23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹಿರಿಯ ನಾಗರೀಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಪೀಢರ್ ಅಳವಡಿಸಿ, ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರ ಆಗ್ರಹ

ಬೆಳ್ತಂಗಡಿ: ಮೆಸ್ಕಾಂ ಅಧಿಕಾರಿಗಳು ಹಾಗೂ ಪವರ್‌ಮ್ಯಾನ್‌ಗಳು ಗ್ರಾಹಕರಿಗೆ ಸಮರ್ಪಕ ಮಾಹಿತಿ ನೀಡಬೇಕು. ಗ್ರಾಹಕರಿಗೆ ಉತ್ತಮ ಸೇವೆಯನ್ನು ಸದಾ ನೀಡಬೇಕು. ಜನರ ಸಹಕಾರದೊಂದಿಗೆ ಮಳೆಗಾಲದ ಮೊದಲು ಬಿಡುವಿರುವ ಸಮಯದಲ್ಲಿ ತಂತಿಗಳ ಮೇಲೆ ಬಾಗಿಕೊಂಡಿರುವ ಮರದ ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದರು.

ಅವರು ಬೆಳ್ತಂಗಡಿ ಮೆಸ್ಕಾಂ ಕಾರ್ಯ ಮತ್ತು ಪಾಲನಾಶಾಖೆಯಲ್ಲಿ ಅವರ ಅಧ್ಯಕ್ಷತೆಯಲ್ಲಿ ಫೆ.೨೭ರಂದು ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಹಿರಿಯ ನಾಗರೀಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ:
ಎಲ್ಲಾ ಸರಕಾರಿ ಕಚೇರಿಗಳಲ್ಲಿ ಪ್ರತಿದಿನ ಜನರು ಸಾಲು ನಿಂತು ಮಾಹಿತಿ, ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಆಗಾಗಿ ದಾಖಲೆ ಪಡೆಯಲು ಕೆಲವು ಹೊತ್ತು ತಗುಲುತ್ತಿತ್ತು. ಇದು ಹಿರಿಯ ನಾಗರಿಕರಿಗೆ ತೊಂದರೆ ಯಾಗುತ್ತಿತ್ತು. ಎಲ್ಲಾ ಇಲಾಖೆಗಳಲ್ಲಿ ಹಿರಿಯನಾಗರೀಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಸರಕಾರದ ಸುತ್ತೋಲೆ ಇದ್ದರೂ ಮೆಸ್ಕಾಂ ಇಲಾಖೆಯಲ್ಲಿ ಈ ಸುತ್ತೊಲೆಯ ಪಾಲನೆ ಆಗುತ್ತಿಲ್ಲ. ಇದರಿಂದ ಹಿರಿಯ ನಾಗರೀಕರಿಗೆ ತೊಂದರೆ ಆಗುತ್ತಿದೆ ಎಂದು ಬೆಳ್ತಂಗಡಿ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರೊಬ್ಬರು ಕಳವಳ ವ್ಯಕ್ತಪಡಿಸಿದರು. ಎಲ್ಲಾ ಇಲಾಖೆಗಳಲ್ಲಿ ಹಿರಿಯನಾಗರೀಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂಬ ಸುತ್ತೋಲೆ ಇದೆ ಆಗಾಗಿ ತಕ್ಷಣವೇ ಇಲಾಖೆಯಲ್ಲಿ ಹಿರಿಯ ನಾಗರೀಕರಿಗೆ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕು ಎಂದು ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನಿಯಮಿತವಾಗಿ ವಿದ್ಯುತ್ ಕಡಿತ:
ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಪೀಢರ್ ಅಳವಡಿಸಿ:
