ನಿಡ್ಲೆ: ಇಲ್ಲಿಯ ಬರೆಂಗಾಯ ನಿಸರ್ಗ ಯುವಜನೇತರ ಮಂಡಲ, ಬೆಳ್ತಂಗಡಿ ತಾಲೂಕು ಮತ್ತು ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಹಾಗೂ ಸ.ಉ. ಹಿರಿಯ ಪ್ರಾಥಮಿಕ ಶಾಲೆ ಬರೆಂಗಾಯ ನಿಡ್ಲೆ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವು ಬರೆಂಗಾಯ ಸ.ಉ. ಹಿ.ಪ್ರಾ. ಶಾಲೆಯಲ್ಲಿ ನಡೆಸಲಾಯಿತು.


ಈ ಸಂದರ್ಭದಲ್ಲಿ ಉಪ್ಪಿನಂಗಡಿ ವಲಯ ಅಧಿಕಾರಿ ಜಯ ಪ್ರಕಾಶ್ , ಉಪ ವಲಯ ಅಧಿಕಾರಿ ಅಶೋಕ್, ಕೆ.ಆರ್. , ಎಸ್. ಡಿ.ಎಂ.ಸಿ ಅಧ್ಯಕ್ಷರು ರುಕ್ಮಯ್ಯ ಪೂಜಾರಿ, ನಿಸರ್ಗ ಯುವಜನೇತರ ಮಂಡಲದ ಅಧ್ಯಕ್ಷರು ಪುನೀತ್ ಪೊಂರ್ದಿಲ, ಶಾಲೆಯ ಮುಖ್ಯ ಶಿಕ್ಷಕರು ಗೋಪಾಲ್, ಜ್ಯೋತಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಶಿವರಂಜನ್ ಆಠವಳೆ ಮತ್ತು ಸಂಘದ ಸದಸ್ಯರು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
