30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಬೆಳ್ತಂಗಡಿ ವತಿಯಿಂದ ವಾಣಿ ಆಂ.ಮಾ. ಶಾಲೆಯಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆಯ ಸ್ಪರ್ಧೆಗಳ ಪ್ರಶಸ್ತಿ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ : ಜೂ 5 ರಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಡೆಸಿದ ಚಿತ್ರಕಲಾ ಸ್ಪರ್ಧೆಯ ವಿಜೇತರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಪ್ರೌಢಶಾಲಾ ವಿಭಾಗದಿಂದ 9ನೇ ತರಗತಿಯ ಆಶೀಶ್ ಪಿ. ಆರ್ ಪ್ರಥಮ, 10ನೇ ತರಗತಿಯ ಸೃಷ್ಟಿ ಎಸ್ ದ್ವಿತೀಯ ಮತ್ತು ಅಭಿಜ್ಞ ತೃತೀಯ ಬಹುಮಾನ ಪಡೆದಿರುತ್ತಾರೆ.

ಪ್ರಾಥಮಿಕ ಶಾಲಾ ವಿಭಾಗದಿಂದ 7ನೇ ತರಗತಿಯ ದಿಶಾ ಪ್ರಥಮ ಸ್ಥಾನ, 7ನೇ ತರಗತಿಯ ಧನಲಕ್ಷ್ಮೀ ದ್ವಿತೀಯ ಸ್ಥಾನ ಮತ್ತು 6ನೇ ತರಗತಿಯ ವರ್ಷಿತ್ ಬಿ. ಶೆಟ್ಟಿ ತೃತೀಯ ಬಹುಮಾನ ಪಡೆದಿರುತ್ತಾರೆ.

ಪ್ರಶಸ್ತಿಗಳನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ಶಂಕರ್ ರಾವ್ ಕಾರ್ಯದರ್ಶಿ ಸುಧೀರ್ ಕೆ. ಎನ್ ನೀಡಿದರು.

ಕಾರ್ಯಕ್ರಮದಲ್ಲಿ ವಾಣಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಲಕ್ಷೀ ನಾರಾಯಣ ಕೆ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಹಾಸಿನಿ ಮತ್ತು ಶಾಲಾ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.

Related posts

ಸೆ.27-28: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ

Suddi Udaya

ತೋಟತ್ತಾಡಿ : ಈಶ್ವರ್ ಗೌಡ ಪಿ. ಎಚ್. ನಿಧನ

Suddi Udaya

ಉಜಿರೆಯಲ್ಲಿ ಸರಣಿ ಅಪಘಾತ, ಐದು ವಾಹನಗಳು ಜಖಂ

Suddi Udaya

ಕಾಂಗ್ರೆಸ್ ನ ಸಕ್ರೀಯ ಕಾರ್ಯಕರ್ತೆ ಸಾವಿತ್ರಿ ಬಿಜೆಪಿ ಸೇರ್ಪಡೆ

Suddi Udaya

ಲಾಯಿಲ: ಕುಂಟಿನಿ ಸ.ಕಿ.ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya
error: Content is protected !!