ಬೆಳ್ತಂಗಡಿಯಲ್ಲಿ ವ್ಯಾಪಾರಸ್ಥರು, ಕೈಗೋರಿಕೋದ್ಯಮಿಗಳು, ವ್ಯವಹಾರಸ್ಥರು ಆದ ನಾವು ಹಲವು ವರ್ಷಗಳಿಂದ ವ್ಯಾಪಾರ ವ್ಯವಹಾರಗಳನ್ನು ನಡೆಸುತ್ತಾ ಬಂದಿರುತ್ತೇವೆ. ತಮ್ಮ ಇಲಾಖೆಗೆ ಅತ್ಯಧಿಕ ಕಂದಾಯ ನಮ್ಮಿಂದಲೇ ಪಾವತಿಯಾಗುತ್ತಿದೆ. ಕೆಲ ಸಮಯಗಳಿಂದ ಅನಿಮಿಯತವಾಗಿ ವಿದ್ಯುತ್ ಕಣ್ಣುಮುಚ್ಚಾಲೆಯಾಡುತ್ತಿರುವುದು ನಮಗೆ ತುಂಬ ತೊಂದರೆಯಾಗುತ್ತಿದೆ. ವ್ಯಾಪಾರ, ವ್ಯವಹಾರ. ಕಾರ್ಖಾನೆಗಳು ಮುಂತಾಗಿ ಬಹುಜನರು ಅತ್ಯಧಿಕ ಬಂಡವಾಳ ಹೂಡಿಕೊಂಡು ವ್ಯವಹಾರ ನಡೆಸುತ್ತಾ, ವಿದ್ಯುತ್ ಇಲ್ಲದ ಸಮಯದಲ್ಲಿ ಜನರೇಟರ್‌ಗೆ ಡಿಸೆಲ್ ಮುಂತಾದ ಖರ್ಚುಗಳಿಂದ ಆರ್ಥಿಕವಾಗಿ ಹೊರೆಯಾಗಿದ್ದು, ಈಗ ಈ ಸಮಸ್ಯೆಯಿಂದಾಗಿ ಬಹಳಷ್ಟು ಕಷ್ಟ ನಷ್ಟಗಳಿಗೆ ಒಳಗಾಗುತ್ತಿದ್ದೇವೆ. ಈ ಮೊದಲು ಇಡೀ ದಿನ ವಿದ್ಯುತ್ ಕಡಿತಗೊಂಡಲ್ಲಿ ಮೊದಲೇ ಆ ಬಗ್ಗೆ ಪ್ರಕಟಣೆ ಕೊಡುವ ರೂಢಿಯಿತ್ತು. ಆದರೆ ಅದು ಈಗ ಕಾಣುತ್ತಿಲ್ಲ ಮತ್ತು ಮುಖ್ಯವಾಗಿ ಬೆಳಗಿನ ಸಮಯ ಒಂದು ಗಂಟೆಯಲ್ಲಿ ಹಲವು ಬಾರಿ ವಿದ್ಯುತ್ ಕಣ್ಣುಮುಚ್ಚಾಲೆಯಾಡುತ್ತಿರುವುದು ನಮ್ಮ ಉಪಕರಣಗಳಿಗೆ ಕೂಡಾ ತೊಂದರೆಯನ್ನುAಟುಮಾಡುತ್ತಿದೆ. ಉಜಿರೆ ಪ್ರದೇಶಗಳಲ್ಲಿ ಕಾಮಗಾರಿ ನಡೆಯ ಬೇಕಿದ್ದರೂ ಬೆಳ್ತಂಗಡಿ ನಗರದ ವಿದ್ಯುತ್ ಕಡಿತವಾಗುತ್ತಿದೆ. ಹಾಗಾಗಿ ಮುಖ್ಯವಾಗಿ ಬೆಳ್ತಂಗಡಿ ನಗರಕ್ಕೆ ಒಂದು ಫೀಡರ್ ಅಳವಡಿಸುವುದು ಹಾಗೂ ಗುರುವಾಯನಕೆರೆಯಿಂದ ಬೆಳ್ತಂಗಡಿ ನಗರಕ್ಕೆ ಪ್ರತ್ಯೇ ಯು.ಜಿ. ಕೇಬಲ್ ಅಳವಡಿಸಿ ಈ ಸಮಸ್ಯೆಗೆ ಮುಕ್ತಿ ನೀಡುವಂತೆ ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಈಗಾಗಲೇ ರಾ.ಹೆ.ಕಾಮಗಾರಿಯಿಂದ ಯು.ಜಿ.ಕೇಬಲ್ ಅಳವಡಿಕೆ ಕಾಮಗಾರಿ ಕುಂಠಿತಗೊAಡಿದೆ. ಆದ್ದರಿಂದ ಉಜಿರೆಯ ನಿನ್ನಿಕಲ್ಲು ಸಬ್‌ಸ್ಟೇಷನ್ ಅರಣ್ಯ ಅನುಮತಿ ಒಂದೇರಡು ದಿನಗಳಲ್ಲಿ ದೊರೆಯುತ್ತದೆ. ಇದರ ಬಳಿಕ ಕಾಮಗಾರಿ ತ್ವರಿತವಾಗಿ ಸಾಗಲಿದೆ. ಮುಂಗಾರು ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳ್ಳುವ ನೀರೀಕ್ಷೆ ಹೊಂದಲಾಗಿದೆ ಆಗ ಈ ಸಮಸ್ಯೆ ಕ್ಷೀಣಿಸುತ್ತದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಪರೀಕ್ಷಾ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ, ಲೋ ವಾಲ್ಟೇಜ್, ರಸ್ತೆ ಬದಿ ಚರಂಡಿಯಲ್ಲಿ ವಿದ್ಯುತ್ ಕಂಬ, ಹಳೆ ತಂತಿ ಬದಲಾವಣೆ, ವಿದ್ಯುತ್ ಪರಿವರ್ತಕ ಅಳವಡಿಕೆ, ತಂತಿ ಮೇಲೆ ಬಾಗಿರುವ ಮರದ ಕೊಂಬೆಗಳನ್ನು ಕಡಿಯುವುದು, ಮನೆಗಳಿಗೆ ಹೊಸ ಕನೆಕ್ಷನ್ ಸಹಿತ ಹಲವು ವಿಚಾರಗಳನ್ನು ಗ್ರಾಹಕರು ಅಧ್ಯಕರ ಗಮನಕ್ಕೆ ತಂದರು. ೩೨ ಲಿಖಿತ ಅರ್ಜಿಗಳು ಹಾಗೂ ೧೨ ದೂರವಾಣಿ ಕರೆ ಮೂಲಕ ಗ್ರಾಹಕರು ಮನವಿ ಸಲ್ಲಿಸಿದರು.

ಬಂಟ್ವಾಳ ವಿಭಾಗ ಕಾರ್ಯನಿರ್ವಾಹಕ ಇಂನಿಯರ್ ಸಂತೋಷ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ ಹಾಗೂ ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಮಾಲಾಡಿ ಉಪಸ್ಥಿತರಿದ್ದರು.

Related posts

ಉದ್ಯಮಿ ಎ.ಸಿ.ಕುರಿಯನ್ ರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಎ.11: ಕುಡುಮೇರು ಮನೆಯ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

Suddi Udaya

ಮನೆಯಂಗಳದಲ್ಲಿ ನಿಂತಿದ್ದ ಕನ್ಯಾಡಿ ಅಂಡಿರ್‌ಮಾರ್ ನಿವಾಸಿ ಮಂಜಪ್ಪ ನಾಯ್ಕರ ಮೇಲೆ ಚಿರತೆ ದಾಳಿ: ಕಾಲಿಗೆ ಕಚ್ಚಿ ಗಂಭೀರ ಗಾಯ- ಬೆಳ್ತಂಗಡಿ ಆಸ್ಪತ್ರೆಗೆ ದಾಖಲು

Suddi Udaya

ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಭೆ: ಅಡಕೆ ನಿಷೇಧದ ಆತಂಕ ನಿವಾರಣೆಗೆ ಪ್ರಯತ್ನ

Suddi Udaya

ಸಿರಿ ಕೇಂದ್ರ ಕಛೇರಿಗೆ ಡಿ. ವೀರೇಂದ್ರ ಹೆಗ್ಗಡೆ ದಂಪತಿ ಭೇಟಿ

Suddi Udaya

ಕಲ್ಮಂಜ : ಶ್ರೀ ಬದಿನಡೆ ಕ್ಷೇತ್ರದಲ್ಲಿ ವೀರ ಯೋಧರ ರಕ್ಷಣೆಗಾಗಿ ವಿಶೇಷ ಪೂಜೆ, ಪ್ರಾರ್ಥನೆ

Suddi Udaya
error: Content is protected !!