ಮೇ 25: ಧರ್ಮಸ್ಥಳದಲ್ಲಿ “ಹತ್ತನಾವಧಿ” ಉತ್ಸವ

Suddi Udaya

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಪ್ರಸಕ್ತ ವರ್ಷದ ಕೊನೆಯ ಉತ್ಸವ “ಹತ್ತನಾವಧಿ” (ತುಳು: ಪತ್ತನಾಜೆ) ಇದೇ 25 ರಂದು ಗುರುವಾರ ನಡೆಯಲಿದೆ.
ಮುಂದೆ ದೀಪಾವಳಿ ವರೆಗೆ ದೇವಸ್ಥಾನದಲ್ಲಿ ರಂಗಪೂಜೆ, ಉತ್ಸವ, ಬೆಳ್ಳಿ ರಥೋತ್ಸವ ಮೊದಲಾದ ವಿಶೇಷ ಸೇವೆಗಳು ನಡೆಯುವುದಿಲ್ಲ.
ಇಂದು ಸಂಜೆ 7 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟವು ಮುಂಡಾಜೆಯಲ್ಲಿ ಭಾರ್ಗವ ಸಭಾ ಭವನದಲ್ಲಿ ನಡೆಯಲಿದೆ.

ಇದೇ 25 ರಂದು ಹತ್ತನಾವಧಿ ನಿಮಿತ್ತ ಮೇಳದ ಕಲಾವಿದರಿಗೆ ರಜೆ ಇದ್ದು ಇದೇ 26, 27 ಮತ್ತು 28 ರಂದು ಮೂರು ದಿನ ಧರ್ಮಸ್ಥಳದಲ್ಲಿ ಸಂಜೆ ಗಂಟೆ 7 ರಿಂದ ರಾತ್ರಿ 12ರ ವರೆಗೆ ಯಕ್ಷಗಾನ ಬಯಲಾಟ ಪ್ರದರ್ಶನದ ಬಳಿಕ ಕಲಾವಿದರು ಪ್ರಸಕ್ತ ವರ್ಷದ ಬಯಲಾಟ ಪ್ರದರ್ಶನಕ್ಕೆ ಮಂಗಳ ಹಾಡುವರು. ಮುಂದೆ, ನವೆಂಬರ್ ಬಳಿಕ ಧರ್ಮಸ್ಥಳ ಮೇಳದ ಬಯಲಾಟ ಪ್ರದರ್ಶನ ಪ್ರಾರಂಭಗೊಳ್ಳಲಿದೆ.

Leave a Comment

error: Content is protected !!