ಉಜಿರೆ: ಪ್ರತಿಯೊಂದೂ ದಿನಾಚರಣೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿ ಅರ್ಥಮಾಡಿಕೊಂಡು ಅದನ್ನು ನಿತ್ಯಾನುಷ್ಠಾನಕ್ಕೆ ಕಾರ್ಯ ತತ್ಪರವಾದಾಗ ಮಾತ್ರ ಆ ದಿನದ ಆಚರಣೆಯು ಸಾರ್ಥಕ ವಾಗುತ್ತದೆ ಎಂದು ಎಸ್. ಡಿ. ಎಮ್ ಪದವಿ ಪೂರ್ವ ಕಾಲೇಜಿನ ಪ್ರಚಾರ್ಯರಾದ ಪ್ರಮೋದ್ ಕುಮಾರ್ ಅಭಿಪ್ರಾಯ ಪಟ್ಟರು.
ಅವರು ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಯಾವುದೇ ಆಚರಣೆಗಳು ಕೇವಲ ಆಚರಣೆಗಷ್ಟೇ ಸೀಮಿತವಾಗಿ ಇರಬಾರದು. ಒಂದು ದಿನದ ಸಂಭ್ರಮ ಕ್ಕೆ ಅಥವಾ ಆಚರಣೆಗೆ ನಾವು ಸೀಮಿತವಾಗಬಾರದು, ಆ ಆಚರಣೆಯ ಹಿನ್ನೆಲೆ ನಮ್ಮ ಮನದಲ್ಲಿ ಗಟ್ಟಿಯಾಗಬೇಕು ಹಾಗೂ ಅದು ನಿರಂತರವಾಗಿರಬೇಕು, ಸಸಿ ನಾಟಿ ಮಾಡಿ ಅದನ್ನು ಹಾಗೆಯೇ ಬಿಡಬಾರದು ಅದರ ಬಗ್ಗೆ ನಿರಂತರ ಕಾಳಜಿ ವಹಿಸಿ ತಮ್ಮದೇ ಸ್ವಂತ ಎನ್ನುವ ರೀತಿಯಲ್ಲಿ ಅದನ್ನು ನಿರಂತರ ಪೋಷಿಸಬೇಕು ಆವಾಗಲೇ ನಿಮ್ಮ ಕಾರ್ಯ ಸಾರ್ಥಕ ವಾಗುತ್ತದೆ ಹಾಗೂ ಪ್ರಯೋಜನಕಾರಿಯಾಗಿ ಸಮಾಜಕ್ಕೆ ಉಪಯುಕ್ತ ಕೊಡುಗೆ ನೀಡಲು ಸಹಾಯಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಈ ವರ್ಷದ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಕಾರ್ಯ ಚಟುವಟಿಕೆಗಳನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಲಾಯಿತು. ರೋವರ್ಸ್ ಮತ್ತು ರೇಂಜರ್ಸ್ ಲೇಡಿರ್ಸ್ ಗಳಾದ ಲಕ್ಷ್ಮೀಶ್ ಭಟ್ ಮತ್ತು ಅಂಕಿತಾ ಎಮ್ ಕೆ ಹಾಗೂ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ರಾಜು ಎ ಎ ಉಪಸ್ಥಿತರಿದ್ದರು.