ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಧರ್ಮಸ್ಥಳ, ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿ ಬೆಳ್ತಂಗಡಿ ಮತ್ತು ಗುರುವಾಯನಕೆರೆ, ಧರ್ಮಸ್ಥಳ ದೇವಳ ಕಚೇರಿ ನೌಕರರು ಧರ್ಮಸ್ಥಳ ರಂಗಶಿವ ಕಲಾ ಬಳಗ ಹಾಗೂ ಗ್ರಾಮಸ್ಥರ ಇವರ ಸಹಯೋಗದೊಂದಿಗೆ ನೇತ್ರಾವತಿ ನದಿ ಸ್ವಚ್ಛತೆ ಕಾರ್ಯಕ್ರಮವು ಜೂ 8 ರಂದು ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ ಕೆ ಡಿ ಆರ್ ಡಿ ಪಿಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್ ಹೆಚ್ ಮಂಜುನಾಥ್ ರವರು ಮಾತನಾಡಿ” ಡಾ.ಹೇಮಾವತಿ ಹೆಗ್ಗಡೆಯವರ ಆಶಯದಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದೇವೆ. ಜನರು ತ್ಯಾಜ್ಯವನ್ನು ಕಡಿಮೆ ಮಾಡುವಲ್ಲಿ ಚಿಂತನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರೂ ಶೆಟ್ಟಿ, ಉಡುಪಿ ಎಸ್ ಕೆ ಡಿ ಆರ್ ಡಿ ಪಿ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ, ಜನಜಾಗೃತಿ ಪ್ರಾದೇಶಿಕ ನಿರ್ದೇಶಕರು ವಿವೇಕ್ ವಿನ್ಸೆಂಟ್ ಪಾಯಸ್, ಬೀಡಿನ ರಾಜೇಂದ್ರ ದಾಸ್, ದೇವಳ ವಿಭಾಗದ ಮಲ್ಲಿನಾಥ್, ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಯೋಜನೆ, ಶೌರ್ಯ, ದೇವಳ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡ ಸ್ವಚ್ಛತಾ ಕಾರ್ಯವು ಆರು ತಂಡಗಳಾಗಿ ವಿಂಗಡಿಸಿ ಇಲ್ಲಿಯವರೆಗೆ ಮೂರು ಲೋಡ್ ಕಸ ವಿಲೇವಾರಿ ಮಾಡಲಾಯಿತು. ನೇತ್ರಾವತಿಯ ರಸ್ತೆಯ ಬದಿಯಲ್ಲಿರುವ ಕಸ, ಸ್ನಾನಘಟ್ಟದ ಪರಿಸರ, ನೇತ್ರಾವತಿಯ ಸುದೆಗಂಡಿಯ ಪರಿಸರ, ಸೇತುವೆಯ ಕೆಲಭಾಗದಲ್ಲಿರುವ ಪರಿಸರವನ್ನು ಸ್ವಚ್ಚ ಮಾಡುವಲ್ಲಿ ಸಿಬ್ಬಂದಿಗಳು ನಿರತರಾಗಿದ್ದಾರೆ.
ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಕಾರ್ಯಕ್ರಮ ನಿರೂಪಿಸಿದರು. ಎಸ್ ಕೆ ಡಿ ಆರ್ ಡಿ ಪಿ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ಧನ್ಯವಾದವಿತ್ತರು.