37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ವತಿಯಿಂದ ವಿಶೇಷ ತರಬೇತಿ ದಿನಾಚರಣೆ

ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಸಂಸ್ಥೆಯ ವತಿಯಿಂದ ಯುವ ಜೇಸಿಗಳಿಗೆ ‘ಗೈಡಡ್ ಬೈ ಪರ್ಪೋಸ್’ ಎಂಬ ವಿಶೇಷ ತರಬೇತಿ ದಿನಾಚರಣೆ ಮೇ. 28 ರಂದು ನಿಡ್ಲೆ ಬಳಿ ಆನಂದ ರೆಸಾರ್ಟ್ ನಲ್ಲಿ ನಡೆಸಲಾಯಿತು.

ತರಬೇತಿ ಶಿಬಿರವನ್ನು ವಲಯ 15 ಯುವ ಜೇಸಿ ವಿಭಾಗದ ನಿರ್ದೇಶಕರಾದ ಶ್ರೀಮತಿ ಸ್ವಾತಿ ಜಗನ್ನಾಥ ರೈ ದೀಪ ಬೆಳಗಿಸಿ ಉದ್ಘಾಟಿಸಿದರು.

ವಲಯ ತರಬೇತುದಾರ ಶಂಕರ್ ರಾವ್ ಅವರು ತರಬೇತಿ ನೀಡಿದರು. ಜೇಸಿ ಅಧ್ಯಕ್ಷ ಜಿತೇಶ್ ಎಲ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು.

ಯುವ ಜೇಸಿಗಳಾದ ಕು. ಹರ್ಷಿತಾ, ಕು. ಅನನ್ಯ ಅವರು ಕ್ರಮವಾಗಿ ಉದ್ಘಾಟಕರು ಹಾಗೂ ಸಂಪನ್ಮೂಲ ವ್ಯಕ್ತಿಗಳ
ಪರಿಚಯ ಮಾಡಿದರು. ಸಾತ್ವಿಕ್, ಕು. ನಿಶಿತಾ , ಕು. ಅನನ್ಯ ಶಿಬಿರಾರ್ಥಿಗಳ ಪರವಾಗಿ ಅನಿಸಿಕೆ ತಿಳಿಸಿದರು.

ಯುವ ಜೇಸಿ ಶ್ರವಣ್ ಜೇಸಿ ವಾಣಿ ವಾಚಿಸಿದರು. ನಿಕಟಪೂರ್ವ ಅಧ್ಯಕ್ಷ ಕೆ. ಶ್ರೀಧರ್ ರಾವ್, ಮಹಿಳಾ ಜೇಸಿ ವಿಭಾಗ ಮುಖ್ಯಸ್ಥರಾದ ದೀಪಾ ವಿ., ಸದಸ್ಯರಾದ ರಾಜಾರಾಮ, ಶ್ರೀಮತಿ ಜೆಸಿಂತಾ ಡಿ ಸೋಜ, ಶ್ರೀಮತಿ ಮನೋರಮಾ, ಜೋಸೆಫ್ ಪಿರೇರಾ, ಉಪಾಧ್ಯಕ್ಷ ಯು. ನರಸಿಂಹ ನಾಯಕ್, ಕೋಶಾಧಿಕಾರಿ ಜಸ್ವಂತ್ ಪಿರೇರಾ ಉಪಸ್ಥಿತರಿದ್ದರು.

ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.

Related posts

ನಿಮ್ಮ ಮನೋಭಾವ ಒಳ್ಳೆಯದಾಗಿದ್ದರೆ ಕೌಶಲ್ಯಗಳ ಸದುಪಯೋಗ ಮಾಡಲು ಆಗುತ್ತದೆ: ಡಾ. ಸತೀಶ್ಚಂದ್ರ ಎಸ್.

Suddi Udaya

ಜ.5: ಉರುವಾಲು ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಚಪ್ಪರ ಮೂಹೂರ್ತ

Suddi Udaya

ಕಾಶಿಪಟ್ಣ ಸ.ಪ್ರೌ. ಶಾಲೆಯ ದ್ವಿತೀಯ ದರ್ಜೆ ಸಹಾಯಕಿ ಸವಿತಾರವರಿಗೆ ಬೀಳ್ಕೊಡುಗೆ

Suddi Udaya

ನಾಳ: ದ್ವಿತೀಯ ವರ್ಷದ ಶ್ರೀ ದುರ್ಗಾ ಕಪ್ ಹಿರಿಯರ ಕ್ರಿಕೆಟ್ ಪಂದ್ಯಾಟ

Suddi Udaya

ಪೆಟ್ರೋಲ್ ದರ ಏರಿಸುವ ಮೂಲಕ ರಾಜ್ಯಸರಕಾರದ ಬಣ್ಣ ಬಯಲಾಗಿದೆ : ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್

Suddi Udaya

ಸುರ್ಯ ದೇವಸ್ಥಾನದ ಆನುವಂಶಿಕ ಆಡಳಿತಮೊಕ್ತೇಸರಾಗಿ ಡಾ. ಸತೀಶ್ಚಂದ್ರ ಸುರ್ಯಗುತ್ತು ನೇಮಕ

Suddi Udaya
error: Content is protected !!