37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಟೋ ರಿಕ್ಷಾ ಮತ್ತು ಬೈಕ್ ಢಿಕ್ಕಿ: ಪ್ರಯಾಣಿಕರಿಗೆ ಗಂಭೀರ ಗಾಯ

ಬೆಳ್ತಂಗಡಿ: ಅಟೋ ರಿಕ್ಷಾ ಮತ್ತು ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಹಾಗೂ ರಿಕ್ಷಾ ಚಾಲಕ ಸಹಿತ ಪ್ರಯಾಣಿಕರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮೇ. 30 ರಂದು ಬಂಟ್ವಾಳ ತಾಲೂಕಿನ ಭಂಡಾರಿ ಬೆಟ್ಟು ಎಂಬಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ಬೈಕ್ ಸವಾರ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ವೇಳೆ ಆಟೋ ರಿಕ್ಷಾ ಭಂಡಾರಿಬೆಟ್ಟು ಎಂಬಲ್ಲಿ ಬಿಸಿರೋಡಿನಿಂದ ಬಂಟ್ವಾಳ ಕಡೆಗೆ ಹೋಗುವ ಸಂದರ್ಭ ಎರಡು ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.

ರಿಕ್ಷಾ ಚಾಲಕ ಬಂಟ್ವಾಳ ನಾವೂರ ನಿವಾಸಿ ತಾರನಾಥ, ರಿಕ್ಷಾ ಪ್ರಯಾಣಿಕ ಶಂಕರ ಹಾಗೂ ಬೈಕ್ ಸವಾರ ಉಜಿರೆ ನಿವಾಸಿ ಜೊಸ್ಟಿಲಿನ್ ಡಿ.ಸೋಜ, ಸಹ ಸವಾರ ರಶ್ಮಿತ್ ನಾಲ್ವರು ಗಾಯಗೊಂಡವರು.
ಢಿಕ್ಕಿಯಾದ ರಭಸಕ್ಕೆ ರಿಕ್ಷಾ ಹಾಗೂ ಬೈಕ್ ಎರಡು ವಾಹನಗಳು ಜಖಂಗೊಂಡಿದೆ ಹಾಗೂ ಎರಡು ವಾಹನಗಳ ಚಾಲಕರಿಗೆ ಗಂಭೀರವಾದ ಗಾಯವಾಗಿದ್ದು, ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Related posts

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ದೇವರ ಪ್ರತಿಷ್ಠಾಪನೆ ಹಾಗೂ ಶ್ರೀರಾಮ ಮಂದಿರ ಲೋಕಾರ್ಪಣೆ: ದೀಪಾಲಂಕಾರದ ಮೂಲಕ ಸಂಭ್ರಮಾಚರಣೆಗೆ ಸಜ್ಜಾಗುತ್ತಿರುವ ಮಡಂತ್ಯಾರುವಿನ ಅಂಗಡಿ ಮುಂಗಟ್ಟುಗಳು

Suddi Udaya

ಉಜಿರೆ: ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ:

Suddi Udaya

ಗುರುವಾಯನಕೆರೆ ಶಕ್ತಿನಗರ ಸರ್ಕಲ್ ನಲ್ಲಿ ಬೆಳ್ತಂಗಡಿ ಮಾಜಿ ಶಾಸಕ ದಿ| ಕೆ ವಸಂತ ಬಂಗೇರ ರವರ ಪ್ರತಿಮೆಯನ್ನು ಸ್ಥಾಪಿಸುವಂತೆ ಕುವೆಟ್ಟು ಗ್ರಾ.ಪಂ. ಗೆ ಮನವಿ

Suddi Udaya

ಸೌಜನ್ಯಳಿಗೆ ನ್ಯಾಯ ಸಿಗಲೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಶಾಸಕ ಹರೀಶ್ ಪೂಂಜರಿಂದ ಕುತ್ಯಾರು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ನಾವೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾಗಿ ಪೂವಪ್ಪ ಗೌಡ, ಕಾರ್ಯದರ್ಶಿಯಾಗಿ ದಿನೇಶ್ ಗೌಡ ಆಯ್ಕೆ

Suddi Udaya

ವೇಣೂರು: ಆಟೋ ಚಾಲಕ ಅನಿಲ್ ಕುಮಾರ್ ನಿಧನ

Suddi Udaya
error: Content is protected !!