29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಡ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಗುರುಪೂಜೆ ಮತ್ತು ವಾರ್ಷಿಕ ಮಹಾಸಭೆ

ನಡ: ನಡ ಗ್ರಾಮದ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮಹಿಳಾ ಬಿಲ್ಲವ ವೇದಿಕೆ ಮತ್ತು ಯುವ ಬಿಲ್ಲವ ವೇದಿಕೆ ಇದರ ಗುರುಪೂಜೆ ಮತ್ತು ವಾರ್ಷಿಕ ಮಹಾಸಭೆಯು ಮೇ 28ರಂದು ವೀರಪ್ಪ ಪೂಜಾರಿ ಕೊಟ್ಲಪ್ಪಾಡಿ ರವರ ಅಧ್ಯಕ್ಷತೆಯಲ್ಲಿ ಶ್ರೀ ನಾರಾಯಣ ಗುರು ಸಮುದಾಯ ಭವನ ನಡ ಮಂಜೊಟ್ಟಿಯಲ್ಲಿ ನಡೆಯಿತು.

ಬೆಳಗ್ಗೆ ಗಣಹೋಮ, ಭಜನೆ, ಗುರುಪೂಜೆ ಮತ್ತು ಸಭಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿವೃತ್ತ ಮುಖ್ಯೋಪಾಧ್ಯಯರು ಜ್ಯೋತಿ ಕೃಷ್ಣಪ್ಪ ಪೂಜಾರಿ ಕುದುಪುಲ, ಮಾಜಿ ಸೈನಿಕರು ಶಿವಾಜಿ, ಡಾಕ್ಟರ್ ಹವ್ಯಶ್ರೀ ಮೋಹನ್ ರಾಜ್, ರಾಜ್ಯ ಪ್ರಶಸ್ತಿ ವಿಜೇತ ಜಯಾನಂದ ಅಂಕಾಜೆ, ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ , ದೇವೇಂದ್ರ ಪೂಜಾರಿ, ಕಾರ್ತಿಕ್, ಶ್ರೀಮತಿ ವಸಂತಿ, ವಸಂತ ಕುತ್ತೊಟ್ಟು, ಜಯಕುಮಾರ್ ಸುರ್ಯ, ಶ್ರೀ ಚಿದಾನಂದ ಪೂಜಾರಿ ಎಲ್ಲಡ್ಕ, ಅಭಿನಂದನ್ ಉಪಸ್ಥಿತರಿದ್ದರು.

ಅನನ್ಯ ಇವರ ಪ್ರಾರ್ಥನೆಯೊಂದಿಗೆ ಜಯಕುಮಾರ್ ಸುರ್ಯ ಸ್ವಾಗತಿಸಿದರು. ಗುರುನಾರಾಯಣ ಸ್ವಾಮಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಮೀನಾಕ್ಷಿ.ಕೆ ಬಂಡಾರಿಕೋಡಿ ವಂದಿಸಿದರು.

Related posts

ಅರಸಿನಮಕ್ಕಿ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಟಾ ಅಷ್ಟಬಂಧ ಬ್ರಹ್ಮಕಲಶೋತ್ಸವ: ಋತ್ವಿಜರ ಸ್ವಾಗತ, ಹೊರೆಕಾಣಿಕೆ ಉಗ್ರಾಣ ಉದ್ಘಾಟನೆ

Suddi Udaya

ಲಾಯಿಲ ಜಿ.ಪಂ. ವ್ಯಾಪ್ತಿಯ ಪ್ರದೇಶಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಬಿರುಸಿನ ಮತಯಾಚನೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಬೂತ್ ಅಧ್ಯಕ್ಷರ ಮತ್ತು ಬಿ.ಎಲ್ ಎ ರವರ ತರಬೇತಿ ಕಾರ್ಯಗಾರ

Suddi Udaya

ದ.ಕ. ಜಿಲ್ಲೆಯಲ್ಲಿ ಬಿಎಸ್ಸೆನ್ನೆಲ್ 4ಜಿ ಸೇವೆ

Suddi Udaya

ವೇಣೂರು: ಮಹಾವೀರ ನಗರದ ನಿವಾಸಿ ವಿಜಯಮ್ಮ ನಿಧನ

Suddi Udaya

ಸುಣ್ಣದಕೆರೆ ಅಂಗನವಾಡಿ ಕೇಂದ್ರದ ನಿವೃತ್ತ ಕಾರ್ಯಕರ್ತೆ ವಸಂತಿರವರಿಗೆ ಸನ್ಮಾನ

Suddi Udaya
error: Content is protected !!