ನ್ಯಾಯತರ್ಪು: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ತಂಗಡಿ ಸಹಕಾರದೊಂದಿಗೆ, ನ್ಯಾಯತರ್ಪು ಕಾರ್ಯ ಕ್ಷೇತ್ರದಲ್ಲಿ ಮಾದಕ ವಸ್ತು ದಿನಾಚರಣೆ ಅಂಗವಾಗಿ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಕಾರ್ಯಕ್ರಮದ ಮೂಲಕ ಜ್ಞಾನ ವಿಕಾಸ ಕೇಂದ್ರ ಮಹಿಳಾ ಸದಸ್ಯರಿಗೆ ದುಶ್ಚಟದ ಬಗ್ಗೆ, ಮತ್ತು ಅದರಿಂದ ಆಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ , ಜನ ಜಾಗೃತಿ ವೇದಿಕೆ ಶಿಬಿರಾಧಿಕಾರಿ ರಾಜೇಶ , ಶಾಲಾ ಮುಖ್ಯಗುರುಗಳು ಫಿಲಿಪ್ ರೊನಾಲ್ಡ್ ಡಿಮೆಲ್ಲೊ, ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರ , ವಲಯ ಮೇಲ್ವಿಚಾರಕರು ಹರೀಶ್ ಗೌಡ, ಜ್ಞಾನ ವಿಕಾಸ ಕೇಂದ್ರ ಸಂಯೋಜಕಿ ಶ್ರೀಮತಿ ರೀತಾ, ಸೇವಾಪ್ರತಿನಿಧಿ ಶ್ರೀಮತಿ ವಿನೋದಾ ಭಾಗವಹಿಸಿದರು.