ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಯುವ ರೆಡ್ ಕ್ರಾಸ್ ಘಟಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಚನೆ ಬಿ.ಸಿ.ಟ್ರಸ್ಟ್ (ರಿ) ಧರ್ಮಸ್ಥಳ ಹಾಗೂ ಜನಜಾಗೃತಿ ಪ್ರಾದೇಶಿಕ ವಿಭಾಗ ಸಹಭಾಗಿತ್ವದಲ್ಲಿ ರೆಡ್ ಕ್ರಾಸ್ ವಿದ್ಯಾರ್ಥಿಗಳಿಗೆ ” ವಿಪತ್ತು ನಿರ್ವಹಣೆಯಲ್ಲಿ ಮುಂಜಾಗ್ರತಾ ಕ್ರಮಗಳು” ವಿಷಯವಾಗಿ ತರಬೇತಿ ಕಾರ್ಯಕ್ರಮ ನಡೆಯಿತು.
ಯಸ್ ಕೆ ಡಿ ಆರ್ ಡಿ ಪಿ ಮುಖ್ಯ ನಿರ್ವಹಣಾಧಿಕಾರಿಯವರಾದ ಅನಿಲ್ ಕುಮಾರ್ ತರಬೇತಿಯನ್ನು ಉದ್ಘಾಟನೆ ಮಾಡಿ, ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ತುಂಬಿದರೆ ಅವರಲ್ಲಿ ನಿಜವಾದ ಸೇವಾ ಮನೋಭಾವ ಬೆಳೆಯಲು ಸಾಧ್ಯ. ವಿಪತ್ತು ನಿರ್ವಹಣಾ ಕಾರ್ಯಕ್ರಮದ ಮೊದಲ ಆಶಯವೆಂದರೆ ” ಮೊದಲು ನಿಮ್ಮ ರಕ್ಷಣೆ, ನಿಮ್ಮ ಸುರಕ್ಷತೆ” ಎಂದರು.
ವಿಪತ್ತು ನಿರ್ವಹಣಾ ಮುಂಜಾಗ್ರತಾ ಕ್ರಮಗಳು, ಶೌರ್ಯ ಕಾರ್ಯಕ್ರಮ, ವಿದ್ಯಾರ್ಥಿಗಳು ವಿಪತ್ತು ನಿರ್ವಹಣೆಯಲ್ಲಿ ವಹಿಸಬೇಕಾದ ಎಚ್ಚರಿಕೆಗಳು ಮುಂತಾದವುಗಳ ಬಗ್ಗೆ ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯ್ಸ್ ರವರು ಮಾಹಿತಿ ನೀಡಿದರು. ತರಬೇತಿ ಕಾರ್ಯಕ್ರಮದಲ್ಲಿ ಮುಳುಗು ತಜ್ಞ ಮಲ್ಫೆ ಈಶ್ವರ್, ಉರಗ ತಜ್ಞ ಸ್ನೇಕ್ ಮಹೇಶ್, ಅಗ್ನಿಶಾಮಕರಾದ ಉಸ್ಮಾನ್ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಸಭೆಯಲ್ಲಿ ಕಾಲೇಜು ಪ್ರಾಂಶುಪಾಲರಾದ ಸಂತೋಷ್, ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯ್ಸ್, ಕಾರ್ಯಕ್ರಮಾಧಿಕಾರಿ ಅವನೀಶ್ ಪಿ, ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್ ಬೆಳ್ತಂಗಡಿ, ಗುರುವಾಯನಕೆರೆ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಮತ್ತು ಕ್ಯಾಪ್ಟನ್ ಹಾಗೂ ವಿಪತ್ತು ನಿರ್ವಹಣಾ ತಂಡದ ಸಂಯೋಜಕರು, ಘಟಕದ ಪ್ರತಿನಿಧಿಗಳು, ಸ್ವಯಂಸೇವಕರು ಉಪಸ್ಥಿತರಿದ್ದರು. ಅನುಷಾ ಸ್ವಾಗತಿಸಿ, ಫಿಯೋನಾ ವಂದಿಸಿದಳು. ಅರ್ಚನಾ ಕಾರ್ಯಕ್ರಮ ನಿರ್ವಹಿಸಿದರು.