ಮಾಲಾಡಿ: ಮಾಲಾಡಿ ಗ್ರಾಮ ಪಂಚಾಯತ್ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಇತರ ಕಡೆಗಳ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು.
ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ತುಂಬಿಕೊಂಡಿರುವ ಪ್ಲಾಸ್ಟಿಕ್, ಬಾಟಲ್,ಒಣ ಕಸ, ಹಸಿ ತ್ಯಾಜ್ಯಗಳನ್ನು ಪಂಚಾಯತ್ ವತಿಯಿಂದ ಸ್ವಚ್ಚತಾ ಕಾರ್ಯ ನಡೆಸಿ ವಿಲೇವಾರಿ ಮಾಡಲಾಯಿತು. ನಮ್ಮ ಊರು, ಪರಿಸರದಲ್ಲಿ ಸ್ಚಚ್ಚತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವು ಹೌದು. ವಿದ್ಯಾವಂತರಾದ ನಾವುಗಳು ಸಿಕ್ಕ ಸಿಕ್ಕ ಕಡೆಗಳಲ್ಲಿ ತ್ಯಾಜ್ಯವನ್ನು ಬಿಸಾಡದೆ. ಕಸದ ಪೊಟ್ಟಣಕ್ಕೆ ಹಾಕಬೇಕು ಎಂದು ಪಂಚಾಯತ್ ನವರು ವಿನಂತಿಸಿದರು.ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷ, ಪಿಡಿಓ, ಸದಸ್ಯರುಗಳು ಹಾಗೂ ಸಿಬ್ಬಂದಿಗಳು ಸ್ವಚ್ಚತಾ ಕಾರ್ಯಗಳಲ್ಲಿ ಭಾಗಿಯಾದರು.