24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ಬೆಳಾಲು ಕಾರ್ಯಕರ್ತರಿಗೆ ಹಾಗೂ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

ಬೆಳಾಲು: ಮೇ 31 ರಂದು ಬೆಳಾಲು ಗ್ರಾಮದ ಮೈತ್ರಿ ಯುವಕ ಮಂಡಲದ ವಠಾರದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳಾಲು ಶಕ್ತಿಕೇಂದ್ರ ಕಾರ್ಯಕರ್ತರಿಗೆ ಹಾಗೂ ಎರಡನೇ ಭಾರಿಗೆ ಅಭೂತಪೂರ್ವ ‌ಗೆಲುವಿನ ನಗೆ ಬೀರಿದ ಶಾಸಕರಾದ ಹರೀಶ್ ಪೂಂಜರವರಿಗೆ ಅಭಿನಂದನಾ ಕಾರ್ಯಕ್ರಮ ಚೆಂಡೆ ವಾದನ ಜೊತೆಗೆ ವಿಜೃಂಭಣೆಯಿಂದ ನೆರವೇರಿತು.

ಭಾರತ ಮಾತೆಗೆ ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಶಾಸಕರಾದ ಹರೀಶ್ ಪೂಂಜ ಕಾರ್ಯಕರ್ತ ಬಂಧುಗಳಿಗೆ ಕೃತಜ್ಞತಾ ಪೂರ್ವಕ ಅಭಿನಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಉಪಾಧ್ಯಕ್ಷರು ಬೆಳ್ತಂಗಡಿ ಮಂಡಲದ ಪ್ರಭಾರಿಗಳು ಭಾಗವಹಿಸಿ ಅತ್ಯಧಿಕ ಬಹುಮತಗಳಿಂದ ಗೆಲುವನ್ನು ಸಾಧಿಸಿದ ಶಾಸಕರಿಗೆ ಹಾಗೂ ಶ್ರಮಿಸಿದ ಕಾರ್ಯಕರ್ತ ಬಂಧುಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.


ಶಾಸಕರಿಗೆ ಹಾಗೂ ಹಿರಿಯ ಕಾರ್ಯಕರ್ತ ಬಂಧುಗಳಿಗೆ ಗೌರವದ ಸನ್ಮಾನ ಕಾರ್ಯಕ್ರಮ ನೆರವೇರಿತು.
ವೇದಿಕೆಯಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್, ಮಂಡಲ ಉಪಾಧ್ಯಕ್ಷರಾದ ಸೀತಾರಾಮ್ ಬಿ ಎಸ್ ಹಾಗೂ ಕೊರಗಪ್ಪ ಗೌಡ ಚಾರ್ಮಾಡಿ, ಧರ್ಮಸ್ಥಳ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಯೋಗೀಶ್ ಆಲಂಬಿಲ ,ಬೆಳಾಲು ಗ್ರಾಮದ ಚುನಾವಣಾ ಪ್ರಭಾರಿ ಹಾಗೂ ಸಹಕಾರ ಭಾರತಿ ಇದರ ಅಧ್ಯಕ್ಷರಾದ ರಾಜೇಶ್ ಪೆರ್ಮುಡ, ಮಂಡಲ ಯುವ ಮೋರ್ಚಾದ ಅಧ್ಯಕ್ಷರಾದ ಯಶವಂತ್ ಗೌಡ ಬಿ.ಟಿ ಬನಂದೂರು , ಬೆಳಾಲು ಶಕ್ತಿ ಕೇಂದ್ರದ ಅಧ್ಯಕ್ಷರು ಸುರೇಂದ್ರ ಗೌಡ ಸುರುಳಿ, ಬೆಳಾಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಬೂತ್ ಸಮಿತಿಯ ಅಧ್ಯಕ್ಷರುಗಳಾದ ಗಂಗಾಧರ ಸಾಲಿಯನ್, ವಸಂತ ಕಿನ್ಯಾಜೆ, ದಾಮೋದರ ಕಾಡಂಡ, ದಿನೇಶ್ ಧರ್ಮದೋಡಿ ಉಪಸ್ಥಿತರಿದ್ದರು ಅಭಿನಂದನಾ ಸಮಾರಂಭ ಅರ್ಥಪೂರ್ಣವಾಗಲು ನಾಲ್ಕು ಬೂತಿನ ನಾಲ್ಕು ವ್ಯಕ್ತಿ ಗಳಿಗೆ ಸಹಾಯಧನ ನೀಡಲಾಯಿತು. ಈ ಸಂಧರ್ಭದಲ್ಲಿ ಬೂತ್ ಸಮಿತಿ ಕಾರ್ಯದರ್ಶಿಗಳು ಜನಪ್ರತಿನಿಧಿಗಳು, ಹಿರಿಯ ಕಾರ್ಯಕರ್ತ ಬಂಧುಗಳು ಎಲ್ಲಾ ಬೆಳಾಲು ಗ್ರಾಮದ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

ವಕೀಲರಾದ ಶ್ರೀನಿವಾಸ್ ಗೌಡ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು ಹರಿಪ್ರಸಾದ್ ಅರಣೆಮಾರು ಧನ್ಯವಾದವಿತ್ತರು.ಶಶಿಧರ ಆಚಾರ್ಯ ಒಂದೇ ಮಾತರಂ ಗೀತೆ ಹಾಡಿದರು. ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ನೆರಿಯ ಅರ್ಬಿಬೊಟ್ಟುನಲ್ಲಿ ಕುಸಿಯುವ ಹಂತದಲ್ಲಿರುವ ಕಿರುಸೇತುವೆ

Suddi Udaya

ಬಂದಾರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಆಟೋಟ ಸ್ಪರ್ಧೆ

Suddi Udaya

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಬೆಳ್ತಂಗಡಿ ಬಿಜೆಪಿ ಮಂಡಲದಿಂದ ರಸ್ತೆ ತಡೆ

Suddi Udaya

ಗೇರುಕಟ್ಟೆ: ಶ್ರೀ ದುರ್ಗಾ ಭಜನಾ ಮಂಡಳಿ ಬೊಲ್ಲುಕಲ್ಲು ಸಮಿತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಜ.12: ಬಳಂಜ ಬದಿನಡೆಯಲ್ಲಿ ಅಯ್ಯಪ್ಪ ಪೂಜೆ, ಇರುಮುಡಿ ಕಟ್ಟುವ ಕಾರ್ಯಕ್ರಮ

Suddi Udaya

ವೇಣೂರು : ದಿ| ಸತೀಶ್ ಆಚಾರ್ಯ ರವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya
error: Content is protected !!