ಮೇಲಂತಬೆಟ್ಟುವಿನ ಮನೆಯಂಗಳದಲ್ಲಿ ಭಾರಿಗಾತ್ರದ ಕಾಳಿಂಗ ಸರ್ಪ: ಕಾಳಿಂಗ ಸರ್ಪವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್

Suddi Udaya

ಮೇಲಂತಬೆಟ್ಟು: ಇಲ್ಲಿನ ಔಡೋಡಿಯ ದಯಾನಂದ ಎಂಬವರ ಮನೆಯಂಗಳದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಉರಗ ತಜ್ಞ ಅಶೋಕ್ ಲಾಯಿಲರವರಿಂದ ಯಶಸ್ವಿಯಾಗಿ ರಕ್ಷಿಸಲಾಯಿತು.

ಮನೆಯ ಅಂಗಳದಲ್ಲಿ ಹಾಕಿದ್ದ ತೆಂಗಿನಕಾಯಿ ಸಿಪ್ಪೆಯ ರಾಶಿಯಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಕಂಡು ಮನೆಯವರು ಭಯಭೀತರಾಗಿದ್ದರು.

ಹಲವಾರು ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟು ಹೆಸರುವಾಸಿಯಾದ ಸ್ನೇಕ್ ಅಶೋಕ್ ಲಾಯಿಲ ಅವರನ್ನು ಕೂಡಲೇ ಸಂಪರ್ಕಿಸಿದರು.

ಸ್ನೇಕ್ ಅಶೋಕ್ ಕಾಳಿಂಗವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Leave a Comment

error: Content is protected !!