ತ ಮದ್ದಡ್ಕ ಭಜನಾ ಮಂದಿರದಲ್ಲಿ ವಿಶೇಷ ಭಜನಾ ಕಾರ್ಯಕ್ರಮ: ಕರಸೇವರಿಗೆ ಗೌರವಾರ್ಪಣೆ

Suddi Udaya

ಅಳದಂಗಡಿ: ಕೆದ್ದು ನಿವಾಸಿ ಸತೀಶ್ ಪೂಜಾರಿ ನಿಧನ

Suddi Udaya

ಶಿರ್ಲಾಲು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಎಸ್ .ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ 10ನೇ ಸ್ಥಾನ ಪಡೆದ ತ್ರಿಷಾ ರಿಗೆ ಸನ್ಮಾನ

Suddi Udaya

ಬೆಳಾಲು ಶ್ರೀ ಧ.ಮಂ.ಪ್ರೌ. ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಲಗೋರಿ ಪಂದ್ಯಾಟ

Suddi Udaya

ನಾಲ್ಕೂರು ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕರುಣಾಕರ ಹೆಗ್ಡೆ ಆಯ್ಕೆ

Suddi Udaya

ಸುಲ್ಕೇರಿ ಗ್ರಾ. ಪಂ. ವ್ಯಾಪ್ತಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya
error: Content is protected !!