April 2, 2025
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಉಜಿರೆ: ಎಸ್.ಡಿ.ಎಮ್ ಕಾಲೇಜಿನಲ್ಲಿ ವಿಶ್ವ ದೂರಸಂಪರ್ಕ ದಿನ: ವಿಶೇಷ ಉಪನ್ಯಾಸ

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ವತಿಯಿಂದ ‘ವಿಶ್ವ ದೂರಸಂಪರ್ಕ ದಿನ’ (World Telecommunicaton Day) ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಮೇ 25 ರಂದು ನಡೆಯಿತು.

ಕಾಲೇಜಿನ ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಶೈಲೇಶ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ದೂರ ಸಂಪರ್ಕ ಸೌಲಭ್ಯದಿಂದಾಗಿ ವಿಶ್ವದ ಗಾತ್ರ ಸಣ್ಣದಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಕ್ಷಣ ವಿಶ್ವದಾದ್ಯಂತ ಪಸರಿಸುವ ಶಕ್ತಿ ಅದಕ್ಕಿದೆ ಎಂದು ಅವರು ಹೇಳಿದರು.

“ಆದರೆ ಮಾನವ ಇಂದು ದೂರಸಂಪರ್ಕ ಸಾಧನಗಳ ದಾಸನಾಗಿದ್ದಾನೆ. ಈ ಸಾಧನಗಳ ಬಳಕೆ ಮಿತವಾಗಿರುವುದು ಅಗತ್ಯ” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎನ್. ಕಾಕತ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗುರುತ್ವ-2K23 ಫೆಸ್ಟ್ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.

ಅಸ್ಮಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Related posts

ರೂ.1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ” ಇದರ ನೂತನ ಕಟ್ಟಡದ ಉದ್ಘಾಟನೆ: ಸ್ಮಾರ್ಟ್ ಕ್ಲಾಸ್ ತರಗತಿಗೆ ಚಾಲನೆ

Suddi Udaya

ಶ್ರೀಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಕೊಕ್ಕಡ ಸಮಿತಿ ಅಸ್ತಿತ್ವಕ್ಕೆ

Suddi Udaya

ಚಂದ್ರಯಾನ-3 ರ ಯಶಸ್ಸು ರಾಷ್ಟ್ರದ ಇತಿಹಾಸದಲ್ಲಿ ಹೊಸ ಪುಟಗಳನ್ನು ತೆರೆದಿದೆ: ಪ್ರತಾಪ್ ಸಿಂಹ ನಾಯಕ್

Suddi Udaya

ಮುಂಡಾಜೆ: ಮೂಲಾರು ದರ್ಖಾಸು ನಿವಾಸಿ ಕಮಲಾ ನಾಯ್ಕ ನಿಧನ

Suddi Udaya

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮನನೊಂದು ಸುತ್ತಾಡುತ್ತಿದ್ದ ಮಹಿಳೆಗೆ ಸಾಂತ್ವನ ಹೇಳಿ, ಕುಟುಂಬದ ಜೊತೆ ಕಳಿಸಿ ಮಾನವೀಯತೆ ಮೆರೆದ ಸಮಾಜ ಸೇವಕ ರವಿ ಕಕ್ಕೆಪದವು

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ಪುತ್ತೂರು ಶಾಸಕ ಅಶೋಕ್ ರೈ ಗೆ ಆಮಂತ್ರಣ

Suddi Udaya
error: Content is protected !!