ಬೆಳ್ತಂಗಡಿ ಅರಣ್ಯ ಇಲಾಖೆ, ವಾಣಿ ಶಾಲೆ ಬೆಳ್ತಂಗಡಿ, ಸೈಂಟ್ ಮೇರಿಸ್ ಶಾಲೆ ಲಾಯಿಲ, ಸರಕಾರಿ ಪ್ರಾಥಮಿಕ ಶಾಲೆ ಪಡ್ಲಾಡಿ ಇವುಗಳ ಆಶ್ರಯದಲ್ಲಿ ಬೀಜ ಬಿತ್ತೋತ್ಸವ ಕಾರ್ಯಕ್ರಮವನ್ನು ಲಾಯಿಲ ಅರಣ್ಯ ಪ್ರದೇಶದಲ್ಲಿ ಜೂ.10 ರಂದು ನಡೆಸಲಾಯಿತು.
ಲಾಯಿಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಆಶಾ ಸಾಲ್ದಾನ ಕಾರ್ಯಕ್ರಮ ಉದ್ಘಾಟಿಸಿದರು.
ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಮಾತನಾಡಿ “ಸಾರ್ವಜನಿಕರು ತಾವು ಉಪಯೋಗಿಸುವ ಯಾವುದೇ ಫಲಗಳ ಬೀಜಗಳನ್ನು ಬಿಸಾಡದೇ ಸಂರಕ್ಷಿಸಿ ಗಿಡಮಾಡಿ ಬೆಳೆಸಬೇಕು. ಮಕ್ಕಳಿಗೆ ಭೌತಿಕ ಮತ್ತು ಭೌಗೋಳಿಕ ಅರಣ್ಯದ ಕುರಿತು ಮಾಹಿತಿಯನ್ನು ನೀಡಿ ಅರಣ್ಯ ಸಂರಕ್ಷಣೆಯ ಬಗ್ಗೆ ಎಳವೆಯಿಂದಲೆ ಅರಿವು ಮೂಡಿಸಬೇಕು. ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳು ಇರುವ ಅರಣ್ಯ ಪ್ರದೇಶ ಪ್ರಕೃತಿಯ ಸಮತೋಲನಕ್ಕೆ ಕಾರಣವಾಗುತ್ತದೆ” ಎಂದು ಹೇಳಿದರು.
ಲಾಯಿಲದ ಸ್ನೇಕ್ ಅಶೋಕ್, ಆರ್ ಎಫ್ ಒ ತ್ಯಾಗರಾಜ್, ಡಿಆರ್ ಎಫ್ ಒ ಗಳಾದ ರವೀಂದ್ರ ಕೆ, ಯತೀಂದ್ರ, ರವೀಂದ್ರ ಅಂಕಲಗಿ, ಭವಾನಿ ಶಂಕರ್, ಹರಿಪ್ರಸಾದ್, ಪೂಜಾ,ರಾಜೇಶ್ ಎಸ್,ರಾಜಶೇಖರ್, ಗಸ್ತು ಅರಣ್ಯ ಪಾಲಕರಾದ ರಾಘವೇಂದ್ರ, ಪಾಂಡುರಂಗ ಕಮತಿ, ಪರಮೇಶ್ವರ್, ಸಂತೋಷ್ ,ಶರತ್, ಅಖಿಲೇಶ್, ಸತೀಶ್, ಸದಾನಂದ್,ಗಪೂರ್, ಪ್ರದೀಪ್ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು. ಸುಮಾರು 10ಹೆಕ್ಟೇರ್ ಪ್ರದೇಶದಲ್ಲಿ 125ಮಂದಿ ಶಾಲಾ ಮಕ್ಕಳ ಸಹಕಾರದಲ್ಲಿ ಬಿತ್ತೋತ್ಸವ ನಡೆಯಿತು.