24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕೊಕ್ಕಡ: ಜೇಸಿ ಸಂಸ್ಥೆ ವಲಯ 15ರ ವಲಯಾಡಳಿತ ಸಭೆ

ಕೊಕ್ಕಡ: ಭಾರತೀಯ ಜೇಸಿ ಸಂಸ್ಥೆ ವಲಯ 15 ಇದರ ನೂತನ ಸಾಲಿನ ಮೂರನೇ ವಲಯಾಡಳಿತ ಮಂಡಳಿ ಸಭೆಯು ನಿಡ್ಲೆ ಬಳಿ ಆನಂದ ರೆಸಾರ್ಟ್ ನಲ್ಲಿ ಮೇ.28 ರಂದು ಜರುಗಿತು.

ಜೇಸಿಐ ಕೊಕ್ಕಡ ಕಪಿಲಾ ಆತಿಥ್ಯದಲ್ಲಿ ಜರುಗಿದ ಸಮಾರಂಭ ಅಧ್ಯಕ್ಷತೆಯನ್ನು ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೂರ್ವ ವಲಯಾಧ್ಯಕ್ಷ ಸಂತೋಷ ಜಿ. ಅವರು ಸಮಾಜದಲ್ಲಿ ಜೇಸಿ ಆಂದೋಲನವನ್ನು ಬಲಪಡಿಸಲು ಕರೆ ನೀಡಿದರು.

ಮಧ್ಯಂತರ ಸಮಾವೇಶದ ಪೂರ್ವಭಾವಿಯಾಗಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ರಾಯನ್ ಉದಯ ಕ್ರಾಸ್ತಾ, ವಲಯ ಉಪಾಧ್ಯಕ್ಷ ದೇವರಾಜ್ ಕುದ್ಪಾಜೆ, ಅಜಿತ್ ರೈ, ಭರತ್ ಶೆಟ್ಟಿ, ಸುಧಾಕರ ಆಚಾರ್ಯ, ಅಭಿಲಾಶ್ ಬಿ.ವಿ, ಆಡಳಿತ ಮಂಡಳಿಯ ನಿರ್ದೇಶಕ ಪ್ರಶಾಂತ ಲಾಯಿಲ, ಅಭಿವೃದ್ಧಿ ವಿಭಾಗದ ಮರಿಯಪ್ಪ, ಕಾರ್ಯಕ್ರಮ ವಿಭಾಗದ ಅಕ್ಷತಾ ಗಿರೀಶ್, ತರಬೇತಿ ವಿಭಾಗದ ಪ್ರದೀಪ್ ಬಾಕಿಲ, ಯುವ ಜೇಸಿ ವಿಭಾಗದ ಸ್ವಾತಿ ಜೆ. ರೈ ಹಾಗೂ ವಿನೀತ್ ಶಗ್ರಿತ್ತಾಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವಿವಿಧ ವಿಭಾಗಗಳ ಮುಖ್ಯಸ್ಥರಾದ ಉದಕ ಪತ್ರಿಕೆ ಸಂಪಾದಕ ಮೋಹನ್ ಚಂದ್ರ, ನಿರ್ಮಲಾ ಜಯರಾಮ, ಸಂತೋಷ ಕುಮಾರ್ ಸಲಹೆ ಸೂಚನೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಸಭೆಯ ಆತಿಥ್ಯ ವಹಿಸಿದ ಕೊಕ್ಕಡ ಕಪಿಲಾ ಜೇಸಿ ಸದಸ್ಯರನ್ನು ಅಭಿನಂದಿಸಲಾಯಿತು.

ಕೊಕ್ಕಡ ಜೇಸಿಐ ಅಧ್ಯಕ್ಷ ಜಿತೇಶ್ ಎಲ್ ಪಿರೇರಾ ಸ್ವಾಗತಿಸಿದರು. ಯುವ ಜೇಸಿ ಶ್ರವಣ್ ಜೇಸಿ ವಾಣಿ ವಾಚಿಸಿದರು. ವಲಯದ ಕಾರ್ಯದರ್ಶಿ ಕಾಶೀನಾಥ್ ಗೋಗಟೇ ವಂದಿಸಿದರು.

Related posts

ರಾಜ್ಯ ಮಟ್ಟದ ಕರಾಟೆ: ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿಶ್ವಾಸ್ ಶೆಟ್ಟಿಗೆ ಚಿನ್ನದ ಪದಕ

Suddi Udaya

ಹತ್ಯಡ್ಕ ಪ್ರಾ.ಕೃ.ಪ. ಸಹಕಾರಿ ಸಂಘ ಅರಸಿನಮಕ್ಕಿಗೆ ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಮಚ್ಚಿನ ಜಲಾಯನ ಸಮಿತಿಯಿಂದ ಅರ್ಹ ಫಲಾನುಭವಿಗಳಿಗೆ ಕೋಳಿಮರಿ ವಿತರಣೆ

Suddi Udaya

ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೇಲಿನ ಹಲ್ಲೆ ಪ್ರಕರಣ: ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಖಂಡನೆ: ಆರೋಪಿಯ ವಿರುದ್ಧ ಸೂಕ್ತ ತನಿಖೆಗೆ ರಾಜ್ಯಪಾಲರಿಗೆ ಹಾಗೂ ಪೊಲೀಸ್ ಇಲಾಖೆಗೆ ಮನವಿ

Suddi Udaya

ಶಿಶಿಲ ಶೌರ್ಯ ವಿಪತ್ತು ತಂಡದ ಕೆಲಸ ಕಾರ್ಯಗಳನ್ನು ಮೆಚ್ಚಿ ಜೀವರಕ್ಷಕ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ಎಸ್ ಎಂ ಶಿವಪ್ರಕಾಶ್

Suddi Udaya

ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಆಲಿಕುಂಞಿ ನಾಮಪತ್ರ ಸಲ್ಲಿಕೆ

Suddi Udaya
error: Content is protected !!