ಗುಂಡೂರಿ:ಪುಂಜಾಲಕಟ್ಟಯ ದೇವಸ್ಥಾನದಲ್ಲಿ ಬ್ರಹ್ಮೋಪದೇಶದ ಪಡೆದ ವಟುವಿನ ಪ್ರಯುಕ್ತ ಸೇವಾಶ್ರಮದಲ್ಲಿಆಶ್ರಮವಾಸಿಗಳಿಗೆ ವೃಷ್ಟಾನ್ನ ಭೋಜನ ನೀಡಲಾಯಿತು. ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಗೆ ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನದ ವತಿಯಿಂದ ಗೌರವ ಧನವನ್ನು ನೀಡಿ ಸಮ್ಮಾನಿಸಲಾಯಿತು
ವೇಣೂರು ಪುನರ್ನವ ಪತಂಜಲಿ ಉತ್ಪನ್ನಗಳ ಮಳಿಗೆಯ ಮಾಲೀಕರಾದ ರಾಮಚಂದ್ರ ನಾಯಕ್ ರವರ ಮೊಮ್ಮಗ ಮಾ.ವಿಘ್ನೇಶ್ ರವರ ಬ್ರಹ್ಮೋಪದೇಶವು ಶಾಸ್ತ್ರೋಕ್ತವಾಗಿ ಪುಂಜಾಲಕಟ್ಟೆ ದೇವಸ್ಥಾನದಲ್ಲಿ ನೆರವೇರಿದ್ದು ಸೇವಾಶ್ರಮದ ಆಶ್ರಮವಾಸಿಗಳಿಗೆ ವಟುವಿನ ತಂದೆ ನಾಗೇಶ್ ನಾಯಕ್, ತಾಯಿ ಸ್ವಾತಿ ನಾಯಕ್ ಇವರ ಉಪಸ್ಥಿತಿಯಲ್ಲಿ ಊಟೋಪಚಾರ ನೀಡಿ ಆಶ್ರಮವಾಸಿಗಳನ್ನು ಸಂತೋಷಗೊಳಿಸಲಾಯಿತು.
ಮಿಯಲಾಜೆ ಸೇಸಪ್ಪ ಪೂಜಾರಿ ಮತ್ತು ವಿನೋದಾ ದಂಪತಿ ಪುತ್ರಿ ಅರ್ಪಿತಾರವರು ವೇಣೂರಿನ ಸರಕಾರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ 93% ಅಂಕವನ್ನು ಪಡೆದು ಮುಂದಿನ ವಿದ್ಯಾಭ್ಯಾಸಕ್ಕಾಗಿ ವಾಮದಪದವು ಕಾಲೇಜಿಗೆ ಸೇತಿದ್ದು ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ನಿಂದ ವಿದ್ಯಾರ್ಥಿನಿಗೆ ಗೌರವ ಧನವಾಗಿ ರೂ 5 ಸಾವಿರ ನೀಡಲಾಯಿತು. ನಿವೃತ್ತ ಯೋಧ ಮತ್ತು ಪುನರ್ನವ ಪತಂಜಲಿ ಉತ್ಪನ್ನಗಳ ಮಳಿಗೆಯ ಮಾಲೀಕರಾದ ರಾಮಚಂದ್ರ ನಾಯಕ್ ರವರು ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸೇವಾಶ್ರಮ ದ ಅಭಿವೃದ್ಧಿ ಸಮಿತಿ ಸದಸ್ಯ ಪ್ರವೀಣ್ ಆಚಾರ್ಯ ನೇರಳ ಪಲ್ಕೆ,ಸವಿತಾ ನಾಯಕ್,ಸಂಜೀವ ನಾಯ್ಕ್,ವೈಭವ ನಾಯಕ್, ಪ್ರಮೋದ್ ಶೆಟ್ಟಿ ಸಿರಿಮನೆ ವೇಣೂರು,ಶ್ರೀಮತಿ ಸಹನಾ ಭಟ್,ಸದಾನಂದ ದೇವಾಡಿಗ,ಸತೀಶ್ ,ಮತ್ತಿತ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನದ ಹೊನ್ನಯ್ಯ ಕಾಟಿಪಳ್ಳ ರವರು ನಿರೂಪಿಸಿದರು.