ಬೆಳ್ತಂಗಡಿ; ಸಮಾಜದ ಕಟ್ಟಕಡೇಯ ಜನತೆಗೆ ಸೇವೆ ನೀಡುವುದು ನಮ್ಮ ಉದ್ದೇಶ. ಮದರ್ ತೆರೇಸಾ ಅವರು ಹೇಳಿದಂತೆ ದೊಡ್ಡಸೇವೆ ಒಮ್ಮೆಗೇ ಮಾಡುವುದಕ್ಕಿಂತ ಸಣ್ಣ ಸಣ್ಣ ಆವಶ್ಯಕತೆಗಳುಳ್ಳವರಿಗೆ ಸೇವೆ ಮಾಡುವ ಮೂಲಕ ನಿರಂತರತೆ ಕಾಯ್ದುಕೊಳ್ಳುವುದು ಮೇಲು. ಲಯನ್ಸ್ ಜಿಲ್ಲೆಯಿಂದ ಈ ಬಾರಿ 20 ಎಂಜೆಎಫ್ ಕೊಡುಗೆ ನೀಡಲಾಗಿದ್ದು ಅದರ ಮೊತ್ತದಿಂದ ಅಂತಾರಾಷ್ಟ್ರೀಯ ನಿಧಿಯಿಂದ 12 ಡಯಾಲಿಸಿಸ್ ಯಂತ್ರಗಳು ನಮ್ಮ ಲಯನ್ಸ್ ಜಿಲ್ಲೆಗೆ ಕೊಡುಗೆಯಾಗಿ ಮತ್ತೆ ದೊರಕಿದೆ. ಇದನ್ನು ಜನಸಾಮಾನ್ಯರ ನೆರವಿಗಾಗಿ ಸ್ಥಳೀಯ ಆಸ್ಪತ್ರೆಗಳಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ಹೇಳಿದರು.
ಲಯನ್ಸ್ ಕ್ಲಬ್ ಬೆಳ್ತಂಗಡಿ ಮತ್ತು ಸುಲ್ಕೇರಿ ಈ ಕ್ಲಬ್ ಗಳಿಗೆ ಜಂಟಿಯಾಗಿ ಲಯನ್ಸ್ ಜಿಲ್ಲಾ ರಾಜ್ಯಪಾಲ, ಖ್ಯಾತ ಉದ್ಯಮಿ ಸಂಜೀತ್ ಶೆಟ್ಟಿ ಅವರ ಅಧಿಕೃತ ಭೇಟಿ ಹಾಗೂ ಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಮೇ. 27 ರಂದು ಗುರುವಾಯನಕೆರೆ ಮಯೂರ ಆರ್ಕೆಡ್ ನಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರು, ಈಬಾರಿ ಹೊಸದಾಗಿ 12 ಲಯನ್ಸ್ ಕ್ಲಬ್, 7 ಲಿಯೋ ಕ್ಲಬ್ ಹೊಸದಾಗಿ ಪಡೆದಿದೆ. ಸಕಲೇಶಪುರದಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ಮುಕ್ತಿಧಾಮ ರಚಿಸಲಾಗಿದ್ದು, ಜೂ,10 ಕ್ಕೆ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.
ಅಧ್ಯಕ್ಷತೆಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಿಪ್ರಸಾದ್ ಬೊಳ್ಮ ವಹಿಸಿದ್ದರು. ಸುಲ್ಕೇರಿ ಕ್ಲಬ್ ಅಧ್ಯಕ್ಷ ಸುಂದರ ಶೆಟ್ಟಿ, ಬೆಳ್ತಂಗಡಿ ಪೂರ್ವಾಧ್ಯಕ್ಷ ಹೇಮಂತರಾವ್ ಯರ್ಡೂರು, ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ, ರವಿ ಶೆಟ್ಟಿ, ಸುಧೀರ್ ಎಸ್, ಪಂಚಾಕ್ಷರಪ್ಪ, ಸೀತಾರಾಮ ಆಚಾರ್ಯ ವೇಣೂರು, ವಿನೋದ್ ನಝ್ರೆತ್ ಆಲಂಗಾರು, ಎಂ.ಕೆ ದಿನೇಶ್ ಮೂಡಬಿದ್ರೆ, ವೆಂಕಟೇಶ್ ಹೆಬ್ಬಾರ್ ಬಪ್ಪನಾಡು ಇನ್ಸ್ ಪ್ಯಾರ್, ಸ್ಟೇನ್ಲಿ ಮಿರಾಂದ ಮುಚ್ಚೂರುನೀರುಡೆ, ಮೆಲ್ವಿನ್ ಸಾಲ್ದಾನಾ ಗುರುಪುರ ಕೈಕಂಬ, ಮೆಲ್ವಿನ್ ಡಿಕೋಸ್ತಾ, ಜೇಮ್ಸ್ ಮಿರಾಂದ, ಮೊದಲಾದವರು ಉಪಸ್ಥಿತರಿದ್ದರು.
ಸ್ಥಾಪಕ ದಿನಾಚರಣೆ: ಲಯನ್ಸ್ ಸ್ಥಾಪಕ ದಿನಾಚರಣೆ ನಡೆದು ಸ್ಥಾಪಕ ಸದಸ್ಯರಾದ ಎಂ.ಜಿ ಶೆಟ್ಟಿ ಮತ್ತು ವಿಆರ್ ನಾಯ್ಕ್ ದೀಪ ಬೆಳಗಿ ಉದ್ಘಾಟಿಸಿದರು. ಇಬ್ಬರನ್ನೂ ಸನ್ಮಾನಿಸಲಾಯಿತು. ಎಂ.ಜಿ ಶೆಟ್ಟಿ ಶುಭ ಕೋರಿದರು.
ಸೇವಾ ಚಟುವಟಿಕೆ: ಪ್ರತಿಭಾ ಪುರಸ್ಕಾರ;
ಇದೇ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಯಲ್ಲಿ ಉನ್ನತ ಸಾಧನೆ ಮಾಡಿದ ಪ್ರತಿಭಾನ್ವಿತ ಮೂರು ಮಂದಿಯನ್ನು ಪುರಸ್ಕರಿಸಲಾಯಿತು. ಸೇವಾ ಚಟುವಟಿಕೆಯ ಭಾಗವಾಗಿ ಇವರಿಗೆ ಆರ್ಥಿಕ ಸಹಾಯ ಹಾಗೂ ಧರ್ಮಸ್ಥಳ ಮುಂಡ್ರುಪ್ಪಾಡಿ ಶಾಲೆಗೆ ಸುಣ್ಣ ಬಣ್ಣ, ಕಲ್ಮಂಜ ಸರಕಾರಿ ಶಾಲೆಗೆ ಬ್ಯಾಂಡ್ ಸೆಟ್ ಖರೀದಿಗೆ ನೆರವು, ಹಸ್ತಾಂತರಿಸಲಾಯಿತು.
ಧರಣೇಂದ್ರ ಕೆ ಜೈನ್ ನಿರೂಪಿಸಿದರು. ವಿಶ್ವನಾಥ ಶೆಟ್ಟಿ ಧ್ವಜವಂದನೆ ನಡೆಸಿದರು. ರಾಮಕೃಷ್ಣ ಗೌಡ ನೀತಿಸಂಹಿತೆ ವಾಚಿಸಿದರು. ಕಿರಣ್ ದೊಂಡೊಲೆ ಹೊಸ ಸದಸ್ಯರನ್ನು ಪರಿಚಯಿಸಿದರು. ಮಂಜುನಾಥ ಬಿ ರಾಜ್ಯಪಾಲರನ್ನು ಪರಿಚಯಿಸಿದರು. ಲಕ್ಷ್ಮಣ ಪೂಜಾರಿ ಪ್ರತಿಭಾ ಪುರಸ್ಕಾರ ಪಟ್ಟಿವಾಚಿಸಿದರು. ಅನಂತಕೃಷ್ಣ ಸೇವಾ ಚಟುವಟಿಕೆ ಪಟ್ಟಿ ವಾಚಿಸಿದರು. ಕ್ಲಬ್ ಗಳ ವರದಿಯನ್ನು ತುಕಾರಾಮ ಬಿ (ಬೆಳ್ತಂಗಡಿ). (ಸುಲ್ಕೇರಿ) ನೆರವೇರಿಸಿದರು. ಮೇದಿನಿ ಗೌಡ ಪ್ರಾರ್ಥನೆ ಹಾಡಿದರು. ಅಶ್ರಫ್ ಆಲಿಕುಂಞಿ ಮುಂಡಾಜೆ ಧನ್ಯವಾದವಿತ್ತರು